ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಕವಿತೆಯನ್ನೊಮ್ಮೆ ಕೇಳಿ ನೋಡು..

ಮಂಜುನಾಥ ಚಿನಕುಂಟಿ

**

ದಾರಿಯುದ್ದಕ್ಕೂ ಕೂಡುವ ಮನಸ್ಸಿದೆ

ಆದರೆ ಕನಸೆಂಬ ದೋಣಿ ಸಾಗುವ

ಮೇಲ್ಸೇತುವೆ ಅಡಿಯಲ್ಲಿ ಆಳವಾದ ಸುಳಿಯು 

ಇದೆ!

ನನ್ನ ಈ ಚಪಲಕ್ಕೆ ಇಂತಿಷ್ಟು ಯೋಗ್ಯತೆಯಿಲ್ಲ

ಅದು ತಿಳಿದಿದೆ.

ಅದೋ ನೋಡು ನನ್ನ ಈ ಕವಿತೆಗೆ ಪ್ರತಿ 

ಸ್ಪರ್ದಿ ಒಬ್ಬ ಹುಟ್ಟುವನು

ಆ ಕವಿತೆಯನ್ನೊಮ್ಮೆ ಕೇಳಿ ನೋಡು 

ನಿನಗೂ ಹಿಡಿಸಬಹುದು.

ನನ್ನನ್ನು ತಿರಸ್ಕರಿಸುವದಕ್ಕೂ ಕಾರಣಗಳು

ಸಿಗಬಹುದು

ಕತೆಗಳಿಗೆ ಅಂತ್ಯವು ಇರದು ಆರಂಭವು ಇರದು

ಅದೇ ಕವಿತೆಗಳಿಗೆ ಹುಟ್ಟೇ ಎಂಬುದೇ ಇರದು

ಇದು ನನ್ನ ಅನಿಸಿಕೆಯಷ್ಟೇ ಸಖಿ

ನಿನ್ನ ಅನಿಸಿಕೆ ನಿನ್ನಲ್ಲಿಯೇ ಇರಲಿ ಬಿಡು

ಕೊನೆಯ ಸಾಲುಗಳನ್ನು ಬರೆಯಲು 

ಪ್ರಯತ್ನಿಸಿದವನಿಗೆ

ಏನೆಲ್ಲ ದೊರೆಯಿತು ಗೆಳತಿ 

ನೀ ಬಿಟ್ಟೋದ ಒಂದಷ್ಟು ಮೇಕಪ್ ಕಿಟ್ಟು

ಹಳೆ ಜುಗಾಡಿ ಗಿಫ್ಟ್ ಗಳು

ನಿನಗಂತ ಬರೆದ ಕವಿತೆಗಳಷ್ಟೆ.

‍ಲೇಖಕರು Admin MM

24 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading