ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಕಡಲಿನಲ್ಲೇನಿದೆ..

ekha-gowda

ರೇಖಾ ಗೌಡ 

ಮನವೆಂಬ ಮಾಯೆಯ
ಸರಿಸಿ ನೀ ನೋಡು
she seaತರ್ಕ ಕುತರ್ಕಗಳ ತಳ್ಳಿ
ದಿಗಿಲು ದ್ವಂದ್ವಗಳ ದಾಟಿ
ಭೂತಭವಿಷ್ಯಗಳ ಬಿಟ್ಟು
ಮರೆವು ನೆನಪುಗಳ ಮೀರಿ…

ಚಿತ್ತಸಾಗರದಿ ಏಳುವ
ನಿರಂತರ ನಿರ್ಲಜ್ಜ
ಯೋಚನೆ ಯಾಚನೆಗಳ
ಬಾಯ್ಕಟ್ಟಿ ನೀ ನೋಡು…

ಆ ಸಾಗರವು ನಾಗರವು
ಒಳಗಿಳಿದರೆ
ಸೆಳೆದೊಯ್ಯುವುದು ನಿನ್ನನೇ
ಹಿಂದಿರುಗುವ ಖಾತರಿಯಿಲ್ಲ
ದಡದಲ್ಲೇ ನಿಂತು ನೀ ನೋಡು
ಈ ಅಲೆಗಳಾಟ…

ಆಳವ ತಿಳಿ, ನೋಡಲುಬೇಡ
ಅಗಾಧತೆಯ ಅರಿ, ಅಚ್ಚರಿಪಡಬೇಡ
ಕಡಲ ಸೇರದಿರು
ಕಡಲಿಂದ ಬೇರೆಯಿರು
ನಾನೇ ಕಡಲೆನ್ನದಿರು
ಕಡಲಿಂದ ಬೇರ್ಪಡು…

ಹೃದಯಮಂದಿರದಿ ಕೂತು
ಸವಿಭಾವಗಳ ಕಡೆದು
ಅದರೊಡಲ ಅಮೃತವ ಸವಿದು,
ಉಳಿದವರಿಗೂ ರುಚಿಹತ್ತಿಸು…

ಆ ಕಡಲಿನಲ್ಲೇನಿದೆ
ಇರುವುದೆಲ್ಲಾ ಇಲ್ಲೇ ಇಲ್ಲೇ
ಎದೆಯ ಈ ಹಾದಿಯಲ್ಲೇ…

‍ಲೇಖಕರು Admin

28 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading