ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲೊಂದು ಲೋಕವುಂಟು..

Gabriel Okara ನ ‘Once upon a time’ ಕವಿತೆಯನ್ನು ಕಥೆಗಾರ ಶಿವಕುಮಾರ್ ಮಾವಲಿ ಅವರು ‘ಒಂದಾನೊಂದು ಕಾಲದಲ್ಲಿ..’ ಆಗಿ   ಕನ್ನಡಕ್ಕೆ ತಂದಿದ್ದರು. ಅದು ಇಲ್ಲಿದೆ 

ಅದನ್ನು ಓದಿದ ನಮ್ಮ ಅಂಕಣಕಾರ ನಾ ದಿವಾಕರ್ ಅವರು ಅದನ್ನು ‘ಅಲ್ಲೊಂದು ಲೋಕವುಂಟು’ ಆಗಿಸಿದ್ದಾರೆ

ಎರಡನ್ನೂ ಓದಿ ನಿಮಗಿಷ್ಟವಾದದ್ದನ್ನು ಎಂಜಾಯ್ ಮಾಡಿ. ಇಲ್ಲವೇ ನೀವೇ ಅನುವಾದ ಮಾಡಿ ನಮಗೆ ಕಳಿಸಿಕೊಡಿ  

na-divakar1                                                                                              ಮೂಲ : ಗೇಬ್ರಿಯಲ್ ಒಕಾರ
Once upon a time
ಭಾವಾನುವಾದ : ನಾ ದಿವಾಕರ

ಮಗೂ ಆಲಿಸು ಈ ಕಥೆಯ
ಅಂದೊಂದು ಕಾಲ ಹೃದಯಾಂತರಾಳದಲಿ
ನಗು ಮೂಡುತ್ತಿತ್ತು ಕಂಗಳು
ಮುಗುಳ್ನಗುತ್ತಿದ್ದವು ; ಇಂದು !
ನಗೆ ಎಂದರೆ ದಂತಗಳು ಮಿನುಗುತ್ತವೆ
ತಣ್ಣನೆಯ ಶುಷ್ಕ ಕಂಗಳು
ನನ್ನ ನೆರಳಿನಾಚೆ ಶೋಧಿಸುತ್ತವೆ !
ಎಂತಹ ಕಾಲವದು ಮಗುವೇ
man footprint step icon abstract vector logo color
ಹಸ್ತಾಲಿಂಗನದಿ ಹೃದಯಗಳ ಮಿಲನ
ಝೇಂಕರಿಸುತ್ತಿತ್ತು ಇಂದೇನಾಗಿದೆ
ಹೃದಯಹೀನ ದೇಹಗಳು ಕೈ ಕುಲುಕುತ್ತವೆ
ಮತ್ತೊಂದು ಕೈ ನನ್ನ
ಖಾಲಿ ಜೇಬುಗಳನ್ನು ತಡಕಾಡುತ್ತವೆ !
‘ಇದು ನಿಮ್ಮ ಮನೆ’ ‘ಮತ್ತೊಮ್ಮೆ ಬನ್ನಿ’
ಓಹ್ ಎಂತಹ ಸುಂದರ ವಿಸ್ಮಯ
ಮತ್ತೊಮ್ಮೆ ಮಗದೊಮ್ಮೆ ಬಂದು
ಆತಿಥ್ಯ ಸವಿದು ಹಿಂದಿರುಗಿ
ಪುನಃ ಸವಿಯಲೆಣಿಸಿದಾಗ
ಕದ ತೆರೆಯುವುದೇ ಇಲ್ಲ
ಶಾಶ್ವತವಾಗಿ !
ಇತಿಹಾಸದಿಂದ ಪಾಠ ಕಲಿಯದಿದ್ದರೆ
ಇತಿಹಾಸವೇ ಪಾಠ ಕಲಿಸುತ್ತದೆ ಅಲ್ಲವೇ ?
ಮಗೂ ನಾನೂ ಕಲಿತಿದ್ದೇನೆ
ಜಗವೇ ನಾಟಕ ರಂಗ ಅಲ್ಲವೇ
ಧರಿಸಿದ್ದೇನೆ ವೈವಿಧ್ಯಮಯ ಮುಖವಾಡಗಳನು
ಮನೆಯೊಳಗೆ, ಬೀದಿ ಗಲ್ಲಿಗಳಲಿ, ಆತಿಥ್ಯದ
ಸೋಗಿನಲಿ, ಬಹುಮುಖೀ ಮುಖವಾಡಗಳನು
ದೇಶಾವರಿ ನಗೆಯೊಡನೆ
ಭಾವಚಿತ್ರದೊಳಗಿನ ನಗು
ಮತ್ರ್ಯ ಮೀರಿದ್ದಲ್ಲವೇ !
ನಾನೂ ನಗುವುದನ್ನು ಕಲಿತೆ
ದಂತಪಂಕ್ತಿಯ ಝಳಪಿಸುತ್ತಾ
ಹಸ್ತಲಾಘವ ಕಲಿತೆ ಹೃದಯಹೀನನಾಗಿ ;
ಶುಭ-ವಿದಾಯ ಎಂದಾಗಲೆಲ್ಲಾ
ಸುಪ್ತ ಮನಸ್ಸು ಎಚ್ಚರಿಸುತ್ತದೆ
ವಿದಾಯ ಶುಭದಾಯಕವೆಂದು
ಹರ್ಷಲಿಂಗನದ ಸ್ಪಂದನೆಯಲಿ
ಆಲಿಂಗನ ಸತ್ಯ ಹರ್ಷ ಅರ್ಧಸತ್ಯ
ತಲೆಚಿಟ್ಟು ಹಿಡಿವ ಸಂವಾದದ ನಂತರವೂ
ಕೃತಕ ನಗುವಿನೊಡನೆ ಉದುರುತ್ತದೆ
ಮುತ್ತಿನಂತಹ ಮಾತುಗಳು
‘ನಿಮ್ಮೊಡನೆ ಕಲೆದ ಕ್ಷಣಗಳು ಮಧುರ’
ಓಹ್ ವಿಡಂಬನೆಯೋ ವಿಪರ್ಯಾಸವೋ !
ಗಮನವಿಟ್ಟು ಕೇಳು ಮಗುವೇ
ನಾ ನಿನ್ನ ಓರಿಗೆಯಲ್ಲಿ ಹೇಗಿದ್ದೆ ?
ಮರೆತುಹೋಗಿದೆ ಆದರೂ
ಮರಳಲಿಚ್ಚಿಸುತ್ತೇನೆ ಆ ಮಧುರ
ಬಾಲ್ಯಾವಸ್ಥೆಗೆ ಈ ಎಲ್ಲಾ ಕೃತ್ರಿಮಗಳನ್ನು
ಮರೆತು ; ನಗುವುದನ್ನು
ಕಲಿಯಬೇಕೆನಿಸಿದೆ ಕಂದಾ ;
ದರ್ಪಣದಲಿ ನನ್ನ ದಂತಪಂಕ್ತಿಗಳ
ಬಿಂಬ ಕಂಡಾಗ ಹಾವು ಮೆಟ್ಟಿದಂತಾಗುತ್ತದೆ !
ನನಗೆ ದಾರಿ ತೋರಿಸು ಮಗುವೇ
ನಗುವುದು ಹೇಗೆ
ನಾನು ನಗುತ್ತಿದ್ದುದು ಹೇಗೆ ;
ನಾ ನಿನ್ನಂತೆಯೇ ಬಾಲ್ಯಾವಸ್ಥೆಯಲಿದ್ದಾಗ
ಹುಸಿನಗೆಯ ಬೀರುತ್ತಿದ್ದುದಾದರೂ
ಹೇಗೆ ?
 
Once Upon a Time
Once upon a time, son,
they used to laugh with their hearts
and laugh with their eyes:
but now they only laugh with their teeth,
while their ice-block-cold eyes
search behind my shadow.
group line artThere was a time indeed
they used to shake hands with their hearts:
but that’s gone, son.
Now they shake hands without hearts
while their left hands search
my empty pockets.
‘Feel at home!’ ‘Come again’:
they say, and when I come
again and feel
at home, once, twice,
there will be no thrice-
for then I find doors shut on me.
So I have learned many things, son.
I have learned to wear many faces
like dresses – homeface,
officeface, streetface, hostface,
cocktailface, with all their conforming smiles
like a fixed portrait smile.
And I have learned too
to laugh with only my teeth
and shake hands without my heart.
I have also learned to say,’Goodbye’,
when I mean ‘Good-riddance’:
to say ‘Glad to meet you’,
without being glad; and to say ‘It’s been
nice talking to you’, after being bored.
But believe me, son.
I want to be what I used to be
when I was like you. I want
to unlearn all these muting things.
Most of all, I want to relearn
how to laugh, for my laugh in the mirror
shows only my teeth like a snake’s bare fangs!
So show me, son,
how to laugh; show me how
I used to laugh and smile
once upon a time when I was like you.

‍ಲೇಖಕರು admin

16 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading