ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಕಾಶ ದಿಟ್ಟಿಸಿದರೆ ಅಖಂಡ ನೆನಪುಗಳ ಫಳಫಳ ತಾರೆ..’ – ಪ್ರಜ್ಞಾ ಮತ್ತೀಹಳ್ಳಿ

ನನ್ನ ನಾಳೆಗಳಲ್ಲಿ

ಪ್ರಜ್ಞಾ ಮತ್ತಿಹಳ್ಳಿ

1
ಮಂಕಿ ಕ್ಯಾಪು ತುಂಬು ತೋಳಿನ
ಸ್ವೆಟರ್ನಲ್ಲಿ ಹುದುಗಿದ ನೆರಿಗೆ ಕೈ
ನಡುಗಿಸಿ ರುಜು ಹಾಕುವಾಗ ದೇವರೇ
ನನಗೆ ನನ್ನ ಹೆಸರು ನೆನಪುಳಿಯಲಿ
2
ಅವರವರ ಅಮ್ಮಂದಿರ ಅಂಗಿಯಲ್ಲಿ
ಬಾಯೊರೆಸಿಕೊಳ್ಳುವ ಮೊಮ್ಮಕ್ಕಳಿಗೆ
ಅಜ್ಜಿ ಬರೆದ ಪದ್ಯಗಳ ಕುಶಾಲಿಗಾದರೂ
ಓದಲಿಕ್ಕೆ ಬರುತ್ತಿರಲಿ
3
ವಾತ ಕಡಿಮೆಯಾದ ಇಳಿ ಮದ್ಯಾನ್ಹದ
ವಾಕಿಂಗಿನಲ್ಲಿ ಬೆಳ್ಳಿ ಕುರುಳ ಹಾರಿಸುವ
ಗಾಳಿಯಲಿ ತೇಲಿ ಬಂದ ಸುರಗಿಯ ಕಂಪ
ಕೆನ್ನೆಗಳ ಬೆಚ್ಚಗಾಗಿಸಲಾದರೂ ಮೂಗು
ಪತ್ತೆ ಮಾಡಲಿ
4
ಜಾರುವ ಭಯಕ್ಕೆ ತೆಗೆದಿಟ್ಟ ಉಂಗುರದ
ಹರಳ ಮಸುಕು ಬಣ್ಣ ಯಾವುದೆಂದು
ಕಣ್ಣಲ್ಲದಿದ್ದರೂ ತಡಕಾಡುವ ಬೆರಳು
ಗುರುತಿಸಲಿ
5
ಮೆಟ್ಟಿಲ ಹತ್ತತ್ತಿ ತಾರಸಿಯ ತುದಿಯ
ಆಕಾಶ ದಿಟ್ಟಿಸಿದರೆ ಅಖಂಡ ನೆನಪುಗಳ
ಫಳಫಳ ತಾರೆ ಬೆಳಕಲ್ಲಿ ಕತ್ತಲ
ಶೂನ್ಯ ಚುಚ್ಚದಂತೆ ಸಣ್ಣ ನಗೆಯ
ತುಂಡು ಚಂದಿರ ಇದ್ದಿರಲಿ
6
ಕೋವಿ ಕತ್ತಿ ಬಾಂಬುಗಳ ಸುದ್ದಿ
ಬಿತ್ತರಕೆ ತತ್ತರಿಸಿ ಹೊರಳಾಡಿ ತಡರಾತ್ರಿಯ
ಜೊಂಪು ಹರಿದಾಗ ಹಸಿರು ಹುಲ್ಲಿನ ಪುಟ್ಟ
ಅಂಗಳಕೆ ಅದೃಶ್ಯ ಇಬ್ಬನಿ ಬರೆದ
ಒದ್ದೆ ಬೆಳಗಿರಲಿ

‍ಲೇಖಕರು avadhi

1 April, 2013

3 Comments

  1. ಪ್ರಕಾಶ ಬಿ. ಜಾಲಹಳ್ಳಿ

    ನಿಮ್ಮ ಕವಿತೆಯ ಸಾಲುಗಳು “ಫಳಫಳ ತಾರೆ ಬೆಳಕಲ್ಲಿ ಕತ್ತಲ
    ಶೂನ್ಯ ಚುಚ್ಚದಂತೆ ಸಣ್ಣ ನಗೆಯ
    ತುಂಡು ಚಂದಿರ ಇದ್ದಿರಲಿ” ಹೊಸ ಹೊಸ ಪ್ರತಿಮೆಗಳಿಂದ ಕೂಡಿವೆ ಚೆನ್ನಾಗಿವೆ…

  2. Vasuki

    Loved it, especially the first one…told with such simplicity and poignancy!!!

  3. shanthi k.a.

    sundara kavite

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading