ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನ ಸೆರಗೆಂದೂ ಹಸಿ ಬೆಚ್ಚಗೆ..

mamata arasikere

ಮಮತಾ ಅರಸೀಕೆರೆ 

1
ನಾಲ್ಕುಹೆಜ್ಜೆ ನಡೆದೆ
ಕಾಲಲ್ಲಿ ಅಗಾಧ ಸೋಲು
ಅಮ್ಮ ಅದ್ಹೇಗೆ ಇಷ್ಟು ದೂರ
ಸವೆಸಿದಳೋ
2
ನನ್ನ ಅಂಗೈ ಸವರಿದ
ಕರವಸ್ತ್ರ ಸದಾ ಒದ್ದೆ ಒದ್ದೆ
ಅಮ್ಮನ ಸೆರಗೆಂದೂ
ಹಸಿ ಬೆಚ್ಚಗೆ
3
ಒಲೆಯ ಮೇಲಿಟ್ಟ ಅನ್ನ
ಒಂದೇ ಬಾರಿಗೆ ಸೀದಿತ್ತು
ಅಮ್ಮ ದಾಸೋಹವನ್ನೇ
ನಡೆಸಿದ್ದಳು
4
ಒಂದೇ ಕೂಸಿಗೆ ಮೊಲೆಯಲ್ಲಿ ಹಾಲಿಲ್ಲ.
ಅಮ್ಮ ಹತ್ತು ಹೆತ್ತಾಕೆ
ಹಾಲ್ಗಡಲಲ್ಲೇ ಅದ್ದಿದ್ದಳು
5
ಉಳಿಪೆಟ್ಟು ತಿನ್ನುವಾಗಲೆಲ್ಲಾ ಚೀರಿದ್ದೆ
ಅಮ್ಮ ಶಿಲ್ಪಿ ಕಡೆದ ಮೂರ್ತಿ

hands

6
ಕೆಂಗಣ್ಣು , ಅಸಹನೆಗೆ ಮೈಯೆಲ್ಲಾ
ತಹತಹ
ಅಮ್ಮನ ನೋಟಕ್ಕೆ
ಕಲ್ಲೂ ಕರಗಿತ್ತು
7
ಕೊರಳಿಗೆ ಬಿದ್ದ ಪದವಿ ಹಾರಕ್ಕೆ
ಅಹಂಕಾರ ಅಟ್ಟ ಏರಿತ್ತು
ಅಮ್ಮನ ಅನುಭವದೆದುರು
ಬಣ್ಣ ಅಳಿಸಿಹೋಗಿತ್ತು
8
ಬದುಕಿನಾಘಾತಕ್ಕೆ
ಸತ್ತು ಹುಟ್ಟಿದ್ದು ಅದೆಷ್ಟು ಬಾರಿಯೋ
ಯಮನನ್ನೂ ಅಟ್ಟಿದ್ದ
ಅಮ್ಮನ ಕಂಗಳಲ್ಲಿ
ಅದೆಷ್ಟು ಜೀವಂತಿಕೆ

‍ಲೇಖಕರು Admin

8 May, 2016

6 Comments

  1. shanthi k appanna

    enthaa sundara kavite. ammana antarangada bannavanu haage teredittide. ella ammandirigoo salluva kavite..

  2. Paramesh

    Thumba Chennagide.

  3. ಸುಧಾ ಚಿದಾನಂದಗೌಡ

    ತುಂಬಾ ಸೊಗಸಾದ, ಆರ್ದ್ರವಾದ ಸಂಬಂಧ ಅಮ್ಮನೊಂದಿಗಿನದು.
    ಅಕ್ಷರಗಳಲ್ಲಿ ಹಿಡಿದಿಡುವಲ್ಲೂ ಯಶಸ್ವಿಯಾಗಿದ್ದೀರಿ ಮಮತಾ
    ಕಂಗ್ರಾಟ್ಸ್

  4. D.Prasanna

    Very nice lines

  5. ಡಾ.ಪ್ರಕಾಶ ಜಿ.ಖಾಡೆ

    ಒಳ್ಳೆಯ ಕವಿತೆ.

  6. Anonymous

    Superb..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading