ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರರರೆ..'ಮೂಗೂರು'

ಬನಶಂಕರ್ ಆರಾಧ್ಯ

ಕನ್ನಡ ಚಲನಚಿತ್ರಗಳೂ ಸೇರಿ ದಕ್ಷಿಣ ಭಾರತದ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಮೂಗೂರು ಪಿ. ಸುಂದರಂ ಚಾಮರಾಜನಗರದತ್ತ ವೈಯಕ್ತಿಕ ಕೆಲಸದ ಮೇಲೆ ಬಂದಿದ್ದರು. (ಭಾರತದ ಮೈಕೆಲ್ ಜಾಕ್ಸನ್ ಎಂದೇ ಹೆಸರಾದ ಪ್ರಭುದೇವ ಸುಂದರಂ ಇವರ ಮಗ.)
ಸುಂದರಂ ಅವರು ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕು ಮೂಗೂರು ಗ್ರಾಮದವರು. ಮೂಗೂರು ಗ್ರಾಮ ಮೈಸೂರು ಜಿಲ್ಲೆಗೆ ಸೇರಿದ್ದರೂ ಚಾಮರಾಜನಗರಕ್ಕೆ ಬಹಳ ಹತ್ತಿರ. ಸಂತೆಮರಹಳ್ಳಿ ಪಕ್ಕದಲ್ಲಿದೆ. ಹಾಗಾಗಿ ಅವರ ಭಾಷೆ ಚಾಮರಾಜನಗರ ಜಿಲ್ಲೆಯ ಕನ್ನಡ.

ಇಂದು ಬೆಳಿಗ್ಗೆ ದೇವು ಮೆಸ್ ಗೆ ಹೋದಾಗ ದೋಸೆ ತಿನ್ನುತ್ತಾ ಕೂತಿದ್ದರು. ದೋಸೆ ಪಾರ್ಸೆಲ್ ಗಾಗಿ ಕಾಯುತ್ತಿದ್ದ ನಾನು..’ ಇವ್ರು ಮೂಗೂರು ಸುಂದರಂ ತರಹ ಇದ್ದಾರಲ್ಲಾ..?!’ ಅಂತ ನಾಕೈದು ಬಾರಿ ನೋಡಿದೆ. ಮೆಸ್ ನ ಮಂಜುಗೆ ನನ್ನ ಮುಖಭಾವ ಅರ್ಥ ಆಗಿದೆ ಅಂತ ಕಾಣುತ್ತದೆ… ಅವರು ‘ಮೂಗೂರು ಸುಂದರಂ ಅಲ್ವಾ ಮಂಜು’ ಅನ್ನುತ್ತಿದ್ದಂತೆಯೇ ‘ ಹೌದು ಸಾರ್…’ ಅಂದ. ತಕ್ಷಣ ಎದ್ದು ನನ್ನ ಪರಿಚಯ ಮಾಡಿಕೊಂಡೆ.
ಕೈತೊಳೆಯುತ್ತಾ ಎದ್ದ ಅವರು ‘ದೋಸೆ ತಿನ್ನಿ’ ಅಂತ ಹೇಳಿ, ದೋಸೆ ಕೊಡಿ ಅಂತ ಆರ್ಡರ್ ಮಾಡತೊಡಗಿದರು…! ‘ಸಾರ್ ನಾನು ನಿಮಗೆ ಕೊಡಿಸಬೇಕು…ಇದು ನಮ್ಮೂರು ಅಂತ ಹೇಳಿದೆ..’ಅಷ್ಟರಲ್ಲಾಗಲೇ ಅವರ ಜೊತೆಗಿದ್ದ ಕೋಡಿಮೋಳೆ ಗೋವಿಂದಶೆಟ್ರು ಅವರ ಬಿಲ್ ಕೊಟ್ಟಾಗಿತ್ತು..!
ಆಗ, ದೇವು ಮೆಸ್ ಮಂಜು, ‘ಸಾರ್ ಜೊತೆ ನಂದೊಂದು ಫೋಟೋ ತೆಗೀರಿ’ ಅಂದ. ನಂದೂ ಒಂದಿರ್ಲಿ ಅಂತ ನಾನೂ ಅವರ ಜೊತೆ ನಿಂತೆ…




 

‍ಲೇಖಕರು Avadhi

1 November, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading