ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಖುಷಿಯಲ್ಲಿ ಇನ್ನೂ ತೇಲುತ್ತಿದ್ದೇನೆ

‘ಬದ್ಲಾಪುರ್’ನೆಡೆಗೆ ಒಂದು ಪಯಣ

vinay mandya

ವಿನಯ್ ಕುಮಾರ್ ಎಂ. ಜಿ

badlapur1

ಕೆಲ ದಿನಗಳ ಹಿಂದೆ ಗೆಳೆಯ ಶರತ್ ವಸಿಷ್ಠ ಶ್ರೀರಾಮ್ ರಾಘವನ್ ರವರ ‘ಬದ್ಲಾಪುರ್’ ಸಿನಿಮಾದ ಮೊದಲ ದೃಶ್ಯ ತೋರಿಸಿದ. ಆ ಇಡೀ ದೃಶ್ಯವನ್ನು ಒಂದೇ ಚಿತ್ರಿಕೆಯಲ್ಲಿ ಚಿತ್ರಿಸಲಾಗಿತ್ತು. ರಸ್ತೆಯ ಬದಿಯೊಂದರಲ್ಲಿ ಕೂತು ಕಣ್ಣ ಮುಂದೆ ನಡೆಯುತ್ತಿರುವ ದೃಶ್ಯವೊಂದಕ್ಕೆ ಸಾಕ್ಷಿಯಾಗುತ್ತಿದ್ದೇವೇನೋ ಎನ್ನುವಷ್ಟು ನೈಜವಾಗಿ ಆ ದೃಶ್ಯವನ್ನು ಹೆಣೆಯಲಾಗಿತ್ತು. ತರುವಾಯ ಆ ದೃಶ್ಯವನ್ನು ನಾನು ಹಲವಾರು ಬಾರಿ ಮತ್ತೆ ಮತ್ತೆ ನೋಡಿದ್ದೆನಾದರೂ ಚಿತ್ರವನ್ನು ಪೂರ್ಣವಾಗಿ ನೋಡಲಾಗಿರಲಿಲ್ಲ. ಮೊನ್ನೆ ನಡುರಾತ್ರಿಯಲ್ಲಿ ಒಬ್ಬನೇ ಕೂತು ‘ಬದ್ಲಾಪು‌ರ್’ ನೋಡುವ ಯೋಗ ಸಿಕ್ಕಿತು.

badlapur2ಆ ಖುಷಿಯಲ್ಲಿ  ಇನ್ನೂ ತೇಲುತ್ತಿದ್ದೇನೆ. ಹೆಂಡತಿ-ಮಗುವನ್ನು ಕೊಂದವರ ಮೇಲೆ ಹದಿನೈದು ವರುಷಗಳಾದರೂ ಕಾದು ಕೂತು ಸೇಡು ತೀರಿಸುವ ಕಥಾ ಎಳೆ ಕ್ಲೀಷೆ ಎನಿಸಿದರೂ ಕಥನ ಕ್ರಮವನ್ನು ರಾಘವನ್ ದುಡಿಸಿಕೊಂಡಿರುವ ಕ್ರಮ ನಿಜಕ್ಕೂ ಬಹು ಪರಿಣಾಮಕಾರಿಯಾಗಿದೆ. ಪಾತ್ರ ಹಾಗೂ ತಂತ್ರಜ್ಞರ ಆಯ್ಕೆಯಲ್ಲಿ ರಾಘವನ್ ವಿಶಿಷ್ಠ ಜಾಣ್ಮೆ ತೋರಿದ್ದಾರೆ. ಹಾಡುಗಳನ್ನು, ಅದರಲ್ಲೂ ‘ಜೀನಾ… ಜೀನಾ…’ ಹಾಡನ್ನು ಅವರು ನಿರೂಪಿಸಿರುವ ರೀತಿ ಅನನ್ಯವಾದುದು. ಅದು ಹಾಡುಗಳನ್ನು ಹೇಗೆಲ್ಲಾ ಬಳಸಿಕೊಳ್ಳಬೇಕೆಂದು ನಾನು ಯೋಚಿಸುತ್ತಿದ್ದೆನೋ ಎಲ್ಲ ಯೋಚನೆಗಳನ್ನು ಪುನರ್ ಪರಿಶೀಲಿಸುವಂತೆ ಮಾಡಿತು.

ತೀರಾ ಪರ್ಸನಲ್ ಎನ್ನಬಹುದಾದ ಚಿತ್ರ ನೋಡುವ ಆಸಕ್ತಿಯಿರುವವರು ತಪ್ಪದೇ ‘ಬದ್ಲಾಪುರ್’ ನೋಡಿ.

‍ಲೇಖಕರು admin

29 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading