ದಿಕ್ಸೂಚಿ
ಎಸ್. ಕಿರಣ್ ಕುಮಾರಿ
ಮೊಗೆದಷ್ಟು..
ಬಗೆದಷ್ಟು..
ನಿನ್ನ ನೋವಿನ
ಆಳದಬೇರು
ಬೆವರುಗಳ
ಹನಿಯಲ್ಲಿ
ಕರಗಿ
ಬೆಚ್ಚಗಿನ ಕಣ್ಣಿರ
ಸಿಂಪಡಿಸಿದಾಗ
ಸುಡುಕೆ0ಡದ
ಕೈ ಸ್ಪರ್ಷದಲಿ
ಕತ್ತರಿಸಿಕೊ0ಡ ನಾಲಗೆಯಿ0ದ
ಚಡಪಡಿಸಿ
ನಿದ್ದೆಯಿ0ದೆದ್ದು
ಕನಸುಗಳ ಕದತಟ್ಟಿದರೆ
ನಿರ್ಜೀವದ0ಥ
ರಕ್ತದೋಕುಳಿಯ
ಎಲುಬಿನ ಹ0ದರಗಳು
ಕಿಟಕಿಗಳು ತೆರೆದವು
ಅಟ್ಟಹಾಸದಲಿ..
ಚಾಟಿ ಏಟಿನ
ಸರಪಳಿಗಳ ಸದ್ದು ಮಾಡುತ್ತಾ
ಗ[0]ಡಸು
ಕಂಠಕ್ಕೆ
ನಡುಗಿದ
ಭಾವಚಿತ್ರಗಳು
ಮಿ0ಚಿ ಮರೆಯಾದ
ಆ ದೇಹವೆ0ಬ
ಮೂಕ ರೋಧನಕ್ಕೆ
ದಿಕ್ಕ ತೋರುವಿರಾ ?
ದಿಕ್ಸೂಚಿಗಳೇ..!







0 Comments