-ರಾಘವೇಂದ್ರ ಜೋಶಿ
ನಮಸ್ಕಾರ.
ಹೇಗಿದ್ದೀ ಮಾರಾಯ
ಎಲ್ಲೆಲ್ಲೂ ನಿನ್ನದೇ ಮಾತು.
ತಿರುಪತಿ ಹುಂಡಿಯಲ್ಲಿ
ಕ್ರಿಸ್ತನ ಶಿಲುಬೆಯಲ್ಲಿ
ಸಂಕಟದಲ್ಲಿ
ಸಂಕಷ್ಠಿಯಲ್ಲಿ
ಪ್ರತಿ ವಿಮಾನದ
ಪತನದಲ್ಲೂ..
ಇನ್ನೆಷ್ಟು ಉಬ್ಬುವೆ
ಇನ್ನೆಷ್ಟು ಕೊಬ್ಬುವೆ
–
ಅಣುರೇಣು ತೃಣಕಾಷ್ಠ
ಎಲ್ಲ ಮಣ್ಣಾಂಗಟ್ಟಿ.
ಗುಡಿಸಲಿನ ಸೋಲು
ಕೆದರಿದ ಕೂದಲು
ಹಸಿದ ಹೈವೇಗಳು
ಮತ್ತು
ನಿಶೀಥ ರಾತ್ರಿಗಳ
ನಿಷಿದ್ಧ ಮನಸುಗಳು..
ಅಲ್ಲೇಕಿಲ್ಲ ನಿನ್ನ
ಹಾಜರಾತಿ?
–
ನೀನು ಕೂಡ
ಅಷ್ಟೇ ಮಾರಾಯ್ತಿ.
ಕಾಫೀ ಡೇ
ಬ್ಲ್ಯಾಕ್ ಫಾರೆಸ್ಟು
ಜೊತೆಗೇ
ಎಂಥದೋ ಕರೆಂಟಿನ
ಐಸ್ ಕ್ರೀಮು.
ಮಾಲ್ ಗಳ
ಸ್ಕೇರಿ ಹೌಸ್ ಗಳಲ್ಲಿ
ಭಯಕ್ಕೆ ಬರವಿದೆ
ಮತ್ತು
ನಿರ್ಭೀತ ಅನುಭೂತಿ!
ಕುಂಟು ಕಾಲಿಗೆ
ಎಂಟಾಣೆ ಲೆಕ್ಕ
ಅಲ್ಲಿಗೆ ಬಾಕಿ
ಎಲ್ಲ ಮುಕ್ತಾಯ..
–
ನೀವಿಬ್ಬರೂ ಅಷ್ಟೇ
ನೀವಿಬ್ಬರೂ ಒಂದೇ.
ಥೇಟ್ ಸಕ್ಕರೆ
ಪಾಕದ ಪಡಿಯಚ್ಚು.
ದುರಂತದ ಶಿಖರ
ಇಲ್ಲಿದೆ ನೋಡಿ.
ನಿಮಗೆ ಕನಸು
ನೋಡುವ ಕಣ್ಣುಗಳಿಲ್ಲ;
ನಮಗೆ ಕನಸು
ಕಾಣುವ ಮನಸೇ ಇಲ್ಲ.
ಅಂಗೈಯಲ್ಲಿ ಅಂಗಾರವಿಲ್ಲ
ಡಮರುಗವಿಲ್ಲ
ಕಮಂಡಲವಿಲ್ಲ.
ಆದರೂ ಶಪಿಸಬಲ್ಲೆವು:
ಕಣ್ಣಿಲ್ಲದ ನೀವುಗಳು
ಈಗಿಂದೀಗಲೇ
ಸಾವಿರ
ಕಣ್ಣುಗಳ
ನವಿಲಾಗಿ ಹುಟ್ಟಿರಿ.
ಸದ್ಯಕ್ಕೆ
ಹಾಳಾಗಿ ಹೋಗಿ
ಸುಖವಾಗಿರಿ!]]>
ಅವರಿಬ್ಬರಿಗೊಂದು ಶಾಪ!
ನಿಮಗೆ ಇವೂ ಇಷ್ಟವಾಗಬಹುದು…





are you moving towards “Nirvana”………It’s too early though
astonda artha agalilla maraya