ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಜ್ಜೋಡು..!

 

 

 

 

 

****

ರಾಜಕುಮಾರ ಮಡಿವಾಳರ 

ಇಂಥವೇ ಬೇಕು, ಇಂಥ ಬಣ್ಣದವೇ ಮತ್ತು ಇಂಥದೇ ಬ್ರಾಂಡಿನದು ಅಂತ ಕೊಳ್ಳುವವ ನಡೆಯೋದು ಬಿಟ್ಟು ಪ್ರಾಚೀನ ಅನ್ನುವಷ್ಟು ಕಾಲ ಕಳೆದಿರುತ್ತೆ.

ನಿಜ ನಡೆಯಬೇಕಾದವನಿಗೆ ಎಂಥವಾದರೇನು? ಕಿತ್ತೋಗಿರೋವು! Ok, ಯಾವನೋ ಬಿಟ್ಟೋಗಿರೋವು! Ok, ಮೆಟ್ಟು ಮೆಟ್ಟೋಕೆ ಬಂದ್ರೆ ಸಾಕು.

Yes ಇವತ್ತು ಕೋರ್ಟ್ ಹತ್ರ ಮುಪ್ಪಾನು ಮುಪ್ಪ ನಡೆಯಲೂ ಕಷ್ಟ ಪಡುತ್ತಿದ್ದವನ ಕಾಲು ನೋಡಿದೆ. ಅದೆಷ್ಟು ಕ್ಯಾಲೆಂಡರಗಳ ಥಾನು ಥಾನು ಪುಟಗಳ ಮೇಲೆ ಅದೆಷ್ಟೋ ಮೈಲು ನಡೆದ ಕಥೆಗಳ ಹೇಳುತ್ತಿದ್ದವು.  ಒಂದು ಕಾಲಲ್ಲಿ ಹವಾಯಿ ಚಪ್ಪಲಿ ಮತ್ತೊಂದು ಕಾಲಲ್ಲಿ ಚರ್ಮದ ಇಜ್ಜೋಡು!

ಅದ್ಯಾಕೋ ಇದ್ದಕ್ಕಿದ್ದಂತೆ ಅಪ್ಪ ನೆನಪಾಗಿ ಬಿಟ್ಟ.

ನಾವು ಬಡವರಿದ್ದೆವು ನಿಜ ಆದರೆ ನಾನು ಅಕಸ್ಮಾತ ಹರಿದ ಚಪ್ಪಲಿ ಹಾಕಿಕೊಂಡಿದ್ದರೆ ಅಪ್ಪ ಸಹಿಸುತ್ತಿರಲಿಲ್ಲ, ಆಗಿಂದ್ದಾಗಲೇ ಹೊಸ ಚಪ್ಪಲಿ ಕೊಡಿಸುತ್ತಿದ್ದ. ಯಾಕೋ ಕಣ್ಣು ಕದಡಿದಂತಾದವು ಅಜ್ಜನ ಇಜ್ಜೋಡು. ಗೆಳೆಯನೊಬ್ಬನಿಗೆ ನನ್ನ ಬೈಕ್ ಕೀ ಕೊಟ್ಟು ಒಂದಿಷ್ಟು ಹಣ ಕೊಟ್ಟು ಒಂದು ಜೊತೆ ಹೊಸ ಚಪ್ಪಲಿ ತರಿಸಿ ಅಜ್ಜನ ಕಾಲಿಗೆ ತೊಡಿಸಿ ಕಳಿಸಿದೆ. ಅಜ್ಜ ಆ ಕ್ಷಣಕ್ಕೆ ಖುಷಿ ಪಟ್ಟನಾ? ಏನೊಂದು ಮಾತಾಡದೆ ಹೊಸ ಚಪ್ಪಲಿ ಹಾಕಿಕೊಂಡು ಹಳೆ ಇಜ್ಜೋಡು ತನ್ನ ಚೀಲದಲ್ಲಿ ಹಾಕಿಕೊಂಡು ಹೋದ. ಕಿತ್ತೋದ ಚಪ್ಪಲಿ ಅದ್ಯಾಕೆ? ಇಟ್ಟುಕೊಂಡನೋ?

ಈ ಕೋರ್ಟ್ ಟೆನ್ಷನ್ ನನ್ನ ಒಂದೆಡೆ ಅನಾಮತ್ತು ಅಡ್ಡಕೆಡವಿ ಕೊಲ್ಲುತ್ತಿದ್ದರೆ, ಈ ವಿಚಿತ್ರ ಮುಖಗಳು ಮತ್ತೊಂದು ರೀತಿಯಲ್ಲಿ ಕಾಡುತ್ತವೆ.. ಗೆಳೆಯ ಕೊಟ್ಟ ದುಡ್ಡಲ್ಲಿ 100 ರೂಪಾಯಿ ವಾಪಸ್ ಕೊಟ್ಟ, ಯಾಕೆ ಚಪ್ಲಿಗೇಷ್ಟು? ಅಂತ ಕೇಳಿದರೆ ಅಣ್ಣಾ ಎರಡ್ನೂರೈವತ್ತು, ನೀನು ಕೊಟ್ಟ ಮುನ್ನೂರಲ್ಲಿ ಐವತ್ತು ರೂಪಾಯಿ ಉಳಿತು ಆದ್ರೆ ಯಾಕೋ ದುಡ್ಡು ನಾನು share ಮಾಡ್ಕೋಬೇಕು ಅನಿಸುತು please ಅಂದ.

ನಾನು ಗೆಳೆಯನ ಪಾದ ನೋಡಿದೆ, ಇವು ನಡೆಯುವದನ್ನ ಮರೆತಿಲ್ಲ ಅನಿಸಿ ನಕ್ಕು ಸುಮ್ಮನಾದೆ.

‍ಲೇಖಕರು admin

11 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading