ಕವಿತೆ ಬರೆಯುವದೆಂದರೆ
ಡಾ.ಎಂ.ಡಿ.ಒಕ್ಕುಂದ
ಕವಿತೆ ಬರೆಯುವದೆಂದರೆ
ಬತ್ತಲಾಗುವದು
ಅಕ್ಕನ ಹಾಗೆ
ಹಾಗೇ
ಬೆತ್ತಲು ಮಾಡುವದು
ಕೌಶಿಕನ
ಹಾಗೇ
ಚನ್ನಮಲ್ಲಿಕಾಜರ್ುನನಂಥ ಆತ್ಮಸಂಗಾತಿಯ
ಅಡಗುದಾಣವ ಹುಡುಕಿ
ಅಲ್ಲಿಂದಲೇ ಸ್ಪೋಟಗೊಳ್ಳುವದು
ಪ್ರಜ್ವಲಿಸುವದು
ಹಾಗೇ
ಮಾನ ಮುಚ್ಚುವಷ್ಟಾದರೂ
ಕಪ್ಪು ಕೂದಲಿನ ಜಾಳಿಗೆಯಲ್ಲಿ
ಜೋತು ಬೀಳುವದು
(ಮುಚ್ಚಿದ್ದು ಯಾರ ಮಾನ?)
ಬತ್ತಲೆ ಮತ್ತು ಕಪ್ಪು ಜಾಳಿಗೆಗಳ ಮಧ್ಯದ
ಮೈಯುದ್ದದ ಅಖಂಡ ಕಿಂಡಿಯ ಗರ್ಭದಲ್ಲಿ
ತೇಲಾಡುತ್ತವೆ ನಿಜದ ಕವಿತೆಯ
ರಾಶಿ ರಾಶಿ ಭ್ರೂಣಗಳು
ಕನವರಿಸುತ್ತವೆ-
ಬತ್ತಲೆ ಮತ್ತು ಹೊದಿಕೆಗಳು ಮುಖಾಮುಖಿಯಾಗುವ
ದಿವ್ಯ ಗಳಿಗೆಗಾಗಿ, ನಿಜದ ಬಯಲಿಗಾಗಿ
ಆದರೆ
ಆತ್ಮಕಥೆ ಬರೆವ ದೊಡ್ಡ ಧೈರ್ಯ ಯಾರಿಗಿದೆ?
ಅಕ್ಕನಂತೆ
ಆತ್ಮಕಥೆಗಿಂತ ದೊಡ್ಡ ಕಾವ್ಯ ಯಾವುದಿದೆ?
ಅವಳ ವಚನದಂತೆ







nice..hidisitu..