ಒಂದು ಕವಿತೆ
– ಕೃಷ್ಣ ಮೂರ್ತಿ
ಅಮ್ಮ ಸತ್ತಾಗ ಅಳಲಿಲ್ಲ
ಅವಳನ್ನೆತ್ತಿ ಚಟ್ಟದ ಮೇಲಿಟ್ಟಾಗಲೂ ಅಳಲಿಲ್ಲ
ಹೂಹಾರಗಳನ್ನೆಲ್ಲಾ ಎತ್ತಿ ಎಸೆದಾಗಲೂ ಅಳಲಿಲ್ಲ
ಆದರೆ ಅವಳ ಪ್ರದಕ್ಷಿಣೆ ಮಾಡಿ
ಪಾದಕ್ಕೆ ನಮಸ್ಕರಿಸುವಾಗ
ಅವಳ ಒಡೆದು ಹೋದ ಪಾದಗಳಿಂದ
ಒಸರಿದ್ದ ರಕ್ತದ ಹನಿಗಳನ್ನು ಕಂಡು
ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ
…
ಅಂದು ,
ನನಗೆ ಹೆಸರಿಡುವಾಗ ಅಪ್ಪ ನನಗೆ ಕಿವಿಯಲ್ಲಿ
ಮೂರು ಬಾರಿ ನನ್ನ ಹೆಸರು ಹೇಳಿದ್ದರು
ನನಗೆ ಕೇಳಿರಲಿಲ್ಲ
ಇಂದು
ಮೃತ ಅಪ್ಪನ ಕಿವಿಯಲ್ಲಿ ನಾನು ಮೂರು ಬಾರಿ
ನಾರಾಯಣ, ಎಂದು ಹೇಳಿದೆ
ಅವರಿಗೂ ಕೇಳಲಿಲ್ಲ
ಅಂದು ಆರಂಭ,
ಇಂದು ಅಂತ್ಯ
]]>





abba …. heart touching….
ಕೃಷ್ಣಣ್ಣ, ನಿಮ್ಮ ಕವಿತೆ ಅವಧಿಯಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು.. ನಿಮ್ಮ ಹಾಸ್ಯ ಲೇಖನಗಳು ಅವಧಿಯಲ್ಲಿ ಮೂಡಿಬರಲಿ.. ಶುಭವಾಗಲಿ ನಿಮಗೆ..
MANA MUTTUVA KAVITE
ತಾಕತ್ತಿನ ಕವಿತೆಗಳು… ಇದಕ್ಕಿಂತಲೂ ಮುಂಚೆ ಫೇಸ್ ಬುಕ್ಕಿನಲ್ಲಿ ನೋಡಿ ಆನಂದಿಸಿದ್ದೆ… ಚೆನ್ನಾಗಿವೆ ಎರಡೂ ಕವಿತೆಗಳು…
super
ಕವಿತೆ ತು೦ಬಾ ಚನ್ನಾಗಿದೆ..
ಕವಿತೆ ಓದಿ ಅಳು ಬರ್ತಾ ಇದೆ ಸರ್…