ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆತ್ಮಗಳ ಸಂವಾದ ಮನದ ಮಾತಿಗೆ ದೂರ

ಮೌನದ ಮಾತು

ನಾ ದಿವಾಕರ

ಮಾತು ಮೌನದ ನಡುವೆ
ನೋವು ಅಂಕದ ಪರದೆ ;
ಮನದಾಳದ ಸದ್ದು
ಹನಿಗಳಲಿ ಮಿಂದಾಗ
ಕದಡಿದ ಭಾವ ಸೊರಗಿದ ಜೀವ !
ಎತ್ತೆತ್ತಲೋ ನಡೆವ
ಹುಚ್ಚು ಮನಸಿಗೆ
ಕಂಬನಿಗಳ ಬೇಲಿ ;
ಇಬ್ಬನಿಯ ಬಿಂಬದಲಿ
ಹೊಳೆವ ಹೃದಯಕೆ
ಹುಸಿನಗೆಯ ರಂಗೋಲಿ !

ಆತ್ಮಗಳ ಸಂವಾದ
ಮನದ ಮಾತಿಗೆ ದೂರ ;
ನೋವು ನಲಿವಿನ ಮಿಲನ
ತುಂಬಿದೆದೆ ಭಾರ ;
ಇಂಗಿತಗಳ ಇಂಚರಕೆ
ಹಾಡು ಹಕ್ಕಿಯೆ ದೂರ !
ಸ್ವರ ಸಂಕುಲದ ಎಸಳು
ನುಡಿ ತಂತಿಯ ಮೇಲೆ
ಸರಿಗಮದ ಛಾಯೆಯಲಿ
ದನಿಯ ಮೂಡಿಸುವಾಗ
ಚಿತ್ತ ಚಂಚಲ ;ಸ್ನೇಹ ಅಚಲ !
 

‍ಲೇಖಕರು avadhi

7 July, 2014

1 Comment

  1. mmshaik

    nice..very nice kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading