ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನ ಅವಳ ಮಧ್ಯ…..

ಸುಮತಿ ಮುದ್ದೇನಹಳ್ಳಿ ಕಣ್ಣಲ್ಲಿ ವರ್ಡ್ಸ್ ವರ್ಥ್ ನ ವೈಲೆಟ್ ಹೂ ಅರಳಿದ್ದು ಹೀಗೆ .. – ಸುಮತಿ ಮುದ್ದೇನಹಳ್ಳಿ ಧಾವ೦ತದಲ್ಲಿ ಬ೦ದವ ಅವಳನ್ನೇ ನಿಟ್ಟಿಸಿ ನೋಡ್ತಾನೆ. ಅಲ್ಲಿನ ಹುಡುಕಾಟಕ್ಕೆ ಬೇರೆಯ ಸಮಯದಲ್ಲಿ ಕಣ್ಣು ಬಾಗಿಸಿ ಗಲ್ಲ ಚೂಪು ಮಾಡಿ ನಾಚಿಕೊಳ್ಳುತ್ತಿದ್ದವಳಿಗೆ, ಉಹೂ೦ ಇ೦ದು ಹಾಗನ್ನಿಸಲಿಲ್ಲ. ಈ ನೋಟದಲ್ಲಿ ಕ೦ಡಿದ್ದೇ ಬೇರೆ ಇ೦ದು: ಅವಳಲ್ಲಿ ತನ್ನನ್ನೇ ಹುಡುಕುತ್ತಿದ್ದವನ ಆರ್ದ್ರ ಕ೦ಗಳಲ್ಲಿ ಒ೦ದು ಕ್ಷಣ ಲೋಕವನ್ನೇ ಮರೆತವಳು ಸಾವರಿಸಿಕೊ೦ಡು ಯಾಕ್ ಹೀಗೆ ನೋಡ್ತಿದ್ದಿ ಅನ್ನ ಹೊರಟಳು ಆದರೆ ಆ ಪ್ರಶ್ನೆಗೆ ಅರ್ಥವಿಲ್ಲ ಅನ್ನಿಸಿ ಬಿಡ್ತು, ಮಾತುಗಳು ಬೇಕಿಲ್ಲದ ಕ್ಷಣ. ಅವಳ ಭುಜ ಹಿಡಿದು ನಿ೦ತವನ ಕೈಗಳಲ್ಲಿ ಕ೦ಪನ, ಸಣ್ಣಗೆ ಬೀಸಿದ ಗಾಳಿ ಪಾರಿಜಾತಗಳ ಸವರಿ ತನ್ನಿರುವನ್ನು ದೃಡ ಪಡಿಸಿಕೊ೦ಡ೦ತೆ. ಸಣ್ಣಗೆ ನಿಟ್ಟುಸಿರು…ಕಿರಿದಾದ ಕ೦ಗಳು ಮತ್ತೆ ಅದೇ ಹುಡುಕು ನೋಟ…ಅವಳ ಕಣ್ಣು ರೆಪ್ಪೆ ಬಡಿತ, ಸಣ್ಣಗೆ ಅರಳಿ ಮತ್ತೆ ಕಿರಿದಾದ ಬಾಯಿ, ಯಾವ್ಯಾವುದನ್ನೂ ತಪ್ಪಿಸಿಕೊಳ್ಳದ ಶೋಧಕ ನೋಟ. ಸಣ್ಣಗಿನ ಸ್ವರದಲ್ಲಿ ಕೇಳಿದ, “ಏನಾಯ್ತು.” ಅ೦ ಎ೦ದು ಏನೋ ಹೇಳಲು ಹೊರಟವಳು ಮತ್ತೆ ಆ ಕಣ್ಣಿನ ಜಾಲಕ್ಕೆ ಬೀಳುತ್ತಾಳೆ. ಮೆಲ್ಲಗೆ ಅವನ ಮೇಲ೦ಗಿಯ ಹಿಡಿದು ಹತ್ತಿರವಾದವಳಿಗೆ ಸ್ಪಷ್ಟವಾಗಿ ಕೇಳುತ್ತಿದೆ ಹೃದಯದ ಬಡಿತ, ಜೊತೆಗೆ ಕ೦ಡಿತು ಹಣೆಯ ಮೇಲಿನ ಸಾಲು ಸಾಲು ಬೆವರು. ಅವನೇರಿ ಬ೦ದ ಕುದುರೆಗೆ ಜೀನೂ ಕಟ್ಟಿಲ್ಲ, ಈಕೆಯ ಮನದ ಮಾತುಗಳಿಗೆ ಶಬ್ದಗಳೂ ಹೊಮ್ಮುತ್ತಿಲ್ಲ. ಗ೦ಟಲಲ್ಲಿ ಉಮ್ಮಳಿಸಿದ ಭಾವ ಅದುಮಿಡಲು ಮಾಡಿದ ಪ್ರಯತ್ನ ಕಣ್ಣಿ೦ದ ಹನಿಯಾಗಿ ಉರುಳಿತೊ…ಮೆತ್ತಗೆ ಬೆರಳಿನಿ೦ದ ತೊಡೆದವನ ಮುಖದ ಮೇಲೆ ಮುಗುಳ್ನಗು. ಮೋಡ ಸರಿದ ಚ೦ದ್ರನ ಕ೦ಡು ಇವಳ ಮುಖದಲ್ಲೂ ಅದೇ ಭಾವ, ತನಗರಿವಿಲ್ಲದ೦ತೆ….ತನ್ನಷ್ಟಕ್ಕೆ ಅರಳಿದ ಮಲ್ಲಿಗೆ. ಅವಳ ಕಿರು ನಗೆ ಹರಡುತ್ತಾ ಹೋಯ್ತು ಗಲ ಗಲನೆ; ಅದಕ್ಕೆ ಮಾರ್ದ್ವನಿ ಅವನ ನಗೆ. ಅವನಿಗೆ ನೀರು ತರಲು ಸಡಗರದಿ೦ದ ಅವಳು ಒಳ ಹೋದಾಗ ಧೊಪ್ ಎ೦ದು ಕೂತವನಿಗೆ ಕಣ್ಣ೦ಚಿನಲ್ಲಿ ಬ೦ದ ಹನಿ ಅವಳಿಗೆ ಕ೦ಡೀತೆ೦ದು ಕರವಸ್ತ್ರಕಾಗಿ ತಡಕಾಡಿದ. ಆಕೆ ಕೇಳುವ ಪ್ರಶ್ನೆಗಳ ಎದುರಿಸುವುದು ಹೇಗೆ ಎ೦ದು ಯೋಚಿಸುತ್ತಾ. ಅವನಾದರೂ ಹೇಗೆ ಹೇಳಿಯಾನು ದಾರಿಯ ಬದಿಯಲ್ಲಿ ಅರಳುತ್ತಿದ್ದ ವಾಯ್ಲೆಟ್ ಹೂವಿನ ಗಿಡ ಇ೦ದು ಮುರುಟಿ ಹೋಗಿತ್ತೆ೦ದು, ಮತ್ತು ಆ ಹೂವೆ ಅವಳಾಗಿದ್ದಳವನಿಗೆ೦ದು. Wordsworth “She Dwelt Among the Untrodden Ways” ಸುಮತಿ ಕ೦ಡ೦ತೆ.]]>

‍ಲೇಖಕರು G

11 January, 2012

2 Comments

  1. vidya bhat

    So nice….

  2. D.RAVIVARMA

    excellent ee wordsworth,shakeshphere,ivara kaavyda aala,mattu avara kavyda berugalu nelada aaldalliddarinda avu indigu social relevent anisuttave allave, abhinandanegalu. english kavya odi aragisikollokantu aagalla,nimminda ee kannada anuvaadalu sadyavaaytu.
    ravi varma hosapete

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading