ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರತಿ ಕಳೆದು ಹೋದಳು..

Moscow!

arathi-moscow6

ಟಾಲ್ಸ್ ಟಾಯ್ ಕಥೆಗಳನ್ನು ಶಾಲಾ ಬಾಲಕಿಯಾಗಿ ಓದುವಾಗಲಿಂದ, Russia ದೇಶದೊಂದಿಗೆ ಏನೋ ಬಾಂಧವ್ಯ, ಬೆಸುಗೆ.

ಅದು ಬೆಳೆದು ಹೆಮ್ಮರವಾಗಲು ಆಮೇಲೆ ಹುಟ್ಟಿದ ಕಾರಣಗಳು ನೂರಾರು!

ಮಾಸ್ಕೋ ನಗರ, ತುಂಬಾ stylish ಅನಿಸಿತು, busy city ಮತ್ತೆ ಚರಿತ್ರೆ ಹೆಜ್ಜೆ ಹೆಜ್ಜೆಗೂ ಕಾಡುವ, ಕಂಡದ್ದರೊಂದಿಗೆ ಮನ ಹಲವು ಘಟನೆಗಳನ್ನು ಮೆಲುಕು ಹಾಕಲು ಒತ್ತಾಯಿಸುವ ನಗರ…
ವಾಪಾಸು ಬಂದ ಮೇಲೆ ಇನ್ನಷ್ಟು ವಿಷಯ ಹಂಚಿಕೊಳ್ಳುವೆ, ಇಲ್ಲಿ ಈಗ ಮಧ್ಯರಾತ್ರಿ, ಎರಡೂವರೆ ಗಂಟೆ ಬೆಂಗಳೂರಿಗಿಂತಾ ಹಿಂದೆ!

ಕಣ್ಣ ತುಂಬಾ ಈಗ ನನಗೆ ನನಸಾದ ಈಸ್ಟಮನ್ ಕಲರ್ ಕನಸು 🌞😁😉

ಮಳೆಯಲ್ಲಿ ಮಿಂದ ಮಾಸ್ಕೋ ⛅☁☔

arathi-moscow1

ಚುಮುಗುಟ್ಟುವ ಚಳಿ, ಸುಯ್ಯನೆ ಬೀಸುವ ಕುಳಿರ್ಗಾಳಿ, ಮಂಜಿನಂತೆ ಕೊರೆಯುವ ತುಂತುರು ಮಳೆ ಹನಿ…ಅರೇ, ಸುತ್ತುವ ಕೆಲಸ ಕೆಡ್ತು ಅಂದುಕೊಳ್ಳುವಲ್ಲಿ, ಫಳಾರ್ ಎಂದು ಬಂದು ಹಲ್ಲು ಕಿರಿಯುವ ಸೂರ್ಯ!

ಆಹಾ! ಮಳೆ, ಮೋಡ, ಬಿಸಿಲುಗಳ ಕಣ್ಣಮುಚ್ಚಾಲೆಯಲ್ಲೂ, ನೋಡಲೇಬೇಕೆಂದು ಕಾದ Red Squareನ ದರ್ಶನಕ್ಕೆ ಪುಳಕಗೊಂಡ ಜೀವ, ಹೂವಾಯಿತು ಎಂಬುದೀಗ ಅನುಭವಕ್ಕೆ ಬಂತು!

ಈ ಖುಷಿ ಇನ್ನೂ ಪೂರ್ತಿ ಗೊತ್ತಾದ ಮೇಲೆ ಮಿಕ್ಕ ವಿಷಯ ಹೇಳ್ತೀನಿ 😅

ಈಗ ನಾನು, ನನ್ನ ಲೋಕದಲ್ಲಿ ಕಳೆದು ಹೋಗುವ ಸಮಯ 💕

arathi-moscow4

 

‍ಲೇಖಕರು Admin

10 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading