world poetry day ಆಯ್ತಂತೆ.
ನಿನ್ನೆ ಬದುಕಿದ ಮೌನದ ಕಾವ್ಯಕ್ಕೆ ಇವತ್ತು ಭಾಷ್ಯವೀಯಲಾಗಿದೆ.
ಸದ್ದಾಗದಂತೆ ಓದಿಕೊಳ್ಳಿ… ಹೀಗೆಂದವರು ಸಂಜ್ಯೋತಿ

ಸಂಜ್ಯೋತಿ ವಿ.ಕೆ
ಮೌನ ೧
ನಾಗರಹೊಳೆಯ
ಮೌನ
ಅವನ ಪ್ರೀತಿ
ನದಿಯೆದೆ ಮೇಲೆ
ಸುರಿದ ಸೋನೆಯ
ಹಾಡು
ಕಾಡ ಮೌನದ
ಸಂಗಾತಿ…
ಮೌನ ೨
ಮೌನ
ಒಮ್ಮೊಮ್ಮೆ
ಅವನ ಹಾಡಿನಂತೆ
ಆದರೆ
ಮೌನ
ಬಹುತೇಕ
ನನ್ನ ಹರಿದ
ಭಾವಚಿತ್ರದಂತೆ…







0 Comments