ಜಿ ಪಿ ಬಸವರಾಜು
ಲೋಕಸಭಾ ಚುನಾವಣೆಗೆ ಮುನ್ನ ಚಿಂತಕ ಯು.ಆರ್.ಅನಂತಮೂರ್ತಿ ಅವರು ಆಡಿದ ಒಂದು ಮಾತು ತೀವ್ರ ಟೀಕೆಗೆ ಕಾರಣವಾಯಿತು. ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿರುವುದಿಲ್ಲ ಎಂದು ಅನಂತಮೂರ್ತಿ ಹೇಳಿದ್ದರು. ಒಬ್ಬ ಲೇಖಕ ಇಂಥ ಮಾತುಗಳನ್ನು ಏಕಾಏಕಿ ಆಡುವುದಿಲ್ಲ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಿಂತು, ಆ ಸನ್ನಿವೇಶವನ್ನು ವಿಶ್ಲೇಷಿಸುತ್ತ ಆಡುವ ಮಾತುಗಳಲ್ಲಿ ಒಂದನ್ನು ಎತ್ತಿ ತಗೆದು ಲೇಖಕನನ್ನು ಟೀಕೆಗೆ ಒಳಪಡಿಸುವುದು ಸರಿಯಾದ ಕ್ರಮ ಅಲ್ಲ. ಅನಂತಮೂರ್ತಿ ಅವರು ಆಡಿದ ಮಾತಿನಲ್ಲಿ ಎಷ್ಟೆಲ್ಲ ಧ್ವನಿಗಳಿವೆ, ಅದರ ಅರ್ಥ ಛಾಯೆಗಳೇನು ಎಂಬುದನ್ನು ಗ್ರಹಿಸದೆ, ಅದೊಂದೇ ಮಾತನ್ನು ಎತ್ತಿಕೊಂಡು, ಎಲ್ಲಿ ಹಾಗಾದರೆ ದೇಶಬಿಡಿ ಎನ್ನುವುದು, ಟಿಕೆಟ್ ಕೊಡಿಸುತ್ತೇವೆ ಎನ್ನುವುದು ಆಡುವವರ ಅಭಿರುಚಿಯನ್ನು ಮತ್ತು ಸಂಕುಚಿತ ಮನೋಭಾವವನ್ನು ತೋರಿಸುತ್ತದೆ.
ಅನಂತಮೂರ್ತಿ ಒಬ್ಬ ಸಮಾಜವಾದಿ; ಕನ್ನಡದ ಬಹುಮುಖ್ಯ ಚಿಂತಕ; ಅವರ ಬರಹ, ವಿಮರ್ಶೆಗಳು ಸೂಕ್ಷ್ಮ ಒಳ ನೋಟಗಳನ್ನು ಪಡೆದುಕೊಂಡಿರುತ್ತವೆ. ಅತ್ಯಂತ ಸಂಕೀರ್ಣವಾಗಿದ್ದ ಮತ್ತು ನಮ್ಮ ಪ್ರಜಾಪ್ರಭುತ್ವದ ಬಹುದೊಡ್ಡ ಸವಾಲಿನಂತಿದ್ದ ಚುನಾವಣೆ ಅದು. ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ಎದುರಾಳಿಯಾಗಿದ್ದ ಸಂದರ್ಭ ಅದು. ಬಲ ಮತ್ತು ಎಡ ಪಕ್ಷಗಳು ಮತ್ತು ಉದಾರವಾದೀ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಹೀಗೆ ವಿಭಿನ್ನ ನೋಟಗಳ, ಪ್ರಣಾಳಿಕೆಗಳ, ಆಶಯಗಳ ಪಕ್ಷಗಳು ಎದುರಾಬದರಾಗಿ ನಿಂತು ತಮ್ಮ ಅಸ್ತಿತ್ವಕ್ಕೆ ಸೆಣಸಾಡುವ ಸನ್ನಿವೇಶ ಅದು. ಈ ಸನ್ನಿವೇಶವನ್ನು ವಿಶ್ಲೇಷಿಸುವುದು, ಯಾವ ಪಕ್ಷದಿಂದ, ಯಾವ ಗುಂಪಿನ ಪಕ್ಷಗಳಿಂದ ದೇಶಕ್ಕೆ, ಜನಕ್ಕೆ ಹಿತವಾಗಬಹುದು ಎಂದು ವಿಶ್ಲೇಷಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಲೇ ಇರುತ್ತದೆ. ಯಾವುದನ್ನೂ ನಿಖರವಾಗಿ ಯಾರೂ ಹೇಳಲಾಗದಷ್ಟು ಸಂಕೀರ್ಣವಾಗಿದ್ದ ಚುನಾವಣೆಯಲ್ಲಿ ನೂರಾರು ಅಭಿಪ್ರಾಯಗಳು ಮೂಡುತ್ತವೆ. ಅನೇಕ ವಿಶ್ಲೇಷಣೆಗಳು ನಡೆಯುತ್ತವೆ. ಚುನಾವಣೆಯ ಹುರಿಯಾಳುಗಳ ಬಗ್ಗೆ, ಪಕ್ಷಗಳ ಪ್ರಣಾಳಿಕೆಗಳ ಬಗ್ಗೆ, ಚುನಾವಣೆಯಲ್ಲಿ ಪ್ರಮುಖವಾಗುವ ಸಂಗತಿಗಳ ಬಗ್ಗೆ ವಿಚಾರ ಮಂಡನೆ ಅಸಹಜವೇನೂ ಅಲ್ಲ. ಇಂಥ ಸನ್ನಿವೇಶದಲ್ಲಿಯೇ ಅನಂತಮೂತರ್ಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇದನ್ನು ಒಪ್ಪದ ಅನೇಕರು ತಮ್ಮ ಅಭಿಪ್ರಾಯಗಳನ್ನೂ ಹೇಳಬಹುದು. ಯಾವುದು ಸರಿ, ಯಾವುದು ತಪ್ಪು ಎಂಬ ಸಾಮೂಹಿಕ ಚಚರ್ೆಯೂ ನಡೆಯಬಹುದು; ನಡೆಯುತ್ತದೆ; ಅದೇ ಪ್ರಜಾಪ್ರಭುತ್ವದ ಶಕ್ತಿ ಮತ್ತು ಸೊಗಸು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಒಂದೇ ಅಭಿಪ್ರಾಯ, ಒಂದೇ ನಿಲುವು, ಒಂದೇ ಪಕ್ಷ ಇರುವುದು ಸಾಧ್ಯವೇ ಇಲ್ಲ. ಇದ್ದರೆ ಅದು ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಿಲ್ಲ.
ಹಿಟ್ಲರ್ ಭಿನ್ನ ಮತವನ್ನು ಮಾನ್ಯ ಮಾಡುತ್ತಿರಲಿಲ್ಲ. ತನ್ನ ಹಿತಚಿಂತಕರ ಹೊರತಾಗಿ ಬೇರೆಯವರು ಆಡುತ್ತಿದ್ದ ಮಾತುಗಳು, ನಡೆಸುತ್ತಿದ್ದ ಚಿಂತನೆಗಳು ಹಿಟ್ಲರ್ನ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು. ಅಂಥವರನ್ನೆಲ್ಲ ತನ್ನ ವೈರಿಗಳು, ದೇಶದ್ರೋಹಿಗಳು ಎಂದು ಅವನು ಪರಿಗಣಿಸುತ್ತಿದ್ದ. ಅಂಥವರಿಗೆ ಜೈಲೋ, ಮರಣದಂಡನೆಯೋ ಕಾದಿರುತ್ತಿತ್ತು. ಹಿಟ್ಲರ್ ಮಾತ್ರವಲ್ಲ, ಎಲ್ಲ ಸವರ್ಾಧಿಕಾರಿಗಳೂ ಹೀಗೆಯೇ. ಸರ್ವಾಧಿಕಾರದ ಅರ್ಥವೇ ಇದು. ಅಲ್ಲಿ ಬಹುಜನರ ಮಾತುಗಳಿಗೆ ಬೆಲೆ ಇರುವುದಿಲ್ಲ. ಬಹುಸಂಸ್ಕೃತಿಗಳು ಸಹಬಾಳ್ವೆ ನಡೆಸದಂತೆ, ವಿಭಿನ್ನ ವಿಚಾರಧಾರೆ ತಲೆಎತ್ತದಂತೆ ಸರ್ವಾಧಿಕಾರಿಗಳು ನೋಡಿಕೊಳ್ಳುತ್ತಾರೆ.
ಅನಂತಮೂರ್ತಿಯವರ ಈ ಮಾತನ್ನು ಕುರಿತು ಚಿಂತಿಸುವ ಸಂದರ್ಭದಲ್ಲಿ ನನಗೆ ಹನ್ನೆರಡನೇ ಶತಮಾನದ ರಾಜಕೀಯ ನೆನಪಿಗೆ ಬಂತು. ಕಲ್ಯಾಣವನ್ನು ಬಿಜ್ಜಳ ಆಳುತ್ತಿದ್ದ ಸಂದರ್ಭ ಅದು. ಬಿಜ್ಜಳ ರಾಜ. ಅವನ ಸಚಿವ ಸಂಪುಟದಲ್ಲಿ ಬಸವಣ್ಣ ಭಂಡಾರಿ; ಅಂದರೆ ಅರ್ಥಮಂತ್ರಿ. ಈ ವ್ಯವಸ್ಥೆಯೇ ಸೋಜಿಗಕ್ಕೆ ಕಾರಣವಾಗುತ್ತದೆ. ರಾಜ ವ್ಯವಸ್ಥೆ ಎಂದರೆ ಅದು ಇರುವ ವ್ಯವಸ್ಥೆಯನ್ನು ಸುರಕ್ಷಿತವಾಗಿ ಮುನ್ನಡೆಸಲು ನೋಡುತ್ತದೆ. ವ್ಯವಸ್ಥೆಯನ್ನು ಬದಲಾಯಿಸಬೇಕೆನ್ನುವ ಧ್ವನಿಗೆ ಅಲ್ಲಿ ಬೆಂಬಲವೇ ಸಿಕ್ಕುವುದಿಲ್ಲ. ಹೊಸ ವ್ಯವಸ್ಥೆ, ಹೊಸ ವಿಚಾರಗಳು, ಹೊಸ ಚಿಂತನೆ, ಕ್ರಾಂತಿಕಾರಕ ಬದಲಾವಣೆ ಇಂಥ ಯಾವುದನ್ನೂ ರಾಜ ವ್ಯವಸ್ಥೆ ಒಪ್ಪುವುದೇ ಇಲ್ಲ. ಅದೆಲ್ಲ ತನಗೆ ಕಂಟಕವಾಗಬಲ್ಲದೆಂದು ರಾಜವ್ಯವಸ್ಥೆ ಬಲವಾಗಿ ನಂಬಿರುತ್ತದೆ. ಬಿಜ್ಜಳನೂ ಇದಕ್ಕೆ ಭಿನ್ನವಾದ ರಾಜನಾಗುವುದು ಸಾಧ್ಯವಿರಲಿಲ್ಲ. ಆದರೆ ಬಸವಣ್ಣ? ವ್ಯವಸ್ಥೆಯ ವಿರುದ್ಧ ಬಂಡೆದ್ದ ಮಹಾನ್ ಬಂಡುಕೋರ. ಜಾತಿ, ಧರ್ಮ, ದೇವರು, ಸಮಾಜ, ರಾಜಕೀಯ ಹೀಗೆ ಎಲ್ಲವನ್ನೂ ಬುಡಮೇಲು ಮಾಡಲು ಹೊರಟ ಈ ಬಂಡಾಯಗಾರನನ್ನು ಬಿಜ್ಜಳ ಒಪ್ಪಿಕೊಳ್ಳುವುದು ಎಂದರೆ? ಇವನನ್ನೇ ತನ್ನ ಭಂಡಾರದ ಮಂತ್ರಿಯಾಗಿ ಮಾಡಿಕೊಂಡ ಬಿಜ್ಜಳ ಎಂಥ ರಾಜನಿರಬೇಕು; ಇವನ ವಿಚಾರಗಳು ಎಂಥವಿರಬೇಕು?
‘ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಬಸವಣ್ಣ. ‘ಗಂಡ ಮುನಿದರೆ ಹೆಂಡತಿಯಾಗಿರಬಾರದು’ ಎನ್ನುತ್ತಾನೆ. ‘ಜಂಗಮ ಮುನಿದರೆ ನಾನೆಂತು ಬದುಕಲಯ್ಯ?’ ಎಂದು ಆತಂಕಗೊಳ್ಳುತ್ತಾನೆ.

‘ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಮಾತಿಗೂ ಅನಂತಮೂರ್ತಿ ಅವರು ಆಡಿದ ಮಾತಿಗೂ ಎಷ್ಟು ಹತ್ತಿರದ ಸಂಬಂಧವಿದೆ ಎನ್ನುವುದನ್ನು ಗಮನಿಸಬೇಕು. ಬಸವಣ್ಣ ತಾನು ಮಂತ್ರಿ ಪದವಿಯನ್ನು ಒಪ್ಪಿಕೊಳ್ಳುವ ಮೊದಲು ಆಡಿದ ಮಾತಲ್ಲ ಇದು. ಒಪ್ಪಿಕೊಂಡ ನಂತರ, ಅಂದರೆ ಅರಸನೊಂದಿಗೆ ಸಂಬಂಧವನ್ನು ಕಟ್ಟಿಕೊಂಡ ನಂತರ ಆಡಿದ ಈ ಮಾತಿಗೆ ಅನೇಕ ಧ್ವನಿಗಳಿವೆ. ಬಸವಣ್ಣ ಸಂಬಂಧಗಳಲ್ಲಿ ಗಾಢ ನಂಬಿಕೆಯನ್ನು ಇಟ್ಟುಕೊಂಡವನು; ಅವನ ನಿಷ್ಠೆ ಪ್ರಶ್ನಾತೀತ. ಮೊದಲು ಈ ನಂಬಿಕೆ ಸಂಸಾರದಲ್ಲಿರಬೇಕು. ಗಂಡ ಮುನಿದರೆ ಅಥವಾ ಹೆಂಡತಿ ಮುನಿದರೆ ಸಂಸಾರ ಒಡೆಯುತ್ತದೆ. ಹೊಂದಾಣಿಕೆ ಸಾಧ್ಯವಾಗದ ಸಂಸಾರದಲ್ಲಿ ಗಂಡು ಹೆಣ್ಣು ಒಟ್ಟಾಗಿ ಇರುವುದರಲ್ಲಿ ಅರ್ಥವೇನಿದೆ? ಸಂಸಾರದ ಈ ತತ್ವವನ್ನು ಬಸವಣ್ಣ ರಾಜಕೀಯಕ್ಕೂ ಹಬ್ಬಿಸಿ ನೋಡುತ್ತಾನೆ. ಅರಸನೊಂದಿಗೆ ಸಾಮರಸ್ಯ ಸಾಧ್ಯವಾಗದಿದ್ದರೆ ಅಲ್ಲಿ ಬದುಕು ದುಸ್ತರವಾಗುತ್ತದೆ. ಅದಕ್ಕಾಗಿಯೇ ಮುನಿದ ಅರಸನ ನಾಡಿನಲ್ಲಿ ಇರಬಾರದು. ಇದು ಕೇವಲ ಮುನಿಸಿನ ಪ್ರಶ್ನೆಯಲ್ಲ. ಸಂಬಂಧದ ಪ್ರಶ್ನೆ. ಅರಸ ಮತ್ತು ಪ್ರಜೆಯ ನಡುವಿನ ಸಂಬಂಧ. ಈ ಸಂಬಂಧ ಸಾಧ್ಯವಾಗದಿದ್ದರೆ ಅಂಥ ಕಡೆ ಬದುಕು ದುರ್ಭರವಾಗುತ್ತದೆ. ವ್ಯಕ್ತಿಯ ಒಟ್ಟು ನಂಬಿಕೆ, ನಿಷ್ಠೆ, ಸಾಮರಸ್ಯಗಳು ಕುಟುಂಬದಿಂದ ಆರಂಭವಾಗಿ ನಾಡಿಗೂ ಹಬ್ಬುತ್ತವೆ; ಹಬ್ಬಬೇಕು. ಇಲ್ಲವಾದರೆ ಬದುಕು ಸಾರ್ಥಕವಾಗುವುದಿಲ್ಲ. ಬಸವಣ್ಣನಂಥ ಸಮಗ್ರ ವ್ಯಕ್ತಿತ್ವಕ್ಕಂತೂ ಇದು ಸಾಧ್ಯವಾಗದ ಮಾತು. ಬಸವಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಅಧ್ಯಾತ್ಮಕ್ಕೂ ವಿಸ್ತರಿಸುತ್ತಾನೆ. ‘ಜಂಗಮ ಮುನಿದರೆ ನಾನೆಂತು ಬದುಕಲಯ್ಯಾ?’ ಎಂದು ಕೇಳುತ್ತಾನೆ. ಬಸವಣ್ಣನ ಅಧ್ಯಾತ್ಮದಲ್ಲಿ ‘ಗುರು, ಲಿಂಗ, ಜಂಗಮ’ ಬಹಳ ಮುಖ್ಯವಾದ ತತ್ವ. ಗುರು ಮತ್ತು ಜಂಗಮನಲ್ಲಿ ಅಂಥ ವ್ಯತ್ಯಾಸವಿಲ್ಲ. ವ್ಯಕ್ತಿ ಸ್ವಯಂ ಲಿಂಗವಾಗುವುದೇ ಬಸವಣ್ಣನ ಆಧ್ಯಾತ್ಮಿಕ ನಡೆಯ ಅಂತಿಮ ಗುರಿ.
ಬಸವನ ಈ ಮಾರ್ಗದಲ್ಲಿ ನಂಬಿಕೆಯಿಟ್ಟ ಸಾವಿರಾರು ಜನ ಕಲ್ಯಾಣವನ್ನು ಕೇಂದ್ರ ಮಾಡಿಕೊಂಡದ್ದು, ಬಿಜ್ಜಳ, ತನ್ನ ರಾಜವ್ಯವಸ್ಥೆಯಲ್ಲಿಯೂ, ಈ ಶರಣರನ್ನು ಸಹಿಸಿದ್ದು ಬಹುದೊಡ್ಡ ನಡೆ. ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟದ್ದು ಬಸವ ಚಳವಳಿ. ವ್ಯವಸ್ಥೆ ಎಂದರೆ ಸ್ಥಾಪಿತ ಮೌಲ್ಯಗಳು; ಜಾತಿ, ಲಿಂಗ ತಾರತಮ್ಯದ, ಅಸಮಾನತೆಯನ್ನು ಬೆಂಬಲಿಸುವ ಶಕ್ತಿಗಳನ್ನು ಪೋಷಿಸುವ ವ್ಯವಸ್ಥೆ. ಸನಾತನಿಗಳು, ಪುರೋಹಿತರು, ಜಾತಿ-ಧರ್ಮಗಳ ಮೇಲೆ ಜನರನ್ನು ಆಳಲು, ನಿಯಂತ್ರಿಸಲು ನೋಡುವವರು. ಬಿಜ್ಜಳ ಇಂಥ ಶಕ್ತಿಗಳ ನಡುವೆ ಇದ್ದೂ ಬಸವಣ್ಣನನ್ನು ಒಪ್ಪಿಕೊಂಡ; ಅವನ ವಿಚಾರಗಳನ್ನು, ಮೌಲ್ಯಗಳನ್ನು ಬೆಂಬಲಿಸಿದ. ಕೊನೆಗೆ ಬಸವನಂತೆ, ಶರಣರಂತೆ, ತಾನೂ ಹಳೆಯ ವ್ಯವಸ್ಥೆಗೆ ಬಲಿಯಾದ. ಇಂಥ ಉದಾಹರಣೆಗಳು ಕನರ್ಾಟಕದ ಚರಿತ್ರೆಯಲ್ಲಿ, ಅಷ್ಟೇ ಏಕೆ, ಇಡೀ ಭಾರತದ ಚರಿತ್ರೆಯಲ್ಲಿ ತೀರ ಅಪರೂಪ.
ಬಸವಣ್ಣ ರಾಜ-ಪ್ರಜೆ, ಗಂಡ-ಹೆಂಡತಿ, ಗುರು-ಜಂಗಮ ಈ ಸಂಬಂಧಗಳನ್ನು ಅರಿತವನಾಗಿದ್ದ. ಈ ಸಂಬಂಧಗಳಲ್ಲಿ ಅವನು ತೋರುತ್ತಿದ್ದ ನಿಷ್ಠೆ ಇಡಿಯಾದದ್ದು. ಅಲ್ಲಿ ಸಂದೇಹಕ್ಕೆ ಎಡೆಯೇ ಇಲ್ಲ. ಹೀಗಾಗಿಯೇ ಅವನು ಅರಸು ಮುನಿದರೆ ನಾಡೊಳಗಿರಬಾರದು ಎಂಬ ಕಠೋರ ನಿಲುವನ್ನು ತಳೆಯುತ್ತಾನೆ. ಸಂಬಂಧವನ್ನು ಕಟ್ಟಿದವನಿಗೆ ಮುರಿಯುವ ಹಕ್ಕೂ ಇರುತ್ತದೆ. ಅನಂತಮೂತರ್ಿ ಅವರ ನಿಷ್ಠೆ ಇರುವುದು ಪ್ರಜಾಪ್ರಭುತ್ವದಲ್ಲಿ; ಅವರು ಕಟ್ಟಿಕೊಂಡಿರುವ ಸಂಬಂಧವೂ ಈ ವ್ಯವಸ್ಥೆಯಲ್ಲಿಯೇ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಮಗಿರುವ ನಿಷ್ಠೆಯನ್ನು ತೋರಿಸುವ ಅನೇಕ ಲೇಖನಗಳನ್ನು ಅವರು ಬರೆದಿದ್ದಾರೆ; ಅವರ ಮಾತುಗಳೂ ಈ ಚಿಂತನೆಯನ್ನು, ಈ ನಿಷ್ಠೆಯನ್ನು ಹೇಳುತ್ತಲೇ ಬಂದಿವೆ. ಇಂಥವರು, ಸಂಬಂಧವನ್ನು ಕಟ್ಟಿದವರು, ಈ ಸಂಬಂಧದ ಬಗ್ಗೆ ನಿಷ್ಠುರವಾಗಿ ಮಾತನಾಡುವ ಹಕ್ಕನ್ನು ಪಡೆದಿರುತ್ತಾರೆ. ಅದನ್ನು ಸಹಿಸುವ ಸಂಸ್ಕೃತಿ ನಮಗೆ ಬರಬೇಕು. ಅನಂತಮೂರ್ತಿ ಚಿಂತನೆಯಲ್ಲಿ ಕೊರತೆಗಳಿದ್ದರೆ, ಅದನ್ನು ಚರ್ಚೆಗೊಡ್ಡಬಹುದು; ಸಂವಾದದಲ್ಲಿ ಹೊಸ ಬೆಳಕನ್ನು, ಹೊಸ ಅರ್ಥವನ್ನು ಕಂಡುಕೊಳ್ಳಬಹುದು. ಹಾಗೆ ಮಾಡಲು ಸಾಧ್ಯವಾದಾಗಲೇ ನಾವು ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ಸಾಧ್ಯ. ಈ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ಸಾಧ್ಯ.
(ಸೌಜನ್ಯ: ಸಂಯುಕ್ತ ಕರ್ನಾಟಕ)



ಪೂರ್ವಾಗ್ರಹ ಮತ್ತು ಅಸಹನೆಯ ಅಭಿಪ್ರಾಯಗಳನ್ನು ಅನಂತ ಮೂರ್ತಿ ಹರಿಯಬಿಟ್ಟರು. ಈಗ ಅವುಗಳಲ್ಲಿ ಧ್ವನಿ, ಅರ್ಥ, ಸಮಾಜಮುಖಿ ಚಿಂತನೆಗಳಿದ್ದುವು, ಇದ್ದಿರಬಹುದು ಎನ್ನುವುದು ವೃಥಾ ಹುಡುಕಾಟಗಳು. ಹಾಗೆಯೇ, ‘ದೇಶ ಬಿಡಿ’ ಅನ್ನುವುದು ಕುಹಕಕ್ಕೆ ಕುಹಕ ಉತ್ತರವಿರಬಹುದಲ್ಲವೇ ?
ANATAMUURTI VIRODHIGALLI EE OLANOOTA BANDIDDARE CHENNAGIRUTTITTU….INNAADARU EE BHAVANE BARALI.
ಬಸವರಾಜು ಅವರಿಗೆ–ಒಂದು ರಾಜಕೀಯ ಪಕ್ಷದ ಬಗ್ಗೆ ಮೊದಲಿನಿಂದಲೂ ಪೂರ್ವಗ್ರಹ ಬೆಳಿಸಿಕೊಂಡಿರುವ ಅನಂತಮೂರ್ತಿ ಮತ್ತು ಅವರ ಅನುಯಾಯಿಗಳು ಮಾತ್ರ ಪ್ರಜಾಪ್ರಭುತ್ವವಾದಿಗಳು,ಸಮಾಜಮುಖಿ ಚಿಂತನನೆಯವರು ಎಂಬ ಮಾತುಗಳು ಹಾಸ್ಯಾಸ್ಪದ. ತಾವು ಹೇಳಿದ್ದನ್ನೆಲ್ಲಾ ಜನರು ತೀರ್ಥ, ಪ್ರಸಾದಗಳಂತೆ ಸ್ವೀಕರಿಸುತ್ತಾರೆ ಎಂದು ಭಾವಿಸಿ ಮಾತಾಡುವುದೇ ಪ್ರಜಾತಂತ್ರ ವಿರೋಧಿ. ಒಂದು ಪಕ್ಷದ ಸರ್ಕಾರ ಆಡಳಿತ ಪ್ರಾರಂಭಿಸುವ ಮುನ್ನವೇ ಅದರ ಬಗ್ಗೆ ಟೀಕೆ,ಟಿಪ್ಪಣಿ ಮಾಡುವುದು ಸರಿಯೇ? ಇನ್ನು ಯು ಆರ್ ಎ ಅವರನ್ನು ಬಸವಣ್ಣನಿಗೆ ಹೋಲಿಸಿ ಬರೆದ ಈ ಲೇಖನದಿಂದ ಒಬ್ಬ ವ್ಯಕ್ತಿಯಾಗಿ ಅವರನ್ನು ಮತ್ತು ಅವರ ಸಾಹಿತ್ಯವನ್ನು ಓದಿ ಅಭಿಮಾನವಿಟ್ಟುಕೊಂಡಿರುವ ನನ್ನಂತಹ ಹಲವರಿಗೂ ಸಹ ತಮ್ಮ ವಾದ ಸರಣಿಯಿಂದ ಪ್ರಯೋಜನವೇನೂ ಆಗದು. ನಾವುಗಳು ಈಗಾಗಲೇ ಮೂರ್ತಿ ಅವರ ಆ ಮಾತುಗಳನ್ನು ಮರೆತಾಗಿದೆ. ಜತೆಗೆ ಮೂರ್ತಿ ಅವರೂ ಸಹ ತಮ್ಮ “ತಿದ್ದುಪಡಿ”ಮಾಡಿದ ಹೇಳಿಕೆಯನ್ನು ಕೊಟ್ಟಾಗಿದೆ.
abhivakti swatantryada mele maadua dhaLi..ellaruu virodhisabeku..uttama baraha..sir
ಒಬ್ಬ ವ್ಯಕ್ತಿಯ ಕೆಲಸ ಮಾಡುವುದನ್ನು ಪ್ರತ್ಯಕ್ಷವಾಗಿ ನೋಡುವ ಮೊದಲೇ ಆ ವ್ಯಕ್ತಿಗೆ ದೇಶವನ್ನು ಆಳುವ ಅರ್ಹತೆಯಿಲ್ಲ, ಅವರಿಗೆ ಅವಕಾಶ ಕೊಡಲೇ ಬಾರದು ಎಂದು ಅಪ್ಪಣೆ ಕೊಡಿಸುವುದು ಮೂರ್ತಿಗಳ ಪ್ರಜಾಪ್ರಭುತ್ವವೋ? ಅವರು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು, ಇದು ಯಾವ ರೀತಿ ಪ್ರಭುದ್ದತೆ?
ಬಸವರಾಜ್ ಅವರ ಲೇಖನ ನಿಜಕ್ಕೂ ಅದ್ಬುತ ಹಾಗೂ ವಾಸ್ತವ. ಒಬ್ಬ ಲೇಖಕ ಇಂಥ ಮಾತುಗಳನ್ನು ಏಕಾಏಕಿ ಆಡುವುದಿಲ್ಲ ಎನ್ನುವ ನಿಮ್ಮ ಮಾತು ನಿಜ. ಮೋದಿ ಕೇವಲ ಬಂಡವಾಳ ಶಾಹಿಗಳ ಪರ ಎನ್ನುವುದು ಗುಜರಾತ್ ಗೆ ಕಾಲಿಟ್ಟವರೆಲ್ಲರಿಗೂ ಗೊತ್ತು. ಹಾಗೆಯೇ ಅಲ್ಲಿನ ರೈತಾಪಿ ಬದುಕು, ಗುಡಿ ಕೈಗಾರಿಕೆಗಳು ನೆಲಕಚ್ಚಿ ದಿವಾಳಿಯಾಗಿರುವುದು ಕೂಡ ಸಾವಜನಿಕ ಸತ್ಯ. ಇದೆಲ್ಲದರ ನಡುವೆ ಮೋದಿ ಒಬ್ಬ ಅಪ್ಪಟ ಕೋಮುವಾದಿ ಎನ್ನುವುದಕ್ಕೆ ಗುಜರಾತ್ ನರಮೇದಕ್ಕಿಂತ ಬೇರೆ ನಿದಶನ ಬೇಕಿಲ್ಲ. ಹೀಗಾಗಿಯೇ ಯು.ಆರ್.ಅನಂತಮೂರ್ತಿ ಆ ರೀತಿ ಹೇಳಿಕೆ ನೀಡಿದ್ದು. ಆದರೆ ಕೆಲವರು ಅದನ್ನು ಭಿನ್ನವಾಗಿ ಅಥೈಸಿ ಅವರ ಮನಸ್ಸನ್ನು ಘಾಸಿಗೊಳಿಸಿದರು. ಆದರೆ ಅವರಾಡಿದ ಮಾತಿನ ಹಿಂದಿನ ಸತ್ಯ ಕೆಲವೇ ದಿನಗಳಲ್ಲಿ ಸಾಮಾನ್ಯ ಜನರಿಗೂ ಗೊತ್ತಾಗಿತ್ತದೆ.
-ರಮೇಶ್ ಹಿರೇಜಂಬೂರು
Mr. Basavaraju is trying to give meaning to something where where was none and it looks like a wonderful thing to you, what are we heading at? blind, sheep like following? Even URA shouldn’t like this if his sharp critical senses are still intact. Your another quote “ಇದೆಲ್ಲದರ ನಡುವೆ ಮೋದಿ ಒಬ್ಬ ಅಪ್ಪಟ ಕೋಮುವಾದಿ ಎನ್ನುವುದಕ್ಕೆ ಗುಜರಾತ್ ನರಮೇದಕ್ಕಿಂತ ಬೇರೆ ನಿದಶನ ಬೇಕಿಲ್ಲ.” has been quoted by all who didn’t find anything else to say against Modi, why do you want to take that path? Everybody talks as if they witnessed what happened in Gurarat first hand, but no ones wants to know the truth.
ನಾವು ಗೌರವಿಸುವ–ಹಾಗೂ ವಿಶ್ವದ ಶ್ರೇಷ್ಠ ಲೇಖಕರಲ್ಲಿ ಒಬ್ಬರೆಂದು ನಾನು ಪರಿಗಣಿಸುವ–ಅನಂತಮೂರ್ತಿಯವರೂ ಸಹಾ ಕೇವಲ ಮನುಷ್ಯರು. ರಾಗ ದ್ವೇಷಗಳಿಗೆ ಬದ್ಧರು. ಅವರೇನಾದರೂ ಅತಿರೇಕಕ್ಕೆ ಹೋದರೆ ಅವರನ್ನು ಎಚ್ಚರಿಸುವುದು ಅವರ ಹಿತೈಷಿಗಳು ಮಾಡಬೇಕಾದ ಕೆಲಸ, ಹೊರತು ಅದನ್ನು ಸಮರ್ಥಿಸುವುದಲ್ಲ. ಸ್ವತಃ ಅನಂತಮೂರ್ತಿಯವರೇ ಬಹುಬೇಗನೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ. (ತಪ್ಪು ಮಾಡುವ ಸ್ವಾತಂತ್ರ್ಯ ಇರಬೇಕಲ್ಲವೇ ಎನ್ನುವ ಅವರ ಮಾತೊಂದಿದೆ; ನಾನು ಬಹಳವಾಗಿ ಮೆಚ್ಚುವ ಮಾತು ಅದು.) ಆ ತಪ್ಪುಗಳನ್ನು ಸರಿಯಂದು ಸಮರ್ಥಿಸಹೊರಟವರು ಆಗ ಮತ್ತೆ `ಹೌದೌದು!’ ಎನ್ನಬೇಕಾಗುತ್ತದೆ. `ಮೋದಿ ಪ್ರಧಾನಮಂತ್ರಿಯಾದರೆ ನಾನು`ದೇಶದಲ್ಲಿ ಇರಬಯಸುವುದಿಲ್ಲ’ ಎಂಬ ತಮ್ಮ ಮಾತನ್ನು ಚುನಾವನೆ ಫಲಿತಾಂಶಕ್ಕೆ ಮೊದಲೇ ಅನಂತಮೂರ್ತಿಯವರು ತಿದ್ದಿಕೊಂಡಿದ್ದಾರೆ. ಅವರ ವೈಚಾರಿಕ ಜೀವನವನ್ನು ತೆಗೆದುಕೊಂಡರೆ, ಅವರೆಂದೂ ಕಠಿಣ ಶಿಲೆಯಂತೆ ಇದ್ದವರಲ್ಲ ಎನ್ನುವುದು ತಿಳಿಯುತ್ತದೆ. ಒಂದು ಉದಾಹರಣೆಯನ್ನು ಕೊಡುವುದಾದರೆ, ಅಯ್ಯಪ್ಪ ಭಜನೆಯನ್ನು ಟೀಕಿಸಿದ ಅವರು ಖುದ್ದು ಶಬರಿಮಲೆಗೆ ಭಕ್ತನಾಗಿ ಹೋಗಿಬಂದುದು! ಅವರ ಲೇಖನಗಳಲ್ಲಿ, ಮಾತುಗಳಲ್ಲಿ ನಾನು ಮೆಚ್ಚುವುದು ಅವರ ಸ್ವಾನುಮಾನವನ್ನು; ಅದನ್ನೇ ಅವರು ಇತರರಲ್ಲೂ ಅಪೇಕ್ಶಿಸುತ್ತಾರೆ. ಈ ಸ್ವಾನುಮಾನವನ್ನು ಅವರೇ ಕೆಲವು ಸಲ ಮರೆತುಬಿಡುವುದಿದೆ–ಆಗಲೆಲ್ಲ ಅವರು ಫ್ಯಾಸಿಸ್ಟರಂತೆ ಮಾತಾಡುತ್ತಾರೆ. ಮೋದಿ ವಿಷಯದಲ್ಲೂ ಇದೇ ಆಯಿತು ಎಂದು ಕಾಣುತ್ತದೆ. ಚುನಾವಣೆಯ ಸಂದರ್ಭದಲ್ಲಿ ಅನಂತಮೂರ್ತಿಯವರು ಒಂದು ಪಕ್ಷದ ಪರವಾಗಿ ಚುನಾವಣಾ ಪ್ರಚಾರಕರಂತೆ ವರ್ತಿಸಿದುದು ಅನೇಕರಿಗೆ ಸೇರಲಿಲ್ಲ–ನನಗೂ ಕೂಡ. ಯಾಕಂದರೆ ಅವರು ನಿಷ್ಪಕ್ಷಪಾತೀ ಸ್ಥಾನದಲ್ಲಿದ್ದರೆ ಒಂದು ಭರವಸೆಯಿರುತ್ತಿತ್ತು. ಸೋನಿಯಾ ಗಾಂಧಿಯನ್ನು ಹೊಗಳಿದರು, ಸರಿ. ಅದೇ ಮಾತಿನಲ್ಲಿ ರಾಹುಲ್ ಗಾಂಧಿಯನ್ನು ಹೊಗಳಿದರು, ನಂತರ ಪ್ರಿಯಂಕಾ ಗಾಂಧಿಯನ್ನೂ! ಭಾರತ ಬಯಸಿದ್ದು ಇಂಥ ಪ್ರಜಾಪ್ರಭುತ್ವವನ್ನೇ? ಅನಂತಮೂರ್ತಿಯನ್ನು ಕಾಡಿದ ಗಾಬರಿ ಯಾವುದು? ಸ್ವವಿಮರ್ಶೆಯನ್ನು ಅವರು ಸಂಪೂರ್ಣ ಕಳಕೊಂಡರೇ?
ಅನಂತಮೂರ್ತಿಯವರಿಗೆ ನಾನು ಸಾಹಿತ್ಯ ಸಂಗತಿಗಳ ಕುರಿತು ನಾನು ಕೆಲವೊಮ್ಮೆ ಈಮೇಲ್ ಮಾಡುವುದಿದೆ. ರಾಜಕೀಯ ವಿಷಯಗಳನ್ನು ನಾನು ಪ್ರಸ್ತಾಪಿಸುವುದು ಬಹಳ ಅಪರೂಪ. ಆದರೆ `ದೇಶದಲ್ಲಿ ಇರಬಯಸುವುದಿಲ್ಲ’ ಎಂಬ ಅವರ ಮಾತು ಕೇಳಿ, ಅದು ಪ್ರಜಾಪ್ರಭುತ್ವಕ್ಕೆ ಹೊಂದುವ ಮಾತಲ್ಲ ಎಂದು ಒಮ್ಮೆ ಬರೆದೆ; ಅಲ್ಲದೆ, ಇಂಥ ಮಾತು ಸಂವಾದಕ್ಕೆ ಎಡೆ ಮಾಡದೆ ಜಗಳವನ್ನು ಪ್ರಚೋದಿಸುತ್ತದೆ ಎಂದೆ. ನಂತರ ಇತ್ತೀಚೆಗೆ ಒಮ್ಮೆ ರಾಜಕೀಯವಾಗಿ ಬರೆದ ಮಾತೆಂದರೆ, ಕಾಂಗ್ರೆಸ್ ಪಕ್ಷ ಹೇಗೆ ಕೊಲೋನಿಯಲಿಸಮಿನ ಪಳೆಯುಳಿಕೆಯಾಗಿ ಕಾಣಿಸುತ್ತಿದೆ ಎಂದು. ಒಂದೇ ಪಕ್ಷ (ಕಾಂಗ್ರೆಸ್) ದೇಶವನ್ನು ಯಾವತ್ತೂ ಆಳಬೇಕೆಂದು ನಿಮ್ಮ ಬಯಕೆಯೇ, ಹಾಗಾದರೆ ಪ್ರಜಾಪ್ರಭ್ಹುತ್ವದ ಗತಿಯೇನು ಎಂದು ಕೇಳಿದ್ದೆ. ಇವೆರಡಕ್ಕೂ ಅನಂತಮೂರ್ತಿಯವರು ಉತ್ತರಿಸಲಿಲ್ಲ. ಇದರ ಅರ್ಥ ನಮ್ಮ ನಡುವೆ ವಿರಸ ಬಂದಿದೆಯೆಂದೋ, ನನ್ನ ಮಾತುಗಳನ್ನು ಅವರು ತಪ್ಪು ತಿಳಿದಿದ್ದಾರೆ ಎಂದೋ ಅಲ್ಲ. ನಾನೂ ಒಬ್ಬ `ಹೌದಪ್ಪ’ನಾಗುವುದನ್ನು ಅನಂತಮೂರ್ತಿ ಇಷ್ಟಪಡುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಹೌದಪ್ಪ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷದ ನೇತಾರರು ಬೇಕೆಂದೇ ಬೆಳೆಸಿ ಹಾಳಾದರು. ಅನಂತಮೂರ್ತಿ ಅಂಥ ಸಂಸ್ಕೃತಿಯಿಂದ ದೂರ ಇರಬಯಸುತ್ತಾರೆ,ಸಮರ್ಥನೆ ಅವರಿಗೆ ಮುಜುಗರ ಉಂಟುಮಾಡುತ್ತದೆ, ವಿಮರ್ಶೆಯನ್ನು ಅವರು ಸ್ವಾಗತಿಸುತ್ತಾರೆ ಎಂದು ನಾನು ತಿಳಿದಿದ್ದೇನೆ. ವಿಮರ್ಶೆಯ ಸುದೂರವನ್ನು ಉಳಿಸಿಕೊಳ್ಳುವುದಕ್ಕಾಗಿಯಾದರೂ ಅನಂತಮೂರ್ತಿಯವರು ಪಕ್ಷಾತೀತರಾಗಿರುವುದು ಅಗತ್ಯ.
ಇನ್ನು ಅವರಿಗೆ ಟಿಕೆಟ್ ಕಳಿಸಿ, ಪಾಕಿಸ್ತಾನಕ್ಕೆ ಹೋಗಿ ಎನ್ನುವುದು, ಅವರ ಮನೆ ಮುಂದೆ ಅವರ ವಿರುದ್ಧ ಘೋಷಣೆ ಕೂಗುವುದು–ಇವೆಲ್ಲ ಅನಾಗರಿಕ ಮತ್ತು ಖಂಡನಾರ್ಹ ಎನ್ವುವುದರಲ್ಲಿ ಸಂಶಯವಿಲ್ಲ. ಅನಂತಮೂರ್ತಿ ನಮ್ಮಲ್ಲಿರುವ ಒಬ್ಬ ಶ್ರೇಷ್ಠ ಕ್ರಿಟಿಕಲ್ ಇನ್ಸೈಡರ್–ಅವರನ್ನು ಈ ದೇಶ ಬಿಟ್ಟುಕೊಡುವುದಿಲ್ಲ.
ನಮ್ಮಲ್ಲೀಗ ಯಾವ ಅರಸೂ ಇಲ್ಲ, ಇರುವುದು ಪ್ರಜಾಪ್ರಭ್ಹುತ್ವ.
ಕೆ.ವಿ. ತಿರುಮಲೇಶ್
ಮಾನ್ಯ ತಿರುಮಲೇಶ್ ,
ನನಗೆ ಅನಂತಮೂರ್ತಿ ಯವರ ಬರವಣಿಗೆ ಅಥವಾ ಅವರು ಪ್ರತಿಪಾದಿಸುವ ಮೌಲ್ಯಗಳಾದ ಪ್ರಜಾಪ್ರಭುತ್ವ, ಮಾತಿನ ಸ್ವಾತಂತ್ರ್ಯಾ ಮತ್ತು ಫ್ಯಾಸಿಸ್ಟ್ ವಿರುದ್ಧದ ಅವರ ನಿಲುವುಗಳ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಇತ್ತೀಚಿಗೆ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯನ್ನು ತಾವು ಓದಿರುತ್ತೀರಿ ಎಂದು ನಂಬಿದ್ದೇನೆ. ಇವರು ಬಿಜೆಪಿ ಯನ್ನು ವಿರೋದಿಸುವುದು, ಕಾಂಗ್ರೆಸ್ ಬೆಂಬಲಿಸುವುದು ಮತ್ತು ಕಾಂಗ್ರೆಸ್ ಸರ್ಕಾರದಿಂದ ಅರ್ಥಿಕ ನೆರುವು ಪಡೆವುದು ಇದೆಲ್ಲಾ ನಾನಾ ಅರ್ಥಗಳನ್ನು ಕೊಡುವುದಿಲ್ಲವೇ. ನಿಜಕ್ಕೂ ಈ ಸಹಾಯ ಪಡೆಯುವಷ್ಟು ಬಡವರೇ ಅನಂತಮೂರ್ತಿ?. ಈ ಹಿಂದೆಯೇ ಸರ್ಕಾರದಿಂದ ಮನೆ ಪಡೆದು ವಿವಾದಕ್ಕೊಳಗಗಿದ್ದ ಇವರಿಗೆ ಅಷ್ಟೂ ‘ಜ್ಞಾನ’ ಇಲ್ಲವೆಂದರೆ ಹೇಗೆ?.
ಇವರ ಇಂತಹ ನಡೆಗಳು ಇವರ ಬಗ್ಗೆ ಮಾತ್ರವಲ್ಲ, ಬೇರೆ ಸಾಹಿತಗಳಬಗ್ಗೆ ಇರುವ ವಿಶ್ವಾಸಾರ್ಹತೆಯ ಮೇಲೆ ಎಲ್ಲರಲ್ಲೂ ಅನುಮಾನ ಬರುವಂತೆ ಮಾಡಿದೆ.
ಅನಂತಮೂರ್ತಿ ಯವರ ಆತ್ಮಕತೆ ‘ಸುರಗಿ’ಯಲ್ಲಿ ಅವರು ತಮ್ಮ ಜೀವನದ ಪೂರ್ವಾರ್ದದ ಬಗ್ಗೆ ಬರೆದುದೆಲ್ಲ ಅವರು ತಮ್ಮ ಬದುಕಿನ ಸಮರ್ಥನೆಗೆ ಬಳಸಿಕೊಂಡಂತೆ ಅನಿಸುವುದು ಇಂಥಹ ಕಾರಣಗಳಿಂದಲೇ ಇರಬೆಕು. ಇದರಲ್ಲಿ ಅವರ ಮನೆ ವಿವಾದದ ಬಗ್ಗೆ ಪ್ರಸ್ಥಾಪಿಸುತ್ತ ಒಮ್ಮೆ ಲಂಕೇಶರು ಮೂರ್ತಿಯವರನ್ನು ಅವರ ವಿವಾದಿತ ಮನೆಯಲ್ಲಿ ಬೇಟಿಯಾದಾಗ ಅವರು ಹೇಳಿದ ‘ ಇದೆಲ್ಲ ಆಗಿಹೋದ ವಿಚಾರ , ಮರೆತುಬಿಡಿ ‘ ಎಂದಿದ್ದನ್ನೇ ತಮ್ಮ ಸಮರ್ಥನೆಗೆ ಬಳಸಿಕೊಂಡಿದ್ದಾರೆ ಮತ್ತು ಅದೇನೋ ಯಾರಿಗೂ ಗೊತ್ತಿರದಿದ್ದ ವಿಷಯವೆಂಬಂತೆ ಬರೆದಿದ್ದಾರೆ. ಆದರೆ, ಈ ಬೇಟಿಯ ಬಗ್ಗೆ ಲಂಕೆಶರೇ ತಮ್ಮ ಪತ್ರಿಕೆಯಲ್ಲಿ ಬರೆದಿದ್ದರು . ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳುತ್ತಿದ್ದ ಅನಂತಮೂರ್ತಿ ಯವರನ್ನು ಕಾಣಲು ಬಂದಿದ್ದ ಲಂಕೇಶರು ಆ ಸಮಯದಲ್ಲಿ ಮತ್ತೇನನ್ನು ಹೇಳಬಹುದಿತ್ತು?
ಇವರಿಗಿರುವ ಅಧಿಕಾರಸ್ತರ ಮತ್ತು ಪ್ರಶಸ್ತಿಗಳ ಬಗೆಗಿನ ವ್ಯಾಮೋಹ ಇವರ ಬಗೆಗಿರುವ ವಿಶ್ವಾಸಾರ್ಹತೆಗೆ ಕಪ್ಪು ಚುಕ್ಕೆ ಇಟ್ಟಿದೆ
sir, Ananth murthy ondu vichara dhareyadare, aa dhare obba vyaktiyattale haridiruvude nijavagiddalli adu ondu samana vichara dhareya pratikavagirabekittu. aadare phalitanshavu bereyagiddarinda, avara vicharadharege viruddhavada innondu dhare ellavannu kocchihakiddu murthiyavara vicharakke soluntayitu. hagiddalli yava vichara dhare, iigina mahiti yugadalli, jayisikonditu? chitra spashtavagideyaalave?
“ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ” ಎಂಬುದು ಮಂಕುತಿಮ್ಮನ ಕಗ್ಗ. ಅನಂತ ಮೂರ್ತಿಯವರ ಮನದೊಳಗೆ ಹೊಕ್ಕು ಅದರ ಸವಿವರ ವಿಶ್ಲೇಷಣೆ ಮಾಡಿರುವ ಲೇಖಕರಿಗೆ ಬಹು ಪರಾಕ್! ಸ್ವತಃ ಅನಂತ ಮೂರ್ತಿಯವರು ಈ ಲೇಖನ ಓದಿ ತಮ್ಮ ಭಾವನೆಗಳನ್ನು ಹೊಸದಾಗಿ ಅರ್ಥೈಸಿಕೊಂಡರೆ ಆಶ್ಚರ್ಯವಿಲ್ಲ! ಇಲ್ಲಿ ಮುನಿದವ ಅರಸಲ್ಲ. ಈಗ ಅರಸರೂ ಇಲ್ಲ. ಮುನಿದವರು ಅರಸನ ತೀರಾ ಕೆಲವು ಆನುಯಾಯಿಗಳು. ಅವರೇನು ಮೂರ್ತಿಯವರನ್ನು ಓಡಿಸಲಿಲ್ಲ. ಹೆಚ್ಚೆಂದರೆ ಸ್ವಲ್ಪ “ಟಾಂಗ್” ಕೊಟ್ಟರು. ಒಂದು ಸಭೆಯಲ್ಲಿ ತಲೆಗೆ ತೋಚಿದ್ದನ್ನು ಒರಲುವ ಬದಲಿಗೆ, ಕೇಳುಗರ ಮಟ್ಟವನ್ನು ಸ್ವಲ್ಪ ಅಧ್ಯಯನ ಮಾಡಿ ಲಿಖಿತ ಭಾಷಣವನ್ನು ಓದುವುದು ಉತ್ತಮ. ತಮ್ಮ ಗೆಳೆಯರ ಗುಂಪಿನಲ್ಲಿ ಇಂತಹ ಮಾತುಗಳನ್ನು ಪುಂಖಾನುಪುಂಖವಾಗಿ ಆಡಲಿ; ಸಾರ್ವಜನಿಕ ನೆಲೆಗಟ್ಟಿನಲ್ಲಿ ಬೇಡ. ತಮಗೆ ದೊರೆತಿರುವ ಮರ್ಯಾದೆಗಾದರೂ ಬೆಲೆ ನೀಡುವುದು ಇಂದಿನ ಬುದ್ಧ್ಹಿಜೀವಿಗಳ ಆದ್ಯತೆ ಆಗಲಿ. ತಿರುಮಲೇಶರು ಹೇಳಿರುವಂತೆ, ಇದು ಮುಗಿದ ಅಧ್ಯ್ಯಾಯ.