ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಮ್ಮಾ ನೋಯುತ್ತಿದೆ….ಕಂದನ ಆಕ್ರಂದನಕ್ಕೆ ಸಾಂತ್ವನವೇನಿದೆ ?'

ನಾ ದಿವಾಕರ್

ಕಂದನ ಆಕ್ರಂದನ
ಅಮ್ಮಾ ನನಗೇನಾಗಿದೆಯಮ್ಮಾ
ಎಂದು ಕಂದಮ್ಮ ಮುದ್ದಾಗಿ ಕೇಳಿದಾಗ
ಥಟ್ಟನೆ ನೆನಪಾದರು ದ್ರೌಪದಿ
ಮಂಡೋದರಿಯರು
ಪಾತಿವ್ರತ್ಯದ ಪ್ರತಿನಿಧಿಗಳು
ಪುರಾಣ ಕಥನಗಳ ದುರಂತ ನಾಯಕಿಯರು !

ಏನೆಂದು ಹೇಳಲಿ ಜಗವರಿಯದ ಕಂದಮ್ಮನಿಗೆ
ಅಂಗಾಂಗದ ಪರಿವೆಯೇ ಇಲ್ಲದ ಹಸುಳೆಯ
ಲಿಂಗಸ್ಪರ್ಷದ ಅನುಭಾವವನು
ಧರ್ಮ ತತ್ವ ಸಿದ್ಧಾಂತಗಳು ಗ್ರಹಿಸುವವೇ ?
 
ಎಲ್ಲರೂ ನನ್ನನ್ನೇ ನೋಡುವರೇಕಮ್ಮಾ
ಎಂದು ಹಸುಳೆ ಕೇಳಿದಾಗ
ಕರುಳು ಹೇಳಿತು
ಸುಮ್ಮನಿರು ಸುತ್ತಲಿನ ಕ್ರೌರ್ಯ ಕತ್ತಲಲ್ಲೇ ಇರಲಿ
ಹಸುಳೆಯ ಎದೆ ಇರಿಯುವುದು ಬೇಡವೆಂದು !
 
ಮತ್ತದೇ ಅಳು ಮತ್ತದೇ ಪ್ರಶ್ನೆ
ಹೇಗೆ ಸಹಿಸಲಿ ? ದೂಷಿಸುವುದಾರನ್ನು ?
ಪುರುಷತ್ವವನ್ನೇ ಪೌರುಷವನ್ನೇ
ಪುರುಷ ಸೂಕ್ತದ ಕ್ರೌರ್ಯ ಸೂಕ್ತಿಗಳನ್ನೇ ?
 
ಅಮ್ಮಾ ನೋಯುತ್ತಿದೆ….
ಕಂದನ ಆಕ್ರಂದನಕ್ಕೆ ಸಾಂತ್ವನವೇನಿದೆ ?
ನೋವು ಸಹಿಸಲುಬಹುದು ಕ್ರೌರ್ಯ ಸಹಿಸಲಹುದೇ ?
ಚೌಕಟ್ಟಿನೊಳಗೆ ಬಂಧಿಯಾಗಿ
ಸರಳುಗಳನ್ನು ಎಣಿಸುತ್ತಾ ಕುಳಿತಾಗ
ಸೂರ್ಯ ಮುಳುಗುತ್ತಿರುತ್ತಾನೆ
ಎಲ್ಲೆಡೆ ಕೆಂಪು ರಕ್ತವ ಚೆಲ್ಲಿ
ಮೌನವಾಗಿ ಶಾಂತವಾಗಿ
ದಿಗಂತದಲಿ ಭರವಸೆಯ ಗೆರೆಯ ಮೂಡಿಸುತ್ತಾ !
 
 
 

‍ಲೇಖಕರು G

21 July, 2014

2 Comments

  1. Manjula

    kavana tumba chennagide

  2. mmshaik

    nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading