ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಬ್ಬರು

ವಸುಂಧರಾ ಕದಲೂರು

ಕುದಿ ಎಣ್ಣೆಯೊಳಗೆ ಥಕತೈ
ಕುಣಿದು ಕೆಂಪಗಾದ ಕಬಾಬುಗಳ
ತುಂಡು ಈರುಳ್ಳಿಯೊಡನೆ
ಸಾಲಂಕೃತ ಅವನ ಮುಂದೆ
ಮೆರೆಯುತ್ತಾ ನಾಲಗೆಯ ಮೇಲೆ
ನಲಿಯುತ್ತಾ ಬಾಯ್ದುಂಬಿ ತನು ತುಂಬಿ
ಅವನು ಶರಣಾಗಿ ಬಿಡುವ ಸೂಚನೆ
ಸಿಕ್ಕುತ್ತಿದ್ದಂತೆಯೇ ಈಕೆ ಸಿದ್ಧವಾಗುತ್ತಾಳೆ
ಹಬೆಯಾಡುವ ಕಬಾಬಿನ ತುಂಡುಗಳನು
ಮತ್ತೆ ಬಡಿಸಲು.

ಆ ಸುಗಂಧದ ಪರಿಮಳದ ಮೊಳಕ್ಕೆ
ಮೂವತ್ತಿರಲಿ ಐವತ್ತಾದರೂ ಕೊಟ್ಟು
ತಂದವಳು ಮನೆಯಂಗಳದ ಬಿಡಿ
ಹೂವಿನೊಡನೆ ಸೇರಿಸಿ, ಘಮಲು ಊದಿನ
ಕಡ್ಡಿಯ ತೆಳುಹೊಗೆಯೊಡನೆ ಬೆರೆತ
ಸುವಾಸನೆಗೆ ಜೊತೆ ಮಾಡಿ ಆತನಿಗೆ
ಕೊಟ್ಟು, ಆತ ಹಚ್ಚುವ ಕರ್ಪೂರದ
ಆರತಿಯ ಬೆಳಕು ದೇವರ ಕೋಣೆಯ
ಹೊಸ್ತಿಲು ದಾಟಿ ಎಂದೂ ಹೊರ ಚೆಲ್ಲದೆ,
ಇವಳತ್ತ ಬೆಳಕು ಮೂಡದೇ ಇದ್ದರೂ…
ದೈವ ಸಾಕ್ಷಾತ್ಕಾರದ ಪ್ರಾರ್ಥನೆಗೆ
ಈಕೆಯೂ ದನಿಗೂಡಿಸುತ್ತಾಳೆ. ನಿತ್ಯವೂ
ಅರಳಿ ಬಾಡುವ ಹೂವಂತೆ…

ಈಕೆ ಅದೇ ಹಳೆಯ ರಿವಾಜಿನ
ಹುಡುಗಿ, ಆತ ಈಕೆಯಂತವನೇ
ಹಳೆಯವನು ಮತ್ತೂ ಎಂದೂ
ಬದಲಾಗಲಾಗದವನು…

‍ಲೇಖಕರು Avadhi

16 September, 2020

4 Comments

  1. T S SHRAVANA KUMARI

    ಇಷ್ಟವಾಯಿತು

  2. Smitha Amrithraj.

    ಚೆಂದದ ಪದ್ಯ ವಸುಂಧರಾ

  3. km vasundhara

    ಧನ್ಯವಾದಗಳು

  4. km vasundhara

    ಧನ್ಯವಾದಗಳು ಸ್ಮಿತಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading