ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಿವಿನ ಗುರು

 ಉತ್ತಮ ಎ ದೊಡ್ಮನಿ 

ಅನಾದಿಕಾಲದಿಂದ ಮುಚ್ಚಿದ ಅಕ್ಷರ ಹಾದಿ
ಪೆನ್ನೆಂಬ ಖಡ್ಗದಿಂದ ದಾರಿ ಮಾಡಿ
ಅಂಧಕಾರವ ತುಂಬಿದ ಬಾಳ ಬದುಕಿನಲ್ಲಿ
ಗುಡುಗು ಸಿಡಲಾಗಿ ಜ್ಞಾನ ಮಳೆ ಹರಿಸಿ
ಜಾತಿವಾದಿಗಳನ್ನು ಸೆಡ್ಡು ಹೊಡೆದು
ಈ ನೆಲದ ಮೊದಲ ಅಕ್ಷರದ ಧನಿಯಾದೇ

ಮೇಲು ಕೀಳೆಂಬ ಆ ದಿನಗಳಲ್ಲಿ
ಹೆಣ್ಣನ್ನು ಭೋಗಕ್ಕೆ ಸೀಮಿತ ಮಾಡಿದ
ಪುರೋಹಿತ ಶಾಹಿಗಳ ಸಾಮ್ರಾಜ್ಯ ಭೇದಿಸಿ
ಹಕ್ಕಿಯಂತೆ ಆಕಾಶದಲ್ಲಿ ಹಾರುವದು ಕಲಿಸಿ
ಸಮಾ ಸಮಾಜದ ನಿರ್ಮಾಣ ಮಾಡಿ
ಮನುವಾದಕ್ಕೆ ಚಟ್ಟ ಕಟ್ಟಿ ಮನುಷ್ಯತ್ವ ಎತ್ತಿಡಿದೆ

ದೇವರು, ಪೂಜಾ, ಪುನಸ್ಕಾರಗಳಲ್ಲಿ
ಬಂಧಿಸಿದ ಸರಪಳಿಯನ್ನು ಕಿತ್ತಿ ಹಾಕಿ
ನಿಮ್ಮ ಭವಿಷ್ಯ ಬದಲಾಗಬೇಕಾದರೆ
ಪುಸ್ತಕ ಒಂದೇ ಮಾರ್ಗವೆಂದು
ಹಾದಿ ತೋರಿಸಿದ ಮಹಾತಾಯಿ ಪುಲೆ ಸಾವಿತ್ರಿಬಾಯಿ

ಜೀವನದಲ್ಲಿ ಸೋತು ಬಿದ್ದವರನ್ನು
ಕೈಹಿಡಿದು ಕನಸು ಕಾಣುವಂತೆ ನಡೆಸಿದ
ಮನದ ನೋವಿಗೆ ಮುಲಾಮು ಹಚ್ಚಿ
ಕಣ್ಣೀರಿನ ಧಾರೆ ವರೆಸಿದವರನ್ನು ಈ
ಸಮಾಜ ಪುಲೆ ದಂಪತಿ ತ್ಯಾಗ ಬರೆಯಬಾರದು

ಬೆಳೆಯಬೇಕಾಗಿದೆ ನಿಮ್ಮ ಜೀವನ
ಭೂಮಿ ಆಕಾಶದ ಮೇಲೆ ಇತಿಹಾಸ ಸೃಷ್ಟಿಸಲು
ಮುಂಜಾವಿನ ಬೆಳ್ಳಿ ಕಿರಣಗಳಂತೆ ಎಲ್ಲರ
ಮನ ಅರಳಬೇಕು ಮನೆ-ಮನದಲ್ಲಿ
ನಿಮ್ಮ ಸಾಧನೆ ದೇಶ ಮೆಚ್ಚಬೇಕು
ಅದು ಅಕ್ಷರ ಕ್ರಾಂತಿಯಿಂದಲೆ

‍ಲೇಖಕರು Avadhi

22 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading