ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಕಾಲಿಗೆ ಬಿದ್ದು, ಕಾಲುಂಗುರ ತೆಗೆದುಬಿಡು..

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು.

ನನ್ನ ಅಮ್ಮ ನನ್ನ ಬಗ್ಗೆ ಕೇಳಿದರೆ
ಉರಿಯುತ್ತಿರುವ ದೀಪವನು ಆರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ನಿನ್ನ ಕಣ್ಣಲ್ಲಿ ಎರಡು ಹನಿ ಸುರಿಸಿಬಿಡು.

ನನ್ನ ಅಪ್ಪ ನನ್ನ ಬಗ್ಗೆ ಕೇಳಿದರೆ
ಅವರ ಬೆನ್ನನ್ನೊಮ್ಮೆ ನೇವರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವರ ಊರುಗೋಲನ್ನೇ ಮುರಿದುಬಿಡು.

ನನ್ನ ತಂಗಿ ನನ್ನ ಬಗ್ಗೆ ಕೇಳಿದರೆ
ಬರಿದಾದ ಕೈಯ ಮಣಿಕಟ್ಟ ತೋರಿಸು,
ಆದರೂ ಅರ್ಥವಾಗಲಿಲ್ಲವೆಂದರೆ
ರಕ್ತ ಸಿಕ್ತವಾದ ಈ ರಾಖಿಯನು ಮುಂದಿರಿಸು.

ನನ್ನ ತಮ್ಮ ನನ್ನ ಬಗ್ಗೆ ಕೇಳಿದರೆ
ನಾ ಬರುತಿದ್ದ ಬರಿದಾದ ದಾರಿ ತೋರಿಸು,
ಆದರೂ ಅರ್ಥವಾಗಲಿಲ್ಲವೆಂದರೆ
ಅವನ ಮುಖವನ್ನೊಮ್ಮೆ ಎದೆಗವಚಿ ಸಂತೈಸು.

ನನ್ನ ಹಂಡತಿ ನನ್ನ ಬಗ್ಗೆ ಕೇಳಿದರೆ
ತಲೆ ತಗ್ಗಿಸಿ ಒಂದು ದೀರ್ಘ ನಿಟ್ಟುಸಿರ ಬಿಡು,
ಆದರೂ ಅರ್ಥವಾಗಲಿಲ್ಲವೆಂದರೆ
ಅವಳ ಕಾಲಿಗೆ ಬಿದ್ದು, ಕಾಲುಂಗುರ ತೆಗೆದು ಬಿಡು.

ನನ್ನ ಮಗಳು ನನ್ನ ಬಗ್ಗೆ ಕೇಳಿದರೆ
ಅವಳ ಹಣೆಗೊಂದು ಹೂ ಮುತ್ತನಿಡು,
ಆದರೂ ಅರ್ಥವಾಗಲಿಲ್ಲವೆಂದರೆ
ಅವಳನ್ನು ಬಿಗಿದಪ್ಪಿ ಜೋರಾಗಿ ಅತ್ತುಬಿಡು.

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು.
*
(ಹಿಂದಿಯ ಒಂದು ಮೇಲ್ ನ ಆಧರಿಸಿ ರಚಿಸಿದ್ದು. ಯಾರು ಎಂದು ಗೊತ್ತಿಲ್ಲ )

‍ಲೇಖಕರು Admin

7 January, 2016

12 Comments

  1. Bhagya Chikkanna

    ಭಾವುಕ… ಅರ್ಥಗರ್ಭಿತ… ಯಾರೇ ಬರೆದಿದ್ದರೂ, ಅವರಿಗೆ ಇಲ್ಲಿಂದಲೇ ನನ್ನದೊಂದು ಒಂದು ದೊಡ್ಡ ಸಲಾಂ…

    • ತುಂಬಾ

      ತುಂಬಾ ಚನ್ನಾಗಿದೆ

      • Anonymous

        Thank u

        • ಮಂಜುವಾಣಿ

          ಧನ್ಯವಾದಗಳು.

    • ಮಂಜುವಾಣಿ

      ಧನ್ಯವಾದಗಳು. ನನ್ನ ಕವನದ ಒಳ್ಳೆ ವಿಮರ್ಶೆಗಾಗಿ.

  2. Vijaya lakshmi S.P.

    Heart Touching and Beautiful…..

  3. Sudha chidananda gowď

    Very very meaningful. .heart touching….

  4. Mallappa

    ಒಂದೇ ವಸ್ತು ಪರಿಸರದ ಬದಲಾವಣೆಗೆ ಬದಲಾದ ಅಭಿವ್ಯಕ್ತಿ ಬಯಸುತ್ತದೆ. ಸ್ವೀಕರಿಸುವವರೂ ತಮ್ಮ ತಮ್ಮ ವ್ಯಕ್ತಿತ್ವದ ಅನುಸಾರ ಸ್ವೀಕರಿಸುವರು. ಎಲ್ಲವೂ ನಿಜ ಆದರೆ ಎಲ್ಲವೂ ವ್ಯತ್ಯಾಸ. ಕವನ ಚನ್ನಾಗಿದೆ.

    • ಮಂಜುವಾಣಿ

      ಧನ್ಯವಾದಗಳು. ನನ್ನ ಕವನದ ಒಳ್ಳೆ ವಿಮರ್ಶೆಗಾಗಿ.

  5. Chaithra

    very nice !!! super ….. obba sainikana matinantide

    • Anonymous

      Thank u.

  6. Anonymous

    Superb madam.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading