ಊರು- ಬೇರು
ನನ್ನೂರಿಗೆ
ರಾತ್ರಿ ಕೊನೆಯ ಬಸ್ಸಿಗೆ ಹೋಗಿ
ಬೆಳಿಗ್ಗೆ ಮೊದಲ ಬಸ್ಸಿಗೆ ಹೊರಟು
ಬರುವಾಗ, ನನ್ನವ್ವನಿಗೆ ಹೇಳಿದೆ ನಾನು,
ಇಲ್ಲಿದ್ದು ನೀನು ಮಾಡುವುದಾದರೂ ಏನು ?
ಯಾರಿದ್ದಾರೆ ಇಲ್ಲಿ ನಿನಗೆ ?
ಬರಬಾರದೆ ಜೊತೆಗೆ.
ಈಗಲೋ ಆಗಲೋ ಬೀಳುವ ಸೂರು
ತಂಗಳು ಮುದ್ದೆಗೆ ಎರಡು ದಿನದ ಹಿಂದಿನ ಸಾರು
ಇರುವ ಹತ್ತು ಕುಂಟೆ ಜಮೀನು,
ಮಾಡಿದ ಸಾಲಕ್ಕೆ ಅದೇ ಜಾಮೀನು,
ರಾಜ್ಯ ಹೆದ್ದಾರಿಗೆ ಅದಕ್ಕೂ,
ಆಗಲೇ ಆಗಿದೆ ಫೋರ್ ಒನ್.
ಬೊಚ್ಚು ಬಾಯಲಿ ಪೆಚ್ಚುನಗೆ ನಕ್ಕು
ನನ್ನವ್ವ ಆಡಿಸಿದಳು ತಲೆ ಎಡಬಲ.
ಭೂಮಿ ಉಳಿಸಿಕೊಳ್ಳುವ ಊರವರ
ಹೋರಾಟಕ್ಕೆ ಅವಳದೂ ಬೆಂಬಲ.
ತನ್ನ ಕೊನೆ ಉಸಿರಿರುವವರೆಗೆ
ಪರಭಾರೆಯಾಗಬಾರದೆಂಬ ಹಂಬಲ.
ತನ್ನ ಬೇರುಗಳನ್ನು ಊರಲ್ಲೆ ಊರಿರುವ,
ಅವ್ವನಿಗೆ ತನ್ನದೆ ಮಣ್ಣಲ್ಲಿ ಮಣ್ಣಾಗುವಾಸೆ.
ಊರು ಬಿಡಿಸುವ ಯತ್ನ ವ್ಯರ್ಥವೆಂದುಕೊಂಡು
ಬಸ್ಸಿನಲ್ಲಿ ಹತ್ತಿ ಕುಳಿತು ಅಂದುಕೊಂಡೆ ನಾನು,
ಗಿಡವನ್ನು ಕಿತ್ತು ನೆಡಬಹುದಲ್ಲದೆ,
ಊರು – ಬೇರು
ಮರವನ್ನು ಕಿತ್ತು ನೆಡಲಾದಿತೆ







Great poem…
ನನ್ನ ಊರಿನಲ್ಲಿ ಇಂತದ್ದೆ ಜಮೀನಿನ ಜೊತೆಯಲ್ಲಿ ಕೂತಿರುವ ನನ್ನ ಅಪ್ಪ ನೆನಪಾದರು. 70 ವರ್ಷದ ಈ ಮುದಿ ಪ್ರಾಯದಲ್ಲೂ ಅವರಿಗೆ ಹುಟ್ಟಿದ ನೆಲ, ಮನೆ ಅಂದರೆ ಏನೋ ಪ್ರೀತಿ, ಮೋಹವನ್ನ ಮೀರಿದ ಶುದ್ಧ ಪ್ರೇಮ.
ಒಳ್ಳೆಯ ಕವನ ಬರೆದಿದ್ದಕ್ಕೆ ಪ್ರಣಾಮಗಳು. ಕವನದ ಪ್ರತಿ ಅಗುಳೂ ರುಚಿಯೇ!!!
-ಮನು
– ಮಣ್ಣಿನ ವಾಂಛೆಯ ಕುರಿತಾದ ಅರ್ಥಪೂರ್ಣ ರಚನೆ ಜೊತೆಗೆ ಓದುಗನನ್ನು ಕಾಡುವಂತಹುದು.
Nice!
Nice…
athi uttama kavite..
ತುಂಬಾ ಚೆನ್ನಾಗಿದೆ
-ಅನಿಲ
ತುಂಬ ಚೆನ್ನಾಗಿದೆ. ಕವಿತೆ ಹೀಗೆ ಸರಳವಾಗಿ ಅರ್ಥವಾಗುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ?
ಗಿಡವನ್ನು ಕಿತ್ತು ನೆಡಬಹುದಲ್ಲದೆ.
ಊರು-ಬೇರು
ಮರವನ್ನು ಕಿತ್ತು ನೆಡಲಾದಿತೆ
-ತುಂಬಾ ಚೆನ್ನಾಗಿದೆ.
Liked it very much !