ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆಲಯದೊಳಗಾತ್ಮವೇ ಇಲ್ಲ…’ – ಅನುಪಮಾ ಪ್ರಸಾದ್ ಕವನ

ಆಲಯದೊಳಗಿನ ಅನಾತ್ಮ

ಅನುಪಮಾ ಪ್ರಸಾದ್

ಕಾಯುವ ಕಾಯಕ್ಕೆ ರಣ ಹೊಕ್ಕ

ಕಾಯಕ್ಕೆ ಗೋಡೆಗಳು

ಆತ್ಮಗಳಿಗಲ್ಲ

ಕಾಯದೊಳಗಣ ರೆಕ್ಕೆಗೆ

ರೆಕ್ಕೆಯೊಳಗಿನ ಶಕ್ತಿಗೆ

ತೆರೆದಿರುವ ಗವಾಕ್ಷಿಗಳು

ಗಾವುದ ದೂರದ ಹಾರಾಟ

ಬಾನೆತ್ತರದಲಿ ವಾಲಾಟ

ತೆರೆದೇ ಇರುವ ಬಯಲಿಗೆ ಹುಡುಕಾಟ

ಒಡ್ಡೇ ಇರದ ಹೊಳೆಗೆ ಮೊರೆದಾಟ

ಆದರೂ ಕಿತ್ತುಕೊಳ್ಳದ ಸೂತ್ರ

ಮತ್ತದೇ ಗೋಡೆಗಳು ಕೋಟೆ ಕೊತ್ತಲಗಳು

ಗವ್ವೆನ್ನುವ ಗವಿಗಳು ಮುಗ್ಗು ಹೊಡೆಯುವ ಮಹಲುಗಳು

ಬಿರುಕು ಬಿಟ್ಟರೂ ಕುಸಿಯದ ಜೈಲುಗಳು

ಪಾರಿವಾಳದ ಹೂಂಕಾರ

ಘನ ಘೋರ ಕರ್ಣ ಕಠೋರ

ಇಲ್ಲಿ ಬಯಲು ಆಲಯವಾಗುವುದೇ ಇಲ್ಲ

ಅದಕಾಗೇ ಆಲಯದೊಳಮೈ

ಉರುಳುರುಳುವ ಅಗ್ನಿ ಉಂಡೆ

ಸೆಳೆ ಸುಳಿಯ ಜಲ ಪ್ರವಾಹ

ಬಡಬಾಗ್ನಿಯ ಬಸಿರು

ಹೊರಮೈ

ನುಣು ನುಣುಪಿನ ಬಲೆ

ಉಬ್ಬು-ತಗ್ಗುಗಳ ಕಲೆ

ಪರಕಾಯಕೆ ಕರೆ

ಶಿಲಾಬಾಲಿಕೆ ಸೆರೆ

ಆಲಯದೊಳಗಾತ್ಮವೇ ಇಲ್ಲ!

 

 

‍ಲೇಖಕರು G

27 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading