ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವನು ಭಾವುಕ, ಪುಟ್ಟಾಣಿ ನೋವಿಗೂ ಮಿಡಿವ ಹುಡುಗ..', ಎಂ ಆರ್ ಕಮಲ

ಅವನು – ನಾನು

ಎಂ ಆರ್ ಕಮಲ

ಅವನು : ಸುಡುಸುಡು ಕೆಂಡ
ನಾನು : ಉಡಿಗಿಟ್ಟುಕೊಂಡವಳು
ಮಂಜುಗಡ್ಡೆ
ಅವನು : ಬೇಗುದಿಯನ್ನೊತ್ತಿ ನಗೆ
ಚಿಮ್ಮುವ ಹುಡುಗ
ನಾನು : ಅರ್ಥವಿಲ್ಲದೆ ಅಳುವ; ಅತ್ತು
ರಂಪಾಡಿಸುವ ಹುಡುಗಿ
ಅವನು : ಅಪರಿಚಿತ ನಾಡು ನಗರದಲ್ಲೂ
ಎಗ್ಗು ಸಿಗ್ಗಿಲ್ಲದೆ ಅಲೆವ ಅಲೆಮಾರಿ
ನಾನು : ಸ್ವಂತ ಕೋಣೆಯಲ್ಲೂ ಕಳೆದು
ಹೋಗುವ ಕವಿತೆ
-2
ಅವನು –
ಮೌನ ಅಂದರೆ ಹಾಡು
ಮಾತು ಅಂದರೆ ಕವಿತೆ
ನೆನಪು ಸಣ್ಣ ಕಥೆಯ ಹಾಗೆ
ವಿವರ, ಸ್ಫಟಿಕಸ್ಪಷ್ಟ.
ನಾನು –
ಹಾಡು ಅಂದರೆ ಪಾಡು
ಕವಿತೆ ಅಂದರೆ ಬರಿ ಮಾತೆ
ನೆನಪು –  ಕಾವ್ಯದ ಹಾಗೆ
ಅಮೂರ್ತ, ಅಸ್ಪಷ್ಟ ಶಬ್ದ ಚಿತ್ರ
ಅವನು :
ಭಾವುಕ –
ಪುಟ್ಟಾಣಿ ನೋವಿಗೂ ಮಿಡಿವ ಹುಡುಗ
ಜುಗ್ಗ-
ಗುಜರಿ- ವಸ್ತುವಿಗೂ ಚೌಕಾಸಿ ವ್ಯಾಪಾರಿ
ಪಾದರಸ –
ನೃತ್ಯ, ನನ್ನ ಸೆಮಿನಾರು –
ಎಲ್ಲೆಂದರಲ್ಲಿ ಹಾಜರು

-3
ನಾನು :
ಕವಿ
ಗೆಳೆಯರೆದುರೂ ಕವಿತೆ
ಓದಲು ಕಂಪಿಸುವ ಹುಡುಗಿ
ಪೆದ್ದು –
ಅಗ್ಗದ್ದಕ್ಕೆ, ಮನಸ್ಸಿಗೊಗ್ಗದಕ್ಕೆ
ಒಂದಕ್ಕೆರಡು ತೆರುವ ಧಾರಾಳಿ.
ಏಕಾಂಗಿ –
ಕಾವ್ಯಗತಿ, ವೀಣೆ ಶ್ರುತಿ,
ನರ್ತನದ ಜತಿಗಷ್ಟೆ ಜೊತೆಗಾತಿ
-4
ಅವನು-
ಮುಂಜಾವಿನಿಬ್ಬನಿಯಂತೆ
ಮುಂಗೋಪಿ – ಕರಗುತ್ತಾನೆ
ಸೂರ್ಯಕಾಂತಿಯ ನಗೆ,
ಹೊಳಪಿಗೆ.
ನಾನು –
ಕಡಲ ಒಡಲ ಕೆಂಡ –
ಶಾಂತಳಾಗುತ್ತೇನೆ
ಚಂದ್ರಕರಗಳ ಮೃದು ಸ್ಪರ್ಶಕ್ಕೆ
 

‍ಲೇಖಕರು avadhi

14 February, 2014

4 Comments

  1. ನಂದಿನಿ

    ನಿಮ್ಮ ಕವಿತೆಯಲ್ಲಿನ ಹೋಲಿಕೆ ತುಂಬಾ ಇಷ್ಟವಾಯ್ತು…

  2. bharathi b v

    ಅವನು : ಅಪರಿಚಿತ ನಾಡು ನಗರದಲ್ಲೂ
    ಎಗ್ಗು ಸಿಗ್ಗಿಲ್ಲದೆ ಅಲೆವ ಅಲೆಮಾರಿ
    ನಾನು : ಸ್ವಂತ ಕೋಣೆಯಲ್ಲೂ ಕಳೆದು
    ಹೋಗುವ ಕವಿತೆ … Adbhutha!

  3. haravu spoorthy

    ಸ್ವಂತ ಕೋಣೆಯಲ್ಲೂ ಕಳೆದು
    ಹೋಗುವ ಕವಿತೆ
    thumaba ista aithu:)

  4. gururaj katriguppe

    Innoo olleya ‘form’ nalliddeera medam! nijavada kavigalu yavatthoo ‘form’ kaledukollalla!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading