ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..

ಆರ್. ವಿ. ಭಂಡಾರಿಯವರು ನಮ್ಮನ್ನಗಲಿ ಮೂರು ವರುಷ ಕಳೆಯಿತು. ಈದಿನದ ನೆನಪಿನಲ್ಲಿ ಅವರ ಎರಡು ಪುಸ್ತಕಗಳ (ಚಿನ್ನದ ಹುಡುಗಿ ಚಿನ್ನಮ್ಮ,-ಮಕ್ಕಳ ಕಾದಂಬರಿ ಹಾಗೂ ಪ್ರೀತಿಯ ಕಾಳು-ಮಕ್ಕಳ ನಾಟಕ) ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ರಾಜ್ಯ ಜತೆ ಕಾರ್ಯದರ್ಶಿಗಳು ಹಾಗೂ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ಕೆ. ಎಸ್. ವಿಮಲಾ ರವರು ಪುಸ್ತಕವನ್ನು ಬಿಡುಗಡೆಮಾಡಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಕಶ್ಯಪ ಪರ್ಣಕುಟಿ ವಹಿಸಿದ್ದರು.

ಕವಿ ಗೋಷ್ಠಿಯಲ್ಲಿ ಸುಬ್ರಾಯ ಮತ್ತಿಹಳ್ಳಿ, ಮಾಧವಿ ಭಂಡಾರಿ, ಕಾವ್ಯಶ್ರೀ ಮನ್ಮನೆ, ಶೃತಿ ಹೆಗಡೆ, ಮಧುಲತಾ ಗೌಡರ್, ಕೋಲ್ಸಿರಸಿ ಕನ್ನೇಶ, ವಿ. ಎಂ. ನಾಯ್ಕ, ಆರ್. ಜಿ. ನಾಯ್ಕ, ಆರ್. ಕೆ ನಾಯ್ಕ, ಮಾಸ್ಕೇರಿ, ತಮ್ಮಣ್ಣ ಬೀಗಾರ, ಯಮುನಾ ಗಾಂವ್ಕರ್, ಸುಜಾತಾ ಹೆಗಡೆ, ಕೆ.ಜಿ.ಚೆನ್ನಯ್ಯ, ಎಂ. ಕೆ. ನಾಯ್ಕ ಮುಂತಾದವರು ಭಾಗವಹಿದ್ದರು. ವಿಠ್ಠಲ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಎಂ. ಕೆ. ನಾಯ್ಕ ನಿರೂಪಿಸಿದರು. ಆರ್. ಕೆ ನಾಯ್ಕ ಸ್ವಾಗತಿಸಿದರು. ಕನ್ನೇಶ ವಂದಿಸಿದರು. ಕಮಲಾಕರ ಭಂಡಾರಿ, ಇಂದಿರಾ, ಐಕೆ ಅನಿಲ ನೆನಪಿನ ಪುಸ್ತಕ ವಿತರಿಸಿದರು.
ಸಹಯಾನ, ಕೆರೆಕೋಣ, ಕನಸು ಸೇವಾ ಸಂಸ್ಥೆ, ಚುಟುಕು ಸಾಹಿತ್ಯ ಪರಿಷತ್,ಕನ್ನಡ ಸಾಹಿತ್ಯ ಪರಿಷತ್, ಆಧಾರ, ಆರ್.ವಿ ಪುಸ್ತಕ ಮನೆ ಜೊತೆ ಸೇರಿ ಕಾರ್ಯಕ್ರಮ ಸಂಯೋಜಿಸಿದ್ದರು.

‍ಲೇಖಕರು avadhi

27 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading