ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವಳಿಗೀಗ ಪ್ರತಿಕ್ಷಣವೂ ಅಗ್ನಿದಿವ್ಯ…’ – ನಿಶಾ ಗೋಪಿನಾಥ್

ಹೆಣ್ತನಕೆ ಅಗ್ನಿದಿವ್ಯ

ನಿಶಾ ಗೋಪಿನಾಥ್

ಸ್ವಪ್ಮ ಸೌಧಗಳರುಳಿವೆ
ರಾಶಿ ರಾಶಿಯಾಗಿ
ಹೆಣ್ಣಿನ ಲೋಕದ ಒಳಗಣ್ಣಿನಲ್ಲಿ
ದಿವ್ಯ ಜ್ಯೋತಿ ನಂದಿಹೋಗಿದೆ
ಸೂರ್ಯ ಚಂದ್ರರೇ ಸಾಕ್ಷಿ
ಅವಳ ದಾರಿ ತುಂಬ ಕಲ್ಲು ಮುಳ್ಳು

ವೇದ, ಉಪನಿಷತ್ತು, ಪುರಾಣ
ಅಲ್ಲೂ ವನಿತೆಗೆ ಜಾಗವಿರಲಿಲ್ಲ
ಮನುವಿನದ್ದೇ ಅಟ್ಟಹಾಸ
ಹೆಣ್ತನಕೆ ಅಗ್ನಿಸ್ಪರ್ಶ ಮಾಡಿ
ಬೀರಿದನವ ಮಂದಹಾಸ
ಈಗಲೂ ಗಂಡಿನದ್ದು ಅದೇ ದುಸ್ಸಾಹಸ
 
ದೇವತೆಗಳಿಗೆ ಹೋಲಿಸಿ
ಅಟ್ಟಕ್ಕೇರಿಸಿದ್ದಾರೆಲ್ಲ
ನಿತ್ಯ ಪಾತಾಳದ ಗರಡಿಯ ಬದುಕು
ನೋವನ್ನೇ ಹಂಚಿಕೊಳ್ಳಬೇಕಿದೆ
ಅವಳು ಇದಕು ಅದಕು ಎದಕು…
 
ಕಾಲ ಉರುಳಿ, ಕನಸು ಕಮರಿ
ನರಳುತ್ತಿದೆ ಕಡಲು ಕೂಗಿ ಕರೆದು
ನೋವಿನ ಜ್ವಾಲಾಗ್ನಿಗೆ
ಶಾಂತಿ ಸಮುದ್ರ ಕಲಕಿದೆ
ಪ್ರವಾಹ ಉಕ್ಕಿ ಹರಿಯುತ್ತಿದೆ
 
ಪಂಜರದ ಹಕ್ಕಿ ಉಸಿರಗಟ್ಟಿದೆ
ಭ್ರಮೆಯ ಸಮಾದಿಯಡಿ
ಸುಟ್ಟು ಕರುಕಲಾಗಿದೆ
ಪುರುಷ ಜಗತ್ತಿನಲ್ಲಿ ಕೇಕೆ ಸದ್ದಿಗೆ
ಕನಸು ಹೊತ್ತು ಅರಳುತ್ತಿದ್ದ ಹೂವ
ನಸುಕಿನಲ್ಲಿ ನರಳಿಸಿ ಕೊಂದ ಸಂಭ್ರಮ
 
ಕೈಗೆ ಸಿಕ್ಕ ಅಬಲೆಯ ಮೇಲೆ
ಪ್ರತಿನಿತ್ಯ ದೌರ್ಜನ್ಯ
ರಕ್ಕಸರ ಆರ್ಭಟಕೆ
ರಕ್ತ ಕಾರಿ ನಲುಗುತ್ತಿದೆ
ಸ್ತ್ರೀಕುಲವು ನರಳಿ ನರಳಿ
ಅವಳಿಗೀಗ ಪ್ರತಿಕ್ಷಣವೂ ಅಗ್ನಿದಿವ್ಯ
 

‍ಲೇಖಕರು G

2 September, 2014

1 Comment

  1. mmshaik

    nice madam..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading