ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆ ಕುಡಿ ಮೀಸೆಯ ತುಂಟ ಕಣ್ಣಿನ ಹುಡುಗ…' – ಉಮಾರಾವ್ ಕವನ

ಅದೇ ಹುಡುಗ

ಉಮಾ ರಾವ್

ನಾನು, ನನ್ನ ಗೆಳತಿ
ಗುಲ್ ಮೊಹರ್ ಗಿಡಗಳ ಕೆಳಗೆ
ವಾಕ್ ಹೋಗುತ್ತಾ
ಶಿಸಂಭವ್ ಸೀರೆ, ರಾಜೇಂದ್ರ ಕುಮಾರ್
ಎನ್ ಪಿ ಮೇಷ್ಟ್ರ ಮೀಸೆ, ಮೈಸೂರು ಮಲ್ಲಿಗೆ,
ಪ್ರಿಪರೇಶನ್ ಆಫ್ ಎಸ್ ಒಟು
ಸಂಗಮ್, ಎದುರು ಮನೆ ಪೋಲಿ ಹುಡುಗರ ಬಗ್ಗೆ
ಹರಟೆ ಹೊಡೆಯುತ್ತಿದ್ದಾಗ
ಅವನು ಎದುರಾಗಿತ್ತಿದ್ದ.
ಆ ಕುಡಿ ಮೀಸೆಯ ತುಂಟ ಕಣ್ಣಿನ ಹುಡುಗ
ಖಾಲಿ ರಸ್ತೆಯಲ್ಲೂ ರಾಗವಾಗಿ ಸೈಕಲ್ ಬೆಲ್ಲು ಮಾಡುತ್ತಾ.
ಅವನ ಕಂಡರೆ ಎಂಥಾ ಆಸೆ, ಮೋಹ
ಆಗಲೇ ಅಲ್ಲೇ
ಅವನಲ್ಲಿ ಕರಗಿ ಹೋಗುವ ಉತ್ಕಟ ಬಯಕೆ.
ಆದರೆ
ಅವನು ನನ್ನ ಗೆಳತಿಯ ಕಣ್ಣಲ್ಲಿ ಕಣ್ಣಿಟ್ಟು
ದಿಟ್ಟಿಸಿ ನೋಡುತ್ತಿದ್ದ.
ಆ ಕ್ಷಣ ಕಿಚ್ಚು ಮೈಯ್ಯೆಲ್ಲಾ ಉರಿ ಹತ್ತಿಸಿ
ನನ್ನ ಗೆಳತಿ
ಅಲ್ಲೇ ಕರಗಿ ಹೋಗಬಾರದೇ
ಅವರಪ್ಪನಿಗೆ ಬೇರೆ ಊರಿಗೆ ವರ್ಗವಾಗಬಾರದೇ
ಆ ಕ್ಷಣ ಯಾವುದಾದರೂ ಮೂರ್ತಿಯದೋ ಶಾಸ್ತ್ರಿಯದೋ
ಹೆಂಡತಿಯಾಗಿ ಬಿಡಬಾರದೇ
ಎದುರು ಬರುತ್ತಿರುವ ಲಾರಿಗೆ ಸಿಕ್ಕಿ, ಆಸ್ಪತ್ರೆ ಸೇರಿ…
ಎಂದೆಲ್ಲಾ ಯೋಚನೆಗಳು ದಾಳಿ ಇಟ್ಟು
ಚಡಪಡಿಸುತ್ತಿದ್ದೆ.

ಮೊನ್ನೆ ಅದೇ ಹುಡುಗ ಮತ್ತೆ ಸಿಕ್ಕಿದ.
ಎಷ್ಟು ವರ್ಷಗಳ ನಂತರ…
ಇಪ್ಪತ್ತೋ ಇಪ್ಪತ್ತೆರಡೋ ನೆನಪಿಲ್ಲ.
ಏಕೆಂದರೆ ಈಗ ಗುಲ್ ಮೊಹರ್ ಗಿಡಗಳಿಲ್ಲ
ಪಕ್ಕದಲ್ಲಿ ಗೆಳತಿಯಿಲ್ಲ ಸಂಗಮ್ ಅಷ್ಟಾಗಿ ನೆನಪಿಲ್ಲ.
ಬಕ್ಕತಲೆ ಬಂಗಾರದ ಕಟ್ಟಿನ ಕನ್ನಡಕ
ಸಫಾರಿ ಸೂಟು, ವಿಐಪಿ ಬ್ರೀಪ್ ಕೇಸಿನ ಒಳಗೆ
ಅಡಗಿಕೊಂಡಿರುವ ಅವನು
ಈಗ ಮಾತುಮಾತಿಗೂ ಜೋರಾಗಿ ನಗುತ್ತಾನೆ
ಆಗ ಅವನ ಬಂಗಾರದ ಹಲ್ಲು ಕಾಣುತ್ತದೆ
ಅದೇ ಮೊಲೆ ಮೂಡುತ್ತಿರುವ ಹುಡುಗಿಯನ್ನು
ಈಗಲೂ ನೋಡುತ್ತಾನೆ
ಆದರೆ ದಿಟ್ಟಿಸುವುದಿಲ್ಲ.
ವಾರೆ ನೋಟದಿಂದ
ಅವರು ತನ್ನತ್ತ ನೋಡುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡು
ಕದ್ದು ಕದ್ದು ನೋಡುತ್ತಾನೆ.
ಆದರೆ ಯಾವ ಹುಡುಗಿಯೂ
ಈಗ ಅವನಿಗಾಗಿ
ತನ್ನ ಗೆಳತಿಯ ಸಾವನ್ನು ಬಯಸುವುದಿಲ್ಲ.

‍ಲೇಖಕರು avadhi

14 February, 2014

10 Comments

  1. sarala

    ishta aitu. olle kavite.

  2. mmshaik

    nice..very nice

  3. jogi

    ಆದರೆ ಯಾವ ಹುಡುಗಿಯೂ
    ಈಗ ಅವನಿಗಾಗಿ
    ತನ್ನ ಗೆಳತಿಯ ಸಾವನ್ನು ಬಯಸುವುದಿಲ್ಲ.
    -ಅರಿವು ಮತ್ತು ವಿಷಾದ ಒಟ್ಟೊಟ್ಟಿಗೇ ಬರುತ್ತದಾ?
    ಚೆಂದದ ಪದ್ಯ. ಸಾನೆಟ್ಟಿನ ಹಾಗೆ ಕೊನೆಯಲ್ಲಿ ಡಿಚ್ಚಿ ಹೊಡೆಯುತ್ತದೆ.

  4. bharathi b v

    Enella sthithiyella dhaati baruva kathe! Ishtavaythu ….

  5. Nasrin

    very nice

  6. Mithra

    ಒಳ್ಳೆಯ ಕವನ ಉಮಾ….

  7. Uma Rao

    Friends, I am happy you guys enjoyed the poem. It was written such a long time ago!

  8. Bhavya

    ಒಳ್ಳೆಯ ಕವನ ಉಮಾ….

  9. gururaj katriguppe

    PLEASE PUBLISH ALL THE POEMS, YOU HAVE WRITTEN LONG AGO, EVEN THOUGH THIS POEM WRITTEN LONG AGO, IT LOOKS LIKE A FRESH POEM. SIMPLY BECAUSE OF YOUR MAGICAL TOUCH,

  10. Uma Rao

    Dear Gururajarao. Thanks for your appreciation. I will try to find my earlier poems and put it on Avadhi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading