ಸರ್ವಋತು ಜಲಪಾತ,
ಆತ್ಮಘಾತುಕ ಯೋಜನೆ
ಪ್ರಸನ್ನ
ಕರ್ನಾಟಕ ಸರಕಾರವು ಜೋಗದಲ್ಲಿ ಆರಂಭಿಸಲು ಹೊರಟಿರುವ ಸರ್ವಋತು ಜಲಪಾತ ಯೋಜನೆಯು ಆತ್ಮಘಾತುಕವಾದದ್ದಾಗಿದೆ.
ಗುಡ್ಡಕ್ಕೆ ಕಲ್ಲು ಹೊರುವವರು ಎಂದು ಮೂರ್ಖರನ್ನು ಕನ್ನಡದ ಗಾದೆ ಮಾತು ಅಣಕಿಸುತ್ತಿತ್ತು. ಅದನ್ನೇ ಕೊಂಚ ತಿದ್ದಿ ಅನುಷ್ಠಾನಗೊಳಿಸಲು ಹೊರಟಿರುವ ರಾಜ್ಯ ಸರಕಾರವು, ಜೋಗದ ಗುಂಡಿಯ ನೀರನ್ನು ಪಂಪ್ ಮಾಡಿ, ಪುನಃ ಗುಡ್ಡಕ್ಕೆ ಹತ್ತಿಸಿ, ಜಲಪಾತದಲ್ಲಿ ಹರಿಬಿಡ ಹೊರಟಿದೆ.
ಇದು ಮೂರ್ಖತನದ ಪರಮಾವದಿಯಲ್ಲದೆ ಬೇರೇನೂ ಅಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ, ನೀರು ನದಿ ಕಣಿವೆ ಕಾಡುಗಳನ್ನು ಅದರ ಪಾಡಿಗೆ ಹರಿಬಿಡದೆ, ಲಾಭಬಡುಕ ಉದ್ಯಮಿಗಳ ಮರ್ಜಿಗೆ ಒಪ್ಪಿಸ ಹೊರಟಿರುವ ಕರ್ನಾಟಕ ಸರಕಾರದ ನಡೆಯು ಖಂಡನಾರ್ಹವಾಗಿದೆ.
ಸರ್ವಋತು ಜಲಪಾತ ಯೋಜನೆಗೆ ಖಾಸಗಿಯವರೇ ಸಂಪೂರ್ಣವಾಗಿ ಬಂಡವಾಳ ಹಾಕಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ರಾಜ್ಯಸರಕಾರವನ್ನು ಪ್ರಜೆಗಳು ಪ್ರಶ್ನೆ ಮಾಡಬಯಸುತ್ತಾರೆ, ಖಾಸಗಿ ಬಂಡವಾಳವೆಂಬುದು ಎಂದಿನಿಂದ ಜನಪರವೂ ಜೀವಪರವೂ ನಿಸರ್ಗಪರವೂ ಆಯಿತು.





Certainly, anything NATURAL is beautiful but not one which is made to look natural.
ಅಲ್ಲಿ ಅನೈಸರ್ಗಿಕ ಬೆಳವಣಿಗೆಗಳಿಂದ ತೊಂದರೆ ಆದರೆ, ಉಡುಪಿಯಲ್ಲಿ ಖಾಸಗಿ “ಸರ್ಕಾರಿ” ಆಸ್ಪತ್ರೆಯಲ್ಲಿ ಚಿಕಿತ್ಸೆ ಫ್ರೀ ಇದೆ!
ಪ್ರಸನ್ನ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. ಇದೆ ಹಣವನ್ನು ಪ್ರವಾಸಿ ತಾಣಗಳ ಮೂಲ ಸೌಕ ರ್ಯ ಅಭಿವೃದ್ಧಿಗೆ ಬಳಸಿದರೆ ಉತ್ತಮವಲ್ಲವೇ? ಈ ನಿಟ್ಟಿನಲ್ಲಿ ನೆರೆಯ ರಾಜ್ಯ ಕೇರಳವನ್ನು ನೋಡಿ ನಾವು ಕಲಿಯುವುದು ಸಾಕಷ್ಟಿದೆ.
ಪ್ರಕೃತಿ ಸೌಂದರ್ಯ ಸಹಜವಾಗಿರಲು ಬಿಡಿ. ಹಾಳು ರಾಜಕೀಯ, ಕೇಡು ಉದ್ಯಮ ಜೋಗದ ಗುಂಡಿಯ ಗುಂಡಿಗೆಗೆ ಗುಂಡು ಹಾಕದಿರಲಿ. ಈ ಪಾಪಕೃತ್ಯಕ್ಕೆ ಈ ನೀಚರು ಮುಂದಾಗದಂತೆ ಎಲ್ಲರೂ ಸಿಡಿದೇಳಬೇಕಿದೆ …ಆರ್.ಶಿವಕುಮಾರಸ್ವಾಮಿ ಕುರ್ಕಿ ಮೊ.೮೯೭೦೯೪೮೨೨೧.