ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದ್ದರಿಂದ ಕನ್ನಡದಲ್ಲಿ ತದ್ರೂಪಿಯೇ ಸರಿ..

ತದ್ರೂಪಿ

bagepalli krishnamurthy

ಬಾಗೇಪಲ್ಲಿ ಕೃಷ್ಣಮೂರ್ತಿ


 

ರಾಜಹಂಸ, ಜೀವನ ಪ್ರಕಾಶನ

ರಾಜಹಂಸ, ಜೀವನ ಪ್ರಕಾಶನ

ಜೀವನ್ ಪ್ರಕಾಶನದ ರಾಜ್ಯಮಟ್ಟದ

ಯುಗಾದಿ ಕಾವ್ಯ ಸ್ಪರ್ಧೆ-2016ರ ಬಹುಮಾನಿತ ಕವಿತೆ


 

ತದ್‍ರೂಪಿ ಎಂಬ ಪದ ಬಳಸಿದಾಗ

ತದ್ರೂಪಿ ಎಂದು ಕೇಳುಗರು ಬಾವಿಸಬಾರದು

ಅರ್ಥ ಒಂದೇ ಆದರೂ ಉಚ್ಛಾರಣೆಯೂ ಮುಖ್ಯವಲ್ಲವೇ!

ವ್ಯಾಕರಣಾತ್ಮಕವಾಗಿ ಕನ್ನಡದಲ್ಲಿ ‘ರಾವೂತ್ತು’ ಎಂಬುದಿದೆ.

ಆದ್ದರಿಂದ ಕನ್ನಡದಲ್ಲಿ ತದ್ರೂಪಿಯೇ ಸರಿ.

 

womenಸೋದರ ಭಾಷೆ ತೆಲುಗಿನಲ್ಲಿ ‘ಅರ್ಕಾವೂತ್ತು’ ಉಂಟು

ಅದೇಕೋ ಬಳಕೆ ಕಡಿಮೆ

ಮೂರ್ತಿ ಬರೆಯಲೂ ಬಳಸರು ಕೀರ್ತಿಗೂ ಬಳಸರು

‘ಮೇಮಲಾಗೆ ರಾಸ್ತಾಂ’ ಅಲವಾಟು ಎನ್ನುತ್ತಾರೆ

ಎಕೋ ದ್ವಂದ್ವ ಎನಿಸುತ್ತದೆ.

 

ತದ್ರೂಪಿ ಡಾಲಿ ಕುರಿ ಮರಿಯು ಸೃಷ್ಟಿಯಾದಾಗಲೂ ದ್ವಂದ್ವವೇ

ದ್ವಂದ್ವ ಪದ ತದ್ರೂಪಿಯನ್ನು ಬಿಗಿದಪ್ಪಿದಂತಿದೆ.

ಸರ್ವರ ಆಶಯ ತಮ್ಮ ಪತ್ನಿ ವಿಶ್ವಸುಂದರಿ ಆದರೆ ಒಳಿತೆಂದೇ!

ಡಾಲಿ ಸೃಷ್ಟಿಯ ತಂತ್ರಜ್ಞಾನದಲ್ಲಿ ಹಲವು ವಿಶ್ವಸುಂದರಿಯರನ್ನು ಸೃಷ್ಟಿಸಿ

ತದ್ರೂಪಿಯ ಅರ್ಥ ಹೆಚ್ಚಿಸೋಣವೇ?

 

ವಿಶ್ವ ಸುಂದರಿ ಅಪೇಕ್ಷಿತ ಜನಾ:! ಸುಖಿನೋ ಭವಂತು:!

ಇಂತಹ ದಿವ್ಯ ಸೂತ್ರ ಅನುಸರಿಸದೆ ದ್ವಂದ್ವ ಮಾಡಿದರು.

ತದ್ರೂಪಿಯಾಗಿರಬಹುದು ತದ್‍ಬುದ್ಧಿಯ ಖಾತರೆ ಇರಲಾರದೇನೋ

ಎಂದು ದ್ವಂದ್ವಕ್ಕೆ ನಿಂತರು,

ನಿಜ ರಜನೀಕಾಂತರ ಇಂದಿರನ್ನಂತಾದರೆ.

 

ನಿಷ್ಕಲ್ಮಷ ಪ್ರೇಮಿ ‘ದೇವದಾಸ’ ನಂತೆ ಪ್ರೇಯಸಿ ಬೇರೊಬ್ಬರ ಸೊತ್ತಾದರೆ

ದ್ವಂದ್ವವಿಲ್ಲದೆ ತದ್ರೂಪಿಯಂತ ಪಾರುವನ್ನು ಸೃಷ್ಟಿಸಬಹುದಿತ್ತು

ದ್ರೌಪದಿ ನ್ಯಾಯಕ್ಕೆ ಎಡೆಯಿಲ್ಲದಂತಾಗುತ್ತಿತ್ತು.

ಲ್ಯುರಾ ಜಾಕ್ಯೂಸ್ ರಿಚರ್ಡ್‍ರೆಮಿಡಿ ಎಂಬ ಲಂಡನ್ ದಂಪತಿಗಳು

ಪ್ರೀತಿಪಾತ್ರ ನಾಯಿಯ ಸಾವಿನಿಂದ ಖಿನ್ನರಾಗಿ

ತಮ್ಮಾಸ್ತಿಯೆಲ್ಲಾ ಸುರಿದು ಮೃತನಾಯಿಯ ಡಿ.ಎನ್.ಎ ಪಡೆದು

ತದ್ರೂಪು ಎರಡು ಮರಿಯನ್ನು ಸೃಷ್ಟಿಸುತ್ತಿದ್ದಾರೆ.

 

ಅದೇ ಲಂಡನ್ ತಾಯಿ ಮಗಳಿಗೆ ಸಾರೋಗೇಟ್

ಅಜ್ಜಮ್ಮನಾಗುತ್ತೇನೆಂದು ದ್ವಂದ್ವ ಪರಿಹರಿಸಿದ್ದಾಳೆ,

ಪ್ರಿಯತಮೆ ಬೇರೊಬ್ಬನ ಸೊತ್ತಾಗಿಸಿರುವ ಪ್ರೇಮಿಗಳೇ!

ಸಮಾಜದ ಕಟ್ಟುಪಾಡುಗಳನ್ನು ದ್ವಂದ್ವಕ್ಕೀಡುಮಾಡದೇ.

ಡಾಲಿ ಕುರಿ, ಡೈಲಾನ್ ನಾಯಿ ಬಾಳು ಬಾಳದೆ

ನನ್ನ ಹಂಬಲ ಕಾಮನೆಗಳೆಲ್ಲಾ ‘ಪ್ರೀತಿಯ ಹೊಸ ವ್ಯಾಖ್ಯಾನ’

ಎಂದು ತಿಳಿದು ದ್ವಂದ್ವಾತೀತರಾಗೋಣ

‍ಲೇಖಕರು admin

31 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading