ಮತ್ತೆ ಮೂಡುತಿದೆ ಎದೆಯಲಾವುದೋ!

ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಹೊರಗಾಡುತ್ತಿಲ್ಲ ಹೆಜ್ಜೆಗಳು
ಒಳಗೇ
ರುಮು ಜುಮುಗುಟ್ಟಿಸುವ
ಯಾವುದೋ ಗಂಧದ ಬಳಿವಿಡಿದು
ಒಳಗೊಳಗೇ ….
ಎಲ್ಲಿದ್ದವು ಈ ಹೆರಳು !
ಅಂತರಗಂಗೆಯಂತೆ
ಮುಗಿಲಿಂದಿಳಿದು ದಿವದ ಹೊಳಪುಗೂಡಿ
ಮೆದುವಾಗಿ ಸೋಕುತ್ತಲೇ
ಭಾವಗೀತೆಗಳ ಅಲೆ ಅಲೆ ಲೀಲೆ
ಕೊಳಲುಲಿ ಬೆರೆತು
ಒಳಹರಿದು
ಪೊರೆ ಕಳಚಿತು ಒಡಲು.
ಮೀನಾಗಿ ಹಾವಾಗಿ
ಬಳುಕಿ ಬೆಸೆದು
ಆಗದ್ದೆನ್ನುವುದೆಲ್ಲಾ
ಆಗುತ್ತಿರುವ ತನ್ಮಯದಿ
ಎಂಜಲೂ ಅಮೃತ
ಆ ಮಾದಕ ತುಟಿ
ಹೀರಿದ ಘಳಿಗೆಯಲಿ.
ಒಡೆದ ಇಬ್ಬನಿ ಬೆವರ
ತಂಪು ತಿಕ್ಕಾಟದಲಿ
ಹುಟ್ಟಿದ ನದಿಯೊಂದು
ನುಗ್ಗಿ ಕಣಿವೆಯಲಿ
ಕಟ್ಟಿಲ್ಲದ ಕಡಲಾಗಿ.
ತೇಲಿ ಮುಳುಗಿದ್ದೆಲ್ಲ ಹೆಪ್ಪುಗಟ್ಟಿ
ನೆನಪಿನ ಮೊನೆ ತಾಗಿ
ಮತ್ತೆ ಮೂಡುತಿದೆ
ಎದೆಯಲಾವುದೋ
ಒಂದು ದನಿ
ಒಂದು ಹನಿ……





“ತೇಲಿ ಮುಳುಗಿದ್ದೆಲ್ಲ ಹೆಪ್ಪುಗಟ್ಟಿ
ನೆನಪಿನ ಮೊನೆ ತಾಗಿ
ಮತ್ತೆ ಮೂಡುತಿದೆ
ಎದೆಯಲಾವುದೋ
ಒಂದು ದನಿ
ಒಂದು ಹನಿ……”
yes, ಪ್ರೇಮವೆಂದರೆ ಯಾವತ್ತೂ ಹೀಗೇ. ನೆನಪುಗಳು ತಾಕಿದಾಗೆಲ್ಲ ಅದೆಷ್ಟೋ ದನಿಗಳು ಎದೆಯಲ್ಲಿ ಹುಟ್ಟಿದ ಜತೆಜತೆಗೇ ಕಣ್ಣಲ್ಲಿ ಹನಿಗಳೂ ಚಿಮ್ಮುತ್ತವೆ.
ಧನ್ಯವಾದಗಳು
Nice sir