ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂತ್ರಧಾರ ರಾಮಯ್ಯ ಪನ್- fun

         

ಪನ್ ಫನ್ –ಒಂದಿಷ್ಟು ಪನ್ ಕ್ತಿ ಭೋಜನ

-ಸೂತ್ರಧಾರ ರಾಮಯ್ಯ.                 ಫ್ರೀಯಾಗಿ ಊಟ? ಚಾಲುಕ್ಯ ಹೋಟೆಲಿನಲ್ಲಿ ಗೆಳೆಯ ಶ್ರೀನಿವಾಸನ ಮಗಳು ಸೌಮ್ಯಳ (ಈಗಲ್ಲ) ನಾಮಕರಣ ಶಾಸ್ತ್ರ ಮುಗಿದು ಊಟ ಮಾಡುತ್ತಿದ್ದೆವು. ಊಟದ ಮಧ್ಯೆ ಶ್ರೀನಿವಾಸನ ಮಾವ ಬಂದು ” ತಾವೆಲ್ಲ ಫಂಕ್ಷನ್ಗೆ ಬಂದಿದ್ದು ತುಂಬಾ ಸಂತೋಷ, ದಯಮಾಡಿ ಸಾವಕಾಶವಾಗಿ ಭೋಜನ ಮಾಡಬೇಕು” ಎಂದು ಹೇಳಿ ಹೋದರು. ಇನ್ನೊಂದಷ್ಟು ಉಪಚರಿಸಲೋ ಎಂಬಂತೆ ಬಂದ ಶ್ರೀನಿವಾಸ್ ಮಾತಿನ ಮುಟ್ಟು ಸುರಿಸುತ್ತಾ ” ದಯವಿಟ್ಟು ಎಲ್ಲರೂ ಫ್ರೀಯಾಗಿ ಊಟ ಮಾಡಿ” ಎಂದು ನಮ್ಮನ್ನು ಉದ್ದೇಶಿಸಿ ಹೇಳಿದಾಗ, ನಾನು ಥಟ್ಟನೆ ” ಫ್ರೀಯಾಗಿ ಮಾಡ್ತಿಲ್ಲಪ್ಪಾ, ಊಟಕ್ಕೆ ಮೊದಲು ನಮ್ಮ ಯತಾ ಶಕ್ತಿ ನಿನ್ನ ಮಗಳಿಗೆ ಪ್ರೆಸೆಂಟೇಶನ್ ಕೊಟ್ಟೆ ಊಟಕ್ಕೆ ಕುಳಿತ್ತದ್ದು ನಾವು” ಎಂದೆ ನೋಡಿ, ಅದುವರೆಗೂ ಗಂಭೀರವಾಗಿ ಸಾಗಿದ್ದ ಭೋಜನ ಕೂಟದಲ್ಲಿ ನಗೆಯ ಅಲೆಯೇ ಎದ್ದಿತು: ಫ್ರೀಯಾಗಿ ಸಿಡಿದ ಜೋಕಿಂದ. ಅದಾದ ನಂತರ ನಮ್ಮ ಸ್ನೇಹಿತರು ಯಾವುದೇ ಮದುವೆ ಮತ್ತಿತರೇ ಸಮಾರಂಭದ ಊಟಕ್ಕೆ ಕುಳಿತಾಗ “ಏನಪ್ಪಾ ಫ್ರೀಯಾಗಿ ಊಟ ಮಾಡಿದೆಯಾ?” ಅಂತಾ ಕಿಚಾಯಿಸುವ ಪ್ರಸಂಗಗಳು ನಡೆದೇ ಇವೆ.   buy ಆರ್ಟ್-ಬೈ ಹಾರ್ಟ್! ಬೈ ಆರ್ಟ್ ದೊರೆತುದೆಲ್ಲವೂ ಹ್ರುದ್ಗತವೆ, ಬೈ ಬಾಯಿ ಹಾರ್ಟ್ ಸವಿಯುವನ್ತಹವೆ. ಹಾಗಾಗಿ ಲೈಫ್ ಈಸ್ ಅನ್ ಆರ್ಟ್. ಜೀವಿಗಳ ಒಟ್ಟಿಗೆ ಕಲೆಸಿ, ಸುಖ ದುಃಖಗಳ ಬೆರೆಸಿ, ನಲಿಸಿ ಕಲಿಸುವ ಜೀವನದಾಟವಲ್ಲವೇ ರಸದೂಟ! ಅರಿ ಶೆಡ್ ವರ್ಗ ಕಾಮ ಕ್ರೋಧ ಲೋಭಾದಿ ಶತ್ರುಗಳನ್ನು, ದೇಹ ಮನಸುಗಳೆಂಬ ಶೆಡ್ ನಿಂದ ನಿರಂತರ ವರ್ಗ ಮಾಡುತ್ತಲೇ ಇರಬೇಕು. ವರ್ಗದ ಆದೇಶದ ಜೊತೆ ರಿಲೀವ್ ಆರ್ಡರನ್ನು ಕೊಟ್ಟು ಬಿಟ್ಟರಂತೂ ರಿಲೀಫ್ ಎಂಬುದು ‘ಅರಿ’ ವಳಿಕೆ ತಜ್ಞರ ಬಿಲೀಫ್.   ಬೆನ್ನು ತಟ್ಟಲು ಮಾರುತೀ; ಲಂಕೆಯ ವಿಚಾರಿಸಿ-ಕೊಳ್ಳುತೀ! ಕಾಲೆಳೆಯುತ್ತಾ ನಿಂದಿಸಿ, ಪ್ರತಿಭೆಗಳನ್ನು ನಂದಿಸುವ ಚೀಟರ್ಸ್ಗಿಂತಲೂ, “ಕಮ್ ಆನ್ ಮಾರುತಿ-ನೀನು ಖಂಡಿತಾ ಲಂಕೆಗೆ ಹಾರುತಿ” ಅಂತ ಬೂಷ್ಟು ಹಿಡಿದ ಮೋರೇಲಿ, ಮೊರೇಲ್ ಬೂಸ್ಟ್ ಆಗುಂತಹ ಉತ್ತೇಜನದ ಹಾರ್ಲಿಕ್ಸ್ ನೀಡುವ ಜಾಮ್ಬವಂತರ, ಐ ಮೀನ್ ಟೀಚರ್ಸ್ ಸಂತತ್ತಿ ಸಾವಿರವಾಗಬೇಕು.   ಲಕ್ಷ್ಮಿ ಕಡೆಯವರಿಗೆ ಮೊದಲ ಪ್ರಾಶಸ್ತ್ಯ? ಲಂಚಾವತಾರಿ ಅಧಿಕಾರಿಗೆ ನೀವೊಂದು ವೇಳೆ ಪರಿಚಿತರಿದ್ದರೆ, ‘ಗ್ರೀಸ್’ ಸಂಸ್ಕ್ರುತಿಯಿಲ್ಲದೆ ಒಮ್ಮೆ ನಿಮ್ಮ ಕೆಲಸ ಆಗಬಹುದು. ಸುಪರಿಚಿತರಿದ್ದರೆ ಒಂದೆರಡು ಬಾರಿ ಕೆಲಸ ಸಲೀಸು. ಆದರೆ ನಿರಂತರವಾಗಿ ಅಂತಹ ಅಧಿಕಾರಿಯಿಂದ ‘ಶೇವಾ ಸೌಲಭ್ಯಗಳು’ ಸಿಗಬೇಕಾದರೆ ಲಂಚ ಅನ್ನೋ ಸುಪಾರಿ ನೀಡಲೇಬೇಕು. ಸುಪಾರಿಚಿತರಿಗೆ ಲಕ್ಷ್ಮಿ ಕಡೆಯಿಂದ ಬಂದವರೇ ಮೊದಲ ಬಾಂಧವರು-ಅಪರಿಚಿತರಲ್ಲಾ, ಅನ್ನುತ್ತದಂತೆ-ಲಂಚಾಮೃತ sumಹಿತೆ.   ‘ಬಿಂಕ’ ವಿದೇಕೋ ಹಿಂದಿನ ‘ಜನುಮ’ದಲ್ಲಿ ಮನುಜ, ಸಾರ್ವಜನಿಕ ಸ್ವತ್ತನ್ನು ‘ಸ್ವಂತ’ ಅಪ್ಪನ ಸ್ವತ್ತಂತೆ (ಕ)ಬಳಸಿದ ತಪ್ಪಿಗೆ, ಈಗ ‘ಪರ’ಅಪ್ಪನ ಅಗ್ರಹಾರದಲ್ಲಿ ‘ಬಿಂಕ’ ದಿಂದ ‘ಕಂಬಿ’ ಎಣಿಸುತ್ತಿದ್ದಾನೆನ್ಬುದು ಶುದ್ಧ.., ಕ್ಷಮಿಸಿ, ಅಶುದ್ಧ ನಿಜವಂತೆ.   end ಗುಟುಗು ಚಳಿಗಾಲಕ್ಕೊಂದು ವಾರ್ಮ್ ಜೋಕ್ ಶಿವರ್ ರಾಮ್: ಒಳ್ಳೆ ಬಿಸಿ ದೋಸೆ ತರ ಕರ್ಚಾಗುತ್ತನ್ತಲ್ಲಯ್ಯಾ, ಉಮೇಶ ‘ಹೊರ’ತರ್ತಿರೋ ವೀಕ್ ಲಿ? ಡೋರ್ ಕೀಸ್: ಯೆಸ್ ಯೆಸ್, ಐ ಟೂ ಬಿಲೀವ್ ಇಟ್ ಸ್ಟ್ರಾಂಗ್ ಲಿ. ಎಂಟಿಆರ್, ವಿದ್ಯಾರ್ಥಿಭವನ್ ದೋಸೆಗಳು, ಅವನ ವೀಕ್ಲಿ ಪೇಪರ್ ನಲ್ಲೆ ಪಾರ್ಸೆಲ್ ಆಗಿ ‘ಹೊರ’ಹೋಗುತ್ತಿದ್ದುದನ್ನ ನನ್ನ ವಂಡರ್ ಕಣ್ಣಲ್ಲೇ ನೋಡಿ, ಮೊಂಡು ಮೂಗ್ಮೇಲೆ ಬೆರಳಿಟ್ಟು ಕೊಂಡೇ ಅಂತೀನಿ!]]>

‍ಲೇಖಕರು G

11 January, 2012

4 Comments

  1. Gopal Wajapeyi

    ಆ ಮಯ್ಯಾ ಅವರ ರುಚಿಗಿಂತ್ಲೂ ಒಂದ್ ಕೈ ಜಾಸ್ತೀನೇ ರೀ ರಾ-ಮಯ್ಯಾ ನಿಮ್ ಪನ್ ಕ್ತಿ ಭೋಜನ…

  2. D.RAVIVARMA

    nimma kanninolagondu olagannu ide,aste alla adu tumba creative aagi sukshma,atisukshma,galannu serehidiyuttade.allondu tiliyaada ,monachada,haagu kushikoduva click mattu kick ide.keep it up.sutradara nimma snehita eko kanuttillavalla’
    d.ravi varma hosapete.

  3. su,ra

    ಮಿತ್ರರಾದ ಸತೀಶ್, ವಾಜಪೇಯಿ,ರವಿಯವರೇ; ನನ್ನ ‘ಪನ್ ಫನ್’ ಬಡ ಬಡಿಕೆಗೂ ಹೃದಯ ತೆಗೆದು, ಧನಾತ್ಮಕ ವಿಮರ್ಶಾ ಕಿರಣಗಳನ್ನು ‘ಅವಧಿ ಹಾಳೆ ಯ ಮ್ಯಾಲೆ’ ಹರಿಸಿದ ತಮ್ಮ ಸಹೃದಯ ತೆಗೆ ನಾನು ಋಣಿ.
    ಸೂತ್ರಧಾರ ರಾಮಯ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading