ಎಂ.ಎಸ್.ಕೃಷ್ಣಮೂರ್ತಿ

ಉದರ ನೃತ್ಯ
ಗುಟುಕು ಗುಟುಕಾಗಿ ಒಳಗಿಯಿಳಿಯುತ್ತಿರುವ
ಮಾದಕ ದ್ರವ, ಮಾದಕ ಸಂಗೀತ
ಬಣ್ಣ ಬಣ್ಣದ ಬೆಳಕಿನ ಕಣ್ಣು ಮುಚ್ಚಾಲೆಯಾಟ
ಸಂಗೀತಕ್ಕೆ ತಕ್ಕಂತೆ ಏರಿಳಿಯುತ್ತಿರುವ
ಕಂಪಿಸುತ್ತಿರುವ ಮಾದಕ ಮೈಮಾಟದ ಚೆಲುವೆ
ಆ ಉದರ, ಅದರ ಕಂಪನ
ಅರ್ಥಾತ್ ಬೆಲ್ಲಿ ಡಾನ್ಸ್
ಉದ್ರಿಕ್ತ,
ಮೈ ಮನ ಆ ಚೆಲುವೆಯ
ಸಂಚಿನ ಮಿಂಚಿನ ಉದರ ಅದರ ನಯನದ ಕಂಪನಕೆ
ನಡುರಾತ್ರಿ ಕಳೆದು ಮದೋನ್ಮತ್ತ ದೇಹ ಮನಸ್ಸ
ಎಳೆದೆಳೆದು ಕಾರಿಗೋಯ್ದು ಹಾಕಿ ಹೋಗುವಾಗ
ಅಮಲಿಳಿಯುತ್ತ ಬಯಕೆಗಳೇರುತ್ತಾ ಒಳಗೊಳಗೆ ತಳಮಳಿಸುತ್ತಾ
ಪ್ಲೈ ಓವರ್ ಕೆಳಗೆ ಕಾರು ನಿಲ್ಲಿಸಿ ರಮ್ಮು ಕಕ್ಕುವಾಗ
ಚಿಂದಿ ಚಿಂದಿ ಬಟ್ಟೆ ತೊಟ್ಟ ಆ
ಬರೆ ಹೊಟ್ಟೇಯ ಬಡ ಚೆಲುವೆಯ ಮೈಮೇಲೆ ಸಿಡಿದ
ವಾಂತಿಗೆ, ಹಸಿವಿನಿಂದ ಕಂಪಿಸುತ್ತಿದ್ದ ಆಕೆಯ ಅ ಉದರ ಅದರ ಕಾಂತಿಯಿಲ್ಲದ ಭಯದ ಕಣ್ಣು
ಆ ಕೊಳಕಲ್ಲೇ ಮಲಗಿದ ಮತ್ತೊ ನಿರ್ಗತಿಕರು
ಜೇಬಲ್ಲಿದ್ದ ದುಡ್ಡೆಲ್ಲ ಆಕೆಯ ಪಕ್ಕದಲ್ಲಿ ಹಾಕಿ
ಕಾರಲ್ಲಿ ಕುಳಿತು ಗೊಣಗಿದ
Belly dance my foot……!!!







ಚೆನ್ನಾಗಿದೆ ಕೃಷ್ಣಮೂರ್ತಿ sir!
nice sir..!
ಒಳ್ಳೆಯ ಆಶಯವಿರುವ ಕವಿತೆ… 🙂