ಅನಿ ಇಬ್ಬನಿ
“ನೀನು ಬಂದ ಮೇಲೆ ತಾನೇ ಎಷ್ಟು ಚಂದ ಈ ಬಾಳು,
ನೀನೇ ತಾನೇ ಹೇಳಿಕೊಟ್ಟೆ ಪ್ರೀತಿಸಲು.”
ಈ ಹಾಡು ನಂಗೂ-ಅವನಿಗೂ ಹೇಳಿಮಾಡಿಸಿದ ಹಾಗೆ ಇದೆ. ನಿಜವಾಗ್ಲೂ ಅವನಿಂದ ನನ್ನ ಜೀವನಕ್ಕೆ ಒಂದು ಅರ್ಥ ಬಂದಿದೆ.
ಅವನು ತುಂಬಾನೇ ತುಂಟ, ಅಷ್ಟೇ ಮುದ್ದು ಹುಡುಗ. ನಾನು ಅಂದ್ರೆ ತುಂಬಾನೇ ಪ್ರೀತಿ,ಅಷ್ಟೇ ಕಾಟ ಕೂಡಾ ಕೊಡ್ತಾನೇ.
ನನ್ನ ಬಿಟ್ಟು ಇರೋಕೆ ಅಳ್ತಾನೇ, ಒಂದು ನಿಮಿಷ ಕೂಡ ಅವನಿಂದ ಕಣ್ಣು ತಪ್ಪಿಸಿ ಇರೋಕೆ ಆಗಲ್ಲ. (ನಂಗು ಕೂಡಾ ಆಗಲ್ಲ.)
ನಾನು ಎಲ್ಲಿಗಾದ್ರೂ, ಯಾವುದಾದ್ರು ಕೆಲಸದ ಮೇಲೆ ಹೊರಗೆ ಹೋದ್ರೆ, ನಾನು ಬರೋದನ್ನೇ ಕಾಯ್ತಾ ನಿನ್ತಿರ್ತಾನೆ. ದಿನಾ ತಪ್ಪದೇ ಅವನ ಜೊತೆ ಸಾಯಂಕಾಲ ಹೊರಗಡೆ ಸುತ್ತೋದಕ್ಕೆ ಹೋಗಲೇ ಬೇಕು.
ಮೊನ್ನೆ ನಾನು-ಅವನು ವಾಕಿಂಗ್ ಮುಗಿಸ್ಕೊಂಡು ಸಾಯಂಕಾಲ ಬರ್ತಾ ಇದ್ವಿ , ನಾನು ಏನೋ ಯೋಚನೆ ಮಾಡ್ತಾ ಸುಮ್ಮನೆ ಬರ್ತಾ ಇದ್ದೆ , ಅವನು ಕಣ್ಣು ಮಿಟಿಕಿಸದೆ ನನ್ನೇ ನೋಡ್ತಾ ಇದ್ದ, ನಾನು ತಕ್ಷಣ ಅವನ ಮುಖ ನೋಡಿ ಮಂದಹಾಸ ಬಿರಿದ. ತಕ್ಷಣ ನನ್ನ ತುಟಿಗೆ ಒಂದು ಸವಿಯಾದ ಹೂ-ಮುತ್ತು ಕೊಟ್ಟ. ಆ ಕ್ಷಣಕ್ಕೆ ನಂಗೆ ‘ಕಿಸ್ ಆಫ್ ಲವ್’ ನೆನಪಾಯಿತು. ಇವಾಗಂತೂ ಎಲ್ಲ ಕಡೆ ಅದೇ ಸುದ್ದಿ.
ಓ, ಆ ಹುಡುಗ ಯಾರು ಅಂತ ಹೇಳಲೇ ಇಲ್ಲ ಆಲ್ವಾ? ಅವನೇ ರೀ ಅನೀಶ್-
ನನ್ನ ೧ ವರ್ಷದ ಪುಟ್ಟ ಮಗ .






Very nice write up Anitha. Maguvina jothe ninna photo illadidre odalu innu super aagirodu 🙂