ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ಹುಟ್ಟಿದ್ದೇ ಇರುಳನ್ನು ಹಗಲು ಮಾಡಲು…

akshya kanthabailu.

ಅಕ್ಷಯ ಕಾಂತಬೈಲು

2
ನಿದ್ರೆಯ ಕಾಲಬೆರಳು
ಅವಳ ಕಾಲಬೆರಳುಗಳ
ನೆಕ್ಕುತ್ತಾ ಬದುಕುತ್ತಿರುವ
ಜೀವಗಳ ಬಗೆಗೆ ಸೋಜಿಗವೆನಿಸುವುದಿಲ್ಲ
ಅವಳು ಹುಟ್ಟಿದ್ದೇ ಇರುಳನ್ನು ಹಗಲು
ಮಾಡಲು ಮತ್ತು ಹಗಲನ್ನು ಇರುಳು ಮಾಡಲು
ಸೂರ್ಯ ಚಂದಿರರೂ ದಿನದ ಕೆಲಸ
ಮಾಡಿ ದಣಿದು ಬಂದು ಇವಳ ಹಾಸಿಗೆಯನ್ನೇ
ಆಧರಿಸುವುದುಂಟು!
ಒಮ್ಮೆ ಇವಳೊಂದಿಗೆ ಮಲಗಿದರೆ ಏಳಲು
ಮನಸಾಗದು
ಹಣ್ಣುಹಣ್ಣು ಮದುಕ ಹೇಳುತ್ತಾನೆ:
ರಾಮಾಯಣ ಕಾಲದವಳಾದ ಈಕೆ
ಕುಂಭಕರ್ಣನಿಗೆ ಹತ್ತಿರದ ಸಂಬಂಧಿ
ಒಮ್ಮೆ ಅವಳ ಮೇಲೆ ಆಸೆ ಹುಟ್ಟಿದರೆ
ಮಾಯಾ ದಿಂಬಿನಂತೆ ಬಂದ ಆಕೆಯ
ತೊಡೆಗೆ ತಲೆ ಒರಗುವುದಂತೆ
ಎದ್ದಾಗ ಬಾಯಿ ಅವಳ
ಕಾಲಬೆರಳಿನಲ್ಲಂತೆ!

‍ಲೇಖಕರು avadhi-sandhyarani

25 August, 2015

5 Comments

  1. Noorulla Thyamagondlu

    ಚೆನ್ನಾಗಿದೆ

  2. SMITHA MANJINBILE

    CHENNAGIDE.

  3. Akshaya

    pratikriyege dhanya.

  4. mahesh kalal

    fine

  5. ನಾರಾಯಣಪ್ಪ

    ಚನ್ನಾಗಿದೆ.ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading