ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇಪ್ಪತೊಂದನೆಯ ಶತಮಾನದ ಗರತಿಯರು ನಾವು’ – ಪ್ರತೀಭಾ ಕಾಗೆ

ಪ್ರತೀಭಾ ಕಾಗೆ

ಹದಿನಾರು ಮೊಳದ ಸೀರೆಯನುಟ್ಟು
ಅದಕೊಂದು ಕಚ್ಚೆಯನುಟ್ಟು
ಹೊತ್ತು ಏರುವ ಮೊದಲೆ
ನಸುಕಿನ ಜಾವದ ಹೊತ್ತು
ಕೈಯಲಿಹುದು ಬಿಸುಕಲ್ಲು
ಸುಂಯ್ಯ ,ಸುಂಯ್ಯ ರಾಗವಾಗಿ
ಅದಕೊಂದು ರಾಗ ಬೆರೆಸಿ
ತಲೆಯ ಮೇಲೆ ಸೆರಗು
ಹೊದ್ದು ಕಣ್ಣ ತುಂಬಾ
ನಾಚಿಕೆಯಿಟ್ಟು
ಹಾಡುತಿಹಳು ಗರತಿ
ಆ ನಿಶಬ್ಧತೆಯಲಿ
ನಿನ್ನ ರಾಗವೇ ಸುಗಮ
ಸಂಗೀತವಾಗಿ
ಹಟ್ಟಿಯಲ್ಲಿಯ ದನಕರುಗಳು
ಅಂಬಾ ಎಂದು ಕೂಗುತಿಹವು
ನಿನ್ನ ಧ್ವನಿಯ ಕೇಳಿ
ಹೊತ್ತು ಎರುತಿಹುದು
ಯಜಮಾನ ಹುಡುತಿಹನು
ಚಕ್ಕಡಿಯ ಬುತ್ತಿ
ಒಂದು ಕಟ್ಟಬೇಕು

ರೊಟ್ಟಿ,ಹಸಿಖಾರ ಚಟ್ನಿ
ತಿಂದು ಹೊಗಳಬೇಕು
ನನ್ನ ಅಷ್ಟಾದರೆ
ಆದಿತು ನನ್ನ
ಜೀವನ ಪಾವನ
ಅದು ಸಾಲದು ನಮಗೆ
ನಾವು ಇಪ್ಪತೊಂದನೆಯ
ಶತಮಾನದ ಗರತಿಯರು
ಮನೆಯಲ್ಲದೆ ಹೊರಗು
ದುಡಿಯುವವರು ಗಂಡನಿಗೆ
ಸಮನಾಗಿ
ಯಾವುದರಲ್ಲಿ ಕಡಿಮೆ
ಹೇಳಿ ವೈದ್ಯರು,ಲಾಯ್ರರು
ಶಿಕ್ಷಕಿಯರು ಮೇಲಾಗಿ
ಪೊಲಿಸರು
ಕಂಡೆಕ್ಟರು ನಾವಾಗಿಹೆವು
ರಾಜಕಾರಣಿಗಳು ನಾವು
ಸಾಹಿತಿಗಳು ನಾವು
ಗಗನ ಯಾತ್ರಿಗಳಿಹರು
ನಮ್ಮಲ್ಲಿ ಎಲ್ಲದರಲ್ಲೂ
ನಾವು ಸರಿಸಮನಾಗಿರಲು
ಆದರು ನೀಮಗೆಕಿಲ್ಲ
ನಮ್ಮ ಗೌರವ
ಅತ್ಯಾಚಾರದಂತಹ ನೋವು
ನಮಗೇಕೆ
ನೀಮಗಾರು ಅಕ್ಕತಂಗಿಯರಿಲ್ಲವೇ?
 

‍ಲೇಖಕರು G

22 June, 2014

3 Comments

  1. mmshaik

    prastuta vidyamanadalittu heNeda kavite..chennaagide..madam.

  2. Aarvind

    Good one.

  3. Renuka Shripad Bada

    kavite chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading