ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕವರ್ಧನ ಹೇಳುತ್ತಾರೆ..

ನಿನ್ನೆ ಪ್ರಕಟವಾದ ’ಪುಸ್ತಕೋದ್ಯಮ ಕಾರ್ಯಾಗಾರ’ ಆಹ್ವಾನ ಪತ್ರಿಕೆ ನೋಡಿ

ಅತ್ರಿಯ ಅಶೋಕವರ್ಧನರು ಪ್ರತಿಕ್ರಯಿಸಿದ್ದು ಹೀಗೆ :

– ಅಶೋಕವರ್ಧನ

ಈ ಕಾರ್ಯಾಗಾರದ ಮೂಲ ಗ್ರಹಿಕೆ “ಕನ್ನಡ ಪುಸ್ತಕೋದ್ಯಮದ ಕುರಿತು ನಮ್ಮಲ್ಲಿ ಸಾಕಷ್ಟು ಚಿಂತನೆ ನಡೆದಿಲ್ಲ” ಎಂಬುದೇ ತಪ್ಪು. ನನ್ನ ಅನುಭವಕ್ಕೇ ಬಂದಂತೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸುವರ್ಣ ಮಹೋತ್ಸವದಂದು ನಡೆದ ಕಾರ್ಯಾಗಾರದಿಂದ ತೊಡಗಿ ಈಚಿನ ಹೆಚ್ಚು ಕಡಿಮೆ ಪ್ರತಿ ಸಮ್ಮೇಳನದವರೆಗೂ ಅಸಂಖ್ಯ ಗೋಷ್ಠಿಗಳೂ, ಕಾರ್ಯಾಗಾರಗಳೂ ಈ ಕುರಿತು ನಡೆದಿವೆ. ಆಗದಿರುವುದು – ಅನುಷ್ಠಾನ ಮಾತ್ರ. ನಾನು ಮತ್ತೆ ಮತ್ತೆ ಕೇಳುತ್ತಲೇ ಇದ್ದೇನೆ – ಅಂಕೋಲದಲ್ಲಾದ ಕಾರ್ಯಾಗಾರದಲ್ಲಿಂದ ನಾನೆತ್ತಿದ ಪುಸ್ತಕ ನೀತಿಯ ಕುರಿತ ಜಿಜ್ಞಾಸೆ ಡಾ| ಸಿದ್ಧರಾಮಯ್ಯನವರಿಂದ ತೊಡಗಿ ಇಂದಿನ ಡಾ| ಸಿದ್ಧಲಿಂಗಯ್ಯನವರವರೆಗೆ ಒಮ್ಮೆಯೂ ಚರ್ಚೆಗೆ ಎತ್ತಿಕೊಳ್ಳಲಿಲ್ಲ ಯಾಕೆ? ಕನ್ನಡ ಪುಸ್ತಕೋದ್ಯಮ ಹಣಕಾಸಿನ ವಹಿವಾಟಿನಲ್ಲಿ ಬಹು ವ್ಯಾಪಕವಾಗಿ ಬೆಳೆದಿರುವುದೇನೋ ನಿಜ ಆದರೆ ಓದುಗನನ್ನು ಬಿಟ್ಟು ‘ಕೊಳ್ಳುಗ’ ಕೇಂದ್ರಿತವಾಗಿ ತೀರಾ ಅನಾರೋಗ್ಯಕರವಾಗಿ ಬೆಳೆದಿದೆ ಎನ್ನುವ ನನ್ನ ಅಹವಾಲನ್ನು ಎತ್ತಿಕೊಳ್ಳಲು ಯಾವ ಖ್ಯಾತನಾಮರೂ ಸಿದ್ಧರಿಲ್ಲ ಯಾಕೆ? ಸರಕಾರೀ ಊರೇಗೋಲು (ತುಂಬ ಸಣ್ಣ ಮಾತು. ಇಂದು ಪುಸ್ತಕೋದ್ಯಮ ಕೇವಲ ಪರಭಾರೆಯಾದ ಸರಕಾರೀ ಅಂಗವೇ ಆಗಿದೆ ಎಂದರೆ ತಪ್ಪಿಲ್ಲ) ಕಳಚಿ ಇಂದು ನಿಲ್ಲಬಲ್ಲ ಒಬ್ಬನೇ ಒಬ್ಬ ಕನ್ನಡ ಪ್ರಕಾಶಕನಿಲ್ಲ. ಈ ಕಾರ್ಯಾಗಾರವಾದರೂ ಹೂರಣ ಬಿಟ್ಟು ತೋರಣ ಶೃಂಗಾರಕ್ಕೂ ಪ್ರಾಯೋಗಿಕ ಅನುಭವ ಅಥವಾ ಅನುಷ್ಠಾನಕ್ಕೇ ಅಳವಡುವ ವಿಚಾರಗಳನ್ನು ಬಿಟ್ಟು ಕೇವಲ ಕಟ್, ಪೇಸ್ಟ್ ಕಲಾವಿದರಿಂದಲೂ ಶೋಭಿಸಲಿದೆ. ಭರ್ಜರಿ ಅನುದಾನದಿಂಡ ತೊಡಗಿ ಟೀಯೇ, ಡೀಯೇ, ರೆಮ್ಯುನರೇಶನ್, ಪಬ್ಲಿಸಿಟಿ, ಸಮ್ಮಾನ ಮತ್ತು ಕೊನೆಯಲ್ಲಿ ಪ್ರಬಂಧಗಳ ಇನ್ನೊಂದೇ ಮನುಷ್ಯನಾದವ ಓದದ ಹೆಬ್ಬೊತ್ತಗೆಯನ್ನು ತಂದು ಕನ್ನಡಮ್ಮನ ಉಡಿಗೆ ಭಾರವಾಗುವುದರಲ್ಲಿ ಸಂಶಯವೇ ಇಲ್ಲ.]]>

‍ಲೇಖಕರು G

22 April, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading