ಗೋಡೆ

ದಿವ್ಯ ಆಂಜನಪ್ಪ

ಹುಡುಗನೊಬ್ಬ ಗೋಡೆಗೆ
ತಲೆ ಚಚ್ಚಿಕೊಳ್ಳುತ್ತಿದ್ದ
ರಕ್ತ ಸೋರಿತು
ಗಾಬರಿಯಾಗಿ ದೂರ ಓಡಿ
ಮತ್ತೊಂದು ಗೋಡೆಗೆ
ತಲೆ ಚಚ್ಚಿಕೊಂಡ
ಆಗಲೂ ರಕ್ತ ಒಸರಿತು!
ಹುಡುಗ ಗಂಭೀರನಾದ
ಬೇಕೆಂದೇ ಹೊಸದು ಗೋಡೆ ಹುಡುಕಿ
ಮತ್ತೆ ತಲೆ ಚಚ್ಚಿಕೊಂಡ
ರಕ್ತವೋ ಧಾರಾಕಾರ ಸುರಿಯಿತು!
ಖುಷಿಯಿಂದ ನಕ್ಕ….
ಅದೇನನ್ನೋ ಕಂಡುಕೊಂಡಂತೆ!
‘ಗೋಡೆಗಳೊಳಗೂ ರಕ್ತ ಹರಿಯುತ್ತದೆ
ನೊಂದಾಗ ಅದು ಹೊರ ಹೊಮ್ಮುತ್ತದೆ’!
‘ನನ್ನ ನೋವ ನೋಡಿ ಅದಕ್ಕೂ ನೋವಾಗಿದೆ’,
‘ನನಗಾಗಿ ನೋಯುವ ಒಂದಾಂದರೂ ಭಾವವಿದೆ
ಅದು ಗೋಡೆಯೇ ಆಗಿದೆ’!
ದೀರ್ಘ ಕಾಲ ನಕ್ಕು ಮನೆಯೊಳಗೆ ನಡೆದ
ತನ್ನವರೆಲ್ಲರನ್ನೂ ಮತ್ತೂ ಪ್ರೀತಿಸುತ್ತಿದ್ದಾನೆ
ಗೋಡೆ ಮುಟ್ಟಿ ಆಗಾಗ ಸಮಾಧಾನಿಸುತ್ತಾನೆ
ಅಂದಿನಿಂದ ಗೋಡೆಯೂ ನಗುತ್ತಿದೆ
ಅವನೊಂದಿಗೆ
ರಕ್ತದ ಒಂದೂ ಕಲೆಯಿಲ್ಲದೆ!…





‘ನನ್ನ ನೋವ ನೋಡಿ ಅದಕ್ಕೂ ನೋವಾಗಿದೆ’,
‘ನನಗಾಗಿ ನೋಯುವ ಒಂದಾಂದರೂ ಭಾವವಿದೆ
ಅದು ಗೋಡೆಯೇ ಆಗಿದೆ’!
ದೀರ್ಘ ಕಾಲ ನಕ್ಕು ಮನೆಯೊಳಗೆ ನಡೆದ
ತನ್ನವರೆಲ್ಲರನ್ನೂ ಮತ್ತೂ ಪ್ರೀತಿಸುತ್ತಿದ್ದಾನೆ
ಗೋಡೆ ಮುಟ್ಟಿ ಆಗಾಗ ಸಮಾಧಾನಿಸುತ್ತಾನೆ
ಅಂದಿನಿಂದ ಗೋಡೆಯೂ ನಗುತ್ತಿದೆ
ಅವನೊಂದಿಗೆ
ರಕ್ತದ ಒಂದೂ ಕಲೆಯಿಲ್ಲದೆ!… super lines….
ದೀರ್ಘ ಕಾಲ ನಕ್ಕು ಮನೆಯೊಳಗೆ ನಡೆದ
ತನ್ನವರೆಲ್ಲರನ್ನೂ ಮತ್ತೂ ಪ್ರೀತಿಸುತ್ತಿದ್ದಾನೆ
ಗೋಡೆ ಮುಟ್ಟಿ ಆಗಾಗ ಸಮಾಧಾನಿಸುತ್ತಾನೆ
Superb lines