ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿರಾ ಹೆಗ್ಡೆ ಕವಿತೆ- ಮಾಧವಿ…

ಡಾ. ಇಂದಿರಾ ಹೆಗ್ಡೆ

ಅರಸನ ಮನೆಯಲ್ಲಿ ಹೆಣ್ಣು ಜನಿಸಬಾರದು.
ಜನಿಸಿದರೆ
ಆಕೆ ವ್ಯವಹಾರಕ್ಕೆ ಸರಕಾಗುವಳು.
ಯುದ್ಧಕಾಲದಲ್ಲು ಪುರಾಣ ಕಾಲದಲ್ಲೂ
ಯುದ್ಧತಡೆಯಲೂ ಅವಳು ದಾಳವಾಗುವಳು,

ಅಯೋಧ್ಯಯ ಅರಸಾದರೇನು? .
ಕಾಶಿರಾಜನಾದರೇನು? ಬೋಜರಾಜನಾದರೇನು
ಮಹಿರ್ಷಿ ವಿಶ್ವಾಮಿತ್ರನಾದರೇನು?

ಆಕೆಯನ್ನು ತೊಡೆಯಿಂದ ತೊಡೆಗೆ ಹಾರಿಸುವರು
ಹಸಿ ಬಾಣಂತಿಯನ್ನು ಮಗುವಿನಿಂದ ಕಸಿದು
ಮೆಲ್ಲುವರು
ಕನ್ಯತ್ವದ ವರ ಎಂಬ ಬೊಗಳೆ!
ಹೆಣ್ಣಿನ ಒಡಲ ಬೇಗುದಿ ಅರಿಯದವ
ಅರಸನಾದರೇನು ಮಹರ್ಷಿಯಾದರೇನು
ಕೊನೆಗೆ ಅಪ್ಪನಾದರೇನು?

ಮಹರ್ಷಿಗಳು ಚಿತ್ರಿಸಿದ್ದ ಪುರಾಣ ಇದು.
ಕಥೆಯೇ ಮನಕಲಕುತ್ತದೆ, ಕರುಳು ಹಿಂಡುತ್ತದೆ.

ಕವಿ ಕಂಡ ಕಾಲದ ಹೆಣ್ಣಿನ ಕಥೆಯಿರಬಹುದು.
ಅದಕ್ಕೊಂದು ಹೆಸರು ‘ಮಾಧವಿ’

ಬಹುರೂಪಿ ಪುಸ್ತಕ ಮಳಿಗೆಯಲ್ಲಿ ಬಹುರೂಪಿ ಆಯೋಜಿಸಿದ್ದ ಶ್ರೀಪಾದ ಭಟ್ ನಿರ್ದೇಶನದ ಮಾಧವಿ ನಾಟಕ ನೋಡಿ ಮನೆಗೆ ಬಂದು ಬರೆದುದು

‍ಲೇಖಕರು Admin

16 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading