ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ಕಲ್ಲಾದರೆ..!

ಆಮಿರ್ ಬನ್ನೂರು

ಕಲ್ಲೆಂದರೆ ತುಂಬಾ ಇಷ್ಟ
ಕರಿಗಲ್ಲಾದರೆ ಮತ್ತಷ್ಟು
ಅವಳೂ ಕಲ್ಲಿನಂತೆ
ಮನಸ್ಸು ಮಾತ್ರ ಒರಟು
ಹೃದಯ ತುಂಬಾ ಮೃದು
ಕಲ್ಲು ಇಷ್ಟವಾದಷ್ಟು
ಅವಳು ಹತ್ತಿರವಾಗುತ್ತಾಳೆ

ಯಾಕೆ ಗೊತ್ತಾ
ಕಲ್ಲನ್ನು ಕೆತ್ತಿದರೆ ಮಾತ್ರ
ಸುಂದರ ಮೂರ್ತಿಯಾಗಲು ಸಾಧ್ಯ
ಅವಳ ಮನಸ್ಸಿನಲ್ಲಿ
ಇಶ್ಕಿನ ಬೀಜ ಬಿತ್ತಿದರೆ ಮಾತ್ರ
ಹೃದಯದಲ್ಲಿ ಪ್ರೀತಿಯ ಹೂವು
ಅರಳಲು ಸಾಧ್ಯ

ಕಲ್ಲಿಗೊಂದು ಶ್ರೇಷ್ಠತೆ ಇದೆ,
ಕೆತ್ತಿದಷ್ಟು ಮೂರ್ತಿ ಅಂದವಾಗುತ್ತೆ
ಅವಳ ಪ್ರೀತಿಯೂ ಅಷ್ಟೇ
ದಿನಗಳು ಉರುಳಿ ಹೋದಷ್ಟೂ
ಮೊಹಬ್ಬತ್ ಗಟ್ಟಿಯಾಗುತ್ತೆ

ಮೂರ್ತಿಯಾಗಲು ಕೆತ್ತಬೇಕು
ಪ್ರೀತಿ ಸಿಗಲು ಕಾಯಬೇಕು.

‍ಲೇಖಕರು Admin

5 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading