ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಮತ್ತು ಮಗು

ಡಾ ಪ್ರೀತಿ ಕೆ ಎ 

ಅವನಿಗೆ ಮೈಕು ಸಿಕ್ಕಿದರೆ 
ಎಲ್ಲೆಂದರಲ್ಲಿ ಭಾಷಣ ಬಿಗಿವ ಖಯಾಲಿ 
ಚಪ್ಪಾಳೆ ತಟ್ಟಿದರೆ
ಮತ್ತಷ್ಟು ಉತ್ಸಾಹ 
ಅವನೀಗ ಮಾತು ಕಲಿತ ಮಗು 

ಧಾವಂತದಿಂದ ಓಡುತ್ತಾನೆ 
ಆಫೀಸಿಗೆ, ಸೆಮಿನಾರಿಗೆ, ಬಸ್ ಸ್ಟಾಪಿಗೆ 
ನಿಂತರೆ ಜಗತ್ತು ಮತ್ತಷ್ಟು 
ಮುಂದೆ ಹೋಗುವುದೆಂಬ ಭಯ 
ಅವನೀಗ ಓಡಲು ಶುರುವಿಟ್ಟ ಮಗು 

ಎಷ್ಟು ನಡೆದರೂ ಮುಟ್ಟಲಾಗುತ್ತಿಲ್ಲ ಗಮ್ಯ 
ನಡೆದಷ್ಟೂ ದೂರವೆನಿಸುತ್ತಿದೆ 
ಇದ್ದಲ್ಲೇ ಇದ್ದು ಬಿಡುತ್ತೇನೇನೋ 
ಎಂಬ ಆತಂಕ 
ಅವನೀಗ ನಡೆಯಲು ಪ್ರಾರಂಭಿಸಿದ ಮಗು 

ಸ್ವಲ್ಪ ಹೊತ್ತು ವಿಶ್ರಾಂತಿ ಬೇಡುತ್ತಿದೆ ದೇಹ
ಸುಮ್ಮನೇ ಕುಳಿತು 
ಆಕಾಶದತ್ತ ದೃಷ್ಟಿ ಹಾಯಿಸುವಾಗ 
ಕಾಡುತ್ತವೆ ಹಳೆಯ ನೆನಪು 
ಅವನೀಗ ಕುಕ್ಕರುಗಾಲಲ್ಲಿ ಕುಳಿತ ಮಗು 

ವಿಶ್ರಾಂತಿ ಸಾಕೆನ್ನುತ್ತದೆ ಮನಸ್ಸು 
ಮತ್ತೆ ಎದ್ದು ನಡೆಯಲು ನೋಡುತ್ತಾನೆ 
ಕಾಲುಗಳು ಸಹಕರಿಸುತ್ತಿಲ್ಲ 
ಮುಂದೆ ಹೋಗಲು ಇನ್ನಿಲ್ಲದ ನಿರಾಕರಣೆ 
ಅವನೀಗ ಅಂಬೆಗಾಲಿಕ್ಕುವ ಮಗು 

ದಿನಾ ಒಂದಿಲ್ಲೊಂದು ನೋವು 
ದೇಹಕ್ಕೂ ಮನಸ್ಸಿಗೂ 
ನುಂಗುತ್ತಾನೆ ಗುಳಿಗೆಗಳನ್ನು 
ಪ್ರತಿಯೊಂದು ನೋವಿಗೂ 
ಅವನೀಗ ಬೋರಲು ಬಿದ್ದು ಅಳುತ್ತಿರುವ ಮಗು 

ಈಗೀಗ ಹಾಸಿಗೆ ಬಿಟ್ಟು 
ಏಳಲೇ ಆಗುತ್ತಿಲ್ಲ 
ಊಟ ಶೌಚಕ್ಕೂ ಬೇಕು 
ಸುತ್ತಲೂ ಸಹಾಯಕರು 
ಅವನೀಗ ತೊಟ್ಟಿಲಲ್ಲಿ ಮಲಗಿದ ಪುಟ್ಟ ಮಗು 

ಬಂದಿದೆ ಅವನು ಹೋಗುವ ಸಮಯ 
ಅಂದು ಅಳುತ್ತಲೇ ಬಂದಾಗ ಇಲ್ಲಿಗೆ 
ಮನ ತುಂಬಿ ನಕ್ಕವರು ಇಂದಿಲ್ಲ 
ಇಂದು ಅಳುತ್ತಲೇ ಹೊರಟಾಗ 
ಅಳುವಿನ ಮುಖವಾಡ ಹೊತ್ತು 
ಒಳಗೊಳಗೇ ನಗುವವರೇ ಇಲ್ಲೆಲ್ಲ..

‍ಲೇಖಕರು Avadhi

5 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading