ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ..

ಹೆಣ್ಣುಮಗು ಜನಿಸಿದರೆ 111 ಗಿಡ ನೆಟ್ಟು ಸಂಭ್ರಮಿಸುವ ಪಿಪ್ಲಾಂತ್ರಿ ಎಲ್ಲರ ಕುತೂಹಲದ ಕೇಂದ್ರ.

ಇಂತಹ ಕೇಂದ್ರಕ್ಕೆ ಮಗ ಚಿನುವಾನೊಂದಿಗೆ ಭೇಟಿ ಕೊಟ್ಟು ಬಂದ ಡಾ ಶಿವರಾಂ ಪೈಲೂರು ಬರೆದ ಮಹತ್ವದ ಪುಸ್ತಕ ಈಗ ಮಾರಾಟಕ್ಕಿದೆ.

ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸಿರುವ ಈ ಕೃತಿಯ ಬೆಲೆ ೪೦ ರೂ ಪ್ರತಿಗಳಿಗಾಗಿ- agriculturalmedia@gmail.com

ಕೃತಿ :

ಹೆಣ್ಣುಮಗು ಜನಿಸಿದರೆ
111 ಗಿಡ ನೆಟ್ಟು ಸಂಭ್ರಮಿಸುವ

ಪಿಪ್ಲಾಂತ್ರಿ

ಲೇಖಕರು: ಶಿವರಾಂ ಪೈಲೂರು

‘ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀ ಪಡ್ರೆ ಅವರ ದೂರವಾಣಿ ಕರೆ ಬಂತೆಂದರೆ ಹೊಸ ಸಂಗತಿಯೊಂದು ಇದ್ದೇ ಇರುತ್ತದೆ. ಅವರ ಸುದ್ದಿ ನಾಸಿಕ ಅತಿ ಸೂಕ್ಷ್ಮ. ವರ್ಷದ ಹಿಂದೆ ಒಂದು ದಿನ ಮಾತನಾಡುತ್ತ ರಾಜಸ್ಥಾನದ ಹಳ್ಳಿಯೊಂದರಲ್ಲಿ ನಡೆದಿರುವ ವಿಶಿಷ್ಟ ಹಸಿರೀಕರಣ ಕಾರ್ಯದ ಬಗ್ಗೆ ಪ್ರಸ್ತಾಪಿಸಿದರು. ಜತೆಜತೆಗೇ ಒಂದಷ್ಟು ಪೂರಕ ಮಾಹಿತಿಗಳನ್ನು ಮೇಲ್ ಮಾಡಿದ್ದಲ್ಲದೆ ವಾಟ್ಸಪ್ ನಲ್ಲಿ ವಿಡಿಯೋ ಲಿಂಕ್ ಕೂಡ ಕಳಿಸಿಕೊಟ್ಟರು.

ಪಿಪ್ಲಾಂತ್ರಿಗೆ ಹೋಗಲೇಬೇಕೆಂಬ ನಿರ್ಧಾರಕ್ಕೆ ಬರಲು ತಡವಾಗಲಿಲ್ಲ. ಅಲ್ಲಿನ ಯಶೋಗಾಥೆಯ ರೂವಾರಿ ಶ್ಯಾಮ್ ಸುಂದರ್ ಪಾಲೀವಾಲ್ ಅವರೊಂದಿಗೆ ಚರ್ಚಿಸಿ ಭೇಟಿಯ ದಿನಾಂಕ ನಿಗದಿಪಡಿಸಿದ್ದೂ ಆಯಿತು. ಮಗ ಚಿನುವಾನ ದಸರಾ ರಜೆಯ (ಅಕ್ಟೋಬರ್ 2018) ಮಧ್ಯದಲ್ಲಿ ಇಬ್ಬರೂ ಮುಂಬೈ-ಉದಯಪುರ ಮೂಲಕ ರಾಜ್ ಸಮಂಡ್ ತಲುಪಿ ಅಲ್ಲಿಗೆ ಸಮೀಪವಿರುವ ಪಿಪ್ಲಾಂತ್ರಿಗೆ ತೆರಳಿ ಪಾಲೀವಾಲ್ ಅವರೊಂದಿಗೆ ಎರಡು ದಿನ ತಿರುಗಾಡಿದೆವು.

ಆ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ. ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ರಾಜಸ್ಥಾನದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ –ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ.

ಪಿಪ್ಲಾಂತ್ರಿಯಿಂದ ವಾಪಸಾದ ಬಳಿಕ ಚಿನುವಾ ಆ ಕುರಿತು ಒಂದು ವಿಡಿಯೋ ಸಿದ್ಧಪಡಿಸಿ ತನ್ನ ಯುಟ್ಯೂಬ್ ಚಾನೆಲ್ ‘ಕ್ಲೋಸ್ ಅಬೌಟ್’ಗೆ ಅಪ್ ಲೋಡ್ ಮಾಡಿದ. ನಾನು ಅಡಿಕೆ ಪತ್ರಿಕೆಗೆ ಲೇಖನ ಬರೆದೆ. ಪತ್ರಿಕೆಯ ಆಗಸ್ಟ್ 2019ರ ಸಂಚಿಕೆಯಲ್ಲಿ ಅದು ಮುಖಪುಟ ಲೇಖನವಾಗಿ ಪ್ರಕಟವಾಯಿತು.

 

‍ಲೇಖಕರು avadhi

22 October, 2019

1 Comment

  1. T S SHRAVANA KUMARI

    ಅನುಸರಣೀಯ ವಿಷಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading