ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆ ಮೋಡದ ರೆಕ್ಕೆ ಗಾಳಿ…' – ಹೇಮಾ ಕಳ್ಳಂಬೆಳ್ಳ

ಮೋಡದ ರೆಕ್ಕೆ

– ಹೇಮಾ ಕಳ್ಳಂಬೆಳ್ಳ


ಈ ಗಾಳಿಗೂ, ಆ ಮೋಡಕೂ
ಅದು ಯಾವಾಗ
ಇಂತಹದೊಂದು ತೀವ್ರ
ಸ್ನೇಹವಾಯ್ತೋ
ಯಾರಿಗೂ ಗೊತ್ತಿಲ್ಲ.
 
ಇವೆರಡೂ
ಒಂದನ್ನ ಬಿಟ್ಟು ಇನ್ನೊಂದು
ಇದುವರೆಗೂ ಇಲ್ಲ.
 
ಇಡೀ ಮೋಡವನ್ನೇ
ಮೈ ಮೇಲೆ ಹೊರುವುದರಿಂದ
ನನಗೇನು ಲಾಭ,
ಅಥವಾ ಉಪಯೋಗ?
ಈ ಪ್ರಶ್ನೆಗೆ ಉತ್ತರ
ಸ್ವತಃ ಗಾಳಿಗೆ ಗೊತ್ತಿಲ್ಲ.
 
ಅವನು ಕೈಹಿಡಿದು ಕರೆದ ಕಡೆ
ತಲೆಯಾಡಿಸದೆ ನಾನೇಕೆ
ಸುಮ್ಮನೇ ಹೊರಟು ಬಿಡುವೆ?
ಇಂತಹ ಪ್ರಶ್ನೆ ಇದುವರೆಗೂ
ಮೋಡದ ತಲೆಗೆ ಬಂದಿಲ್ಲ.
 
ಅತಿಯಾದಾಗ
ಅಮೃತವು ಕಹಿಯಂತೆ
ಯಾರಿಗೇ ಆಗಲಿ
ಹೀಗೆ ಅಂಟಿಕೊಂಡೆ ಬಾಳುವುದೆಂದರೆ
ಪ್ರೀತಿಯೂ ಪಂಜರವೆನಿಸುತ್ತೆ.
 
ಆದರೆ
ಈ ಮೋಡ ಮತ್ತು ಗಾಳಿಯ
ಬಾಂಧವ್ಯ
ಪ್ರೀತಿಗೂ ಸಹ ಅಚ್ಚರಿ
 
ನಿಮಗೆ ಇನ್ನೊಂದು ವಿಷಯ
ಗೊತ್ತ?
ಆ ಮೋಡದ ರೆಕ್ಕೆ
ಗಾಳಿ
 

‍ಲೇಖಕರು G

9 June, 2015

4 Comments

  1. noorullathyamagondlu

    ಚೆನ್ನಾಗಿದೆ.

  2. bidaloti Ranganath

    ಮೋಡಕ್ಕೂ ಗಾಳಿಗು ಅವಿನಾಭಾವ ಸಂಬಂಧ ಕೊಟ್ಟು ಬರೆದ ಸರಳ ಕವಿತೆ
    ಆದರೆ ಪದ್ಯದ ಕೊನೆ ಸಾಲು “ಮೋಡದ ರೆಕ್ಕೆ ಗಾಳಿ” ಎಂಬ ಸಾಲು ಒಳ್ಳೆ ರೂಪಕ.

  3. Hanumanth Ananth Patil

    ಮೇಡಂ ವಂದನೆಗಳು
    ಕವನ ಸೊಗಸಾಗಿದೆ ಗಾಳಿ ಮತ್ತು ಮೋಡಗಳದು ಸ್ವಾರ್ಥವಿಲ್ಲದ ವೈಯಕ್ತಿಕ ಲಾಭ ನಷ್ಟಗಳ ಲೆಖ್ಖಾಚಾರ ಮೀರಿದ ವಾಸ್ತವ ಸಂಬಂಧ ಹೀಗಾಗಿ ಗಾಳಿ ಮೋಡ ರೆಕ್ಕೆಗಳದು ಅವಿನಾಭಾವ ಸಂಬಂದ.

  4. Ravikumar.K

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading