ನಮ್ಮಮ್ಮ ಹೀಗೇನೆ
ಚಂದಿನ
ನೀನೆ ಆರಿಸಿದ
ಕೊತ್ತೊಂಬರಿ ಕಟ್ಟು, ತಾಜಾ ತರಕಾರಿ
ಕೊಳತಿದೆ ಎಂದು
ದಿನವಿಡೀ ಅವನಿಗೆ ಶಪಿಸುವೆ
ಮನೆಗೆಲಸದವಳನ್ನು ಬೆಂಬಿಡದೆ ಕಾಡುವೆ
ಯಾವುದೋ ಸೇಡು ತೀರಿಸಿಕೊಳ್ಳುವಂತೆ
ಮಮ್ಮೊಕ್ಕಳಾದರೂ ಮಕ್ಕಳ ಕಾಳಜಿಯಲ್ಲಿ
ತುಸು ಕರಗದ ನಿನ್ನ ಧಾವಂತ
ಇನ್ನೂ ಜೀವಂತ.
ನಮಗಾಗಿ ಇಡೀ ಜಗವನ್ನೇ ಯುದ್ಧಕ್ಕೆ
ಕರೆಯುವ ನಿನ್ನ ಭಂಡ ಧೈರ್ಯಕ್ಕೊಂದು ಸಲಾಮು
ನಿರ್ಲಜ್ಜೆಯ ಪರಾಕಾಷ್ಠೆ
ನಿನ್ನ ಮಕ್ಕಳ ಬಗ್ಗೆ ಕೊಚ್ಚಿಕೊಳ್ಳುವಾಗ
ನಮಗಾಗಿ ನೀನು ಏನೆಲ್ಲಾ ಆದೆ ಕಣೆ,
ಸುಳ್ಳಿಯಾದೆ,
ಕಳ್ಳಿಯಾದೆ,
ಚಂಡಿ-ಚಾಮುಂಡಿಯಾದೆ.
ನಮಗೆ ದನಕ್ಕೆ ಬಡಿದಂಗೆ ಹೊಡೆದು
ಊರವರನ್ನೆಲ್ಲಾ ಬೆಚ್ಚಿಬೀಳಿಸಿದೆ
ಮಾನ, ಸ್ವಾಭಿಮಾನ ಎಲ್ಲವೂ ಅಡವಿಟ್ಟೆ
ನಿನ್ನ ಕನಸುಗಳಿಗೆ ಕೊಲ್ಲಿಯಿಟ್ಟು
ನಮ್ಮ ಕನಸಿಗೆ ನೀರೆರೆದು
ಸದಾ ಜಾಗರೂಕಳಾಗಿ ಬೆಳೆಸಿ
ನಮಗಿಂತ ಖುಷಿಪಟ್ಟೆ

ಎಂದೂ ಅಳಿಸಲಾಗದಂತೆ ನೆನಪಿದೆ
ಅವರಿತ್ತ ಮುದ್ದೆಸಾರನ್ನು ನಮಗಿಟ್ಟು
ನಾವು ಅದರೊಂದಿಗೆ ಕಾಳಗವಿಟ್ಟಂತೆ
ಕೂಡಲೇ ಕರಗಿಸಿದ ಕ್ಷಣಗಳನ್ನು
ಆಸ್ಥೆಯಿಂದ ಆಸ್ವಾದಿಸಿ
ಚೆಂಬು ನೀರು ಕುಡಿದು
ನೀನು ನಿದ್ರಿಸಿದ ರಾತ್ರಿಗಳಿಗೆ ಲೆಕ್ಕವುಂಟೆ?
ಹಸಿವು
ಅದು ಮಹಾಕ್ರೂರಿ, ಪಾಪಿ!
ನಮ್ಮ ಹಸಿವಲ್ಲಿ ನಿನ್ನ ಹಸಿವಿಗೆ
ಆಗ ಜಾಗವೇ ಇರಲಿಲ್ಲ
ಆದರೂ ನೀನೆಷ್ಟು ಸ್ವಾಥರ್ಿ
ಕುಡುಕ ಅಪ್ಪನ ನೆನಪು
ಒಮ್ಮೆಯಾದರೂ ಸುಳಿಯದಂತೆ,
ಕಾಡದಂತೆ ನೋಡಿಕೊಂಡೆ.
ಅಮ್ಮ
ಎಷ್ಟೋ ಸಲ ನಿನ್ನೊಂದಿಗೆ ಬಹಳ ಕಠುವಾಗಿ ವತರ್ಿಸಿದ್ದೇನೆ
ಕೈಮುಗಿವೆ ನನ್ನ ಕ್ಷಮಿಸು ಬಿಡೆ
ಇನ್ನಾದರೂ ನೆಮ್ಮದಿಯಾಗಿ, ಆರೋಗ್ಯವಾಗಿ,
ನಗುತ್ತಾ ನಮ್ಮೊಂದಿಗೆ ನೂರ್ಕಾಲ ನೂಕಿಬಿಡು.
ನೀನೆಂದೆಂದಿಗೂ ನಮಗೆ
ಸಹನೆಯ ಚಂದಿರ,
ಸ್ಪೂತರ್ಿಯ ಚಿಲುಮೆ,
ಸ್ಥೈರ್ಯದ ಸೂರ್ಯ






AMMA
bhoomigiLida devate..kavana chennaagide..!!!!!!!!
ಚಿತ್ತಾಲರ, ಸಿದ್ಧಲಿಂಗಯ್ಯಾ, ಲಂಕೇಶರ ಅವ್ವ ನೆನಪಾಗುತಿದೆ
ಧನ್ಶವಾದಗಳು…!