ಮೂಲ – ಸ್ಪ್ಯಾನಿಷ್ ಕವಿ ಫೆಡೆರಿಕೊ ಗಾರ್ಸಿಯಾ ಲೋರ್ಕಾ
ಆಗಸ್ಟ್ 1936 ಸ್ಪ್ಯಾನಿಷ್ ಸಿವಿಲ್ ವಾರ್, ಆರಂಭಿಕ ದಿನಗಳು. ಸರ್ವಾಧಿಕಾರಿ ಫ್ರಾಂಕೊನ ಸೈನಿಕರು ಗಾರ್ಸಿಯಾ ಲೋರ್ಕಾನನ್ನು ಅವನ ಹಳ್ಳಿಗಾಡಿನ ಮನೆಯಲ್ಲಿ ಬಂಧಿಸಿದರು. ಕೆಲವು ದಿನಗಳ ನಂತರ ಅವನನ್ನು ಕೊಂದರು. ಲೋರ್ಕಾನ ದೇಹ ಎಂದಿಗೂ ಪತ್ತೆಯಾಗಲಿಲ್ಲ.
ಕನ್ನಡಕ್ಕೆ- ಗಿರಿಧರ್ ಖಾಸನೀಸ್
ಹಸಿರು
ನನಗೆ ನೀನು ಬೇಕು ಹಸಿರು
ಹಸಿರು ಗಾಳಿ ಹಸಿರು ಕೊಂಬೆ
ನದಿಯ ಮೇಲಿನ ದೋಣಿ
ಬೆಟ್ಟದ ಮೇಲಿನ ಕುದುರೆ
ಅವಳ ಸೊಂಟದ ಮೇಲಿನ ನೆರಳು
ಜೋಳಿಗೆಯ ಮಗು
ಹಸಿ ಮಾಂಸ ಹಸಿರು ಕೂದಲು
ತಣ್ಣನೆಯ ಬೆಳ್ಳಿ ಬಿಸಿಲು
ಹಸಿರು ನನಗೆ ನೀನು ಬೇಕು
ಚಂದ್ರನ ಬೆನ್ನ ಹಸಿರು
ನಕ್ಷತ್ರದ ಮಡಿಲ ಹಸಿರು
ಮೋಡದ ಮರೆಯ ಹಸಿರು
ಅವಳ ಉಸಿರಿನ ಹಸಿರು
ನನಗೆ ನಿನ್ನ ಹಸಿರು ಬೇಕು
ಹಿಮದ ಬೆಚ್ಚನೆಯ ಹಸಿರು
ಬೆಳಗಿನ ಹಾದಿ
ಮರದ ಗಾಳಿ
ಒರಟು ಕೊಂಬೆ
ಮೀನಿನ ನೆರಳು
ಗುಡ್ಡದ ಮೇಲೊಂದು ಕಾಡುಬೆಕ್ಕು
ಕಡಲ ಮೇಲೊಂದು ಬಿಸಿಲುಕುದುರೆ
ಯಾರು ಬರುತ್ತಾರೆ – ಎಲ್ಲಿಂದ ತರುತ್ತಾರೆ
ಹಸಿ ಮಾಂಸ ಹಸಿರು ಕೂದಲು
ಕಹಿ ಸಮುದ್ರ ಹಸಿದ ಗಾಳಿ …
ಕುಡಿದ ಮತ್ತಿನಲ್ಲಿ ಗೇಟ್ ಬಡಿದ ಪೊಲೀಸ
ಕೂಗುತ್ತಾ ಕೇಳಿದ
ಎಲ್ಲಿ ಹೋಯಿತು ಹಸಿರು
ಎಲ್ಲಿ ಅಡಗಿಕೊಂಡಿಯೇ ಹಸಿರು?






0 Comments