ಹೇಮ ಹೆಬ್ಬಗೋಡಿ
೧. ನೆನಪು
ಇಂದು ಸೂರ್ಯ ಅದೆಕೋ ಹೆದರಿ
ಬೆಳಕಿನೊಂದು ಕಿಟಕಿ ತೆರೆದು
ಮೋಡದೊಂದು ಕಿಟಕಿ ಮುಚ್ಚಿದ
ಕತ್ತಲಿನ ಮೆಟ್ಟಿಲುಗಳು ಜಾರಿ ಹೋದವು..
ಆಕಾಶದ ಹಣೆಯ ಮೇಲೆ
ಅದೇಕೋ ಬೆವರಿನ ಝರಿ
ನಕ್ಷತ್ರಗಳ ಬಟನ್ ಬಿಚ್ಚಿ
ಅವನು ಚಂದ್ರನ ಶರ್ಟ ಕಳಚಿದ…
ನಾನು ಮನಸಿನ ಮೂಲೆಯಲ್ಲಿ ಕುಳಿತಿದ್ದೇನೆ

ನಿನ್ನ ನೆನಪು..
ಹಸಿ ಕಟ್ಟಿಗೆಯಿಂದ
ಗಾಢವಾದ ಕಟು ಹೊಗೆಯೆದ್ದಂತೆ..
ಸಾವಿರಾರು ಕಲ್ಪನೆಗಳು
ಒಣಗಿದ ಕಟ್ಟಿಗೆಯಿಂದ
ಬೆಂಕಿ ನಿಟ್ಟುಸಿರು ಬಿಟ್ಟಂತೆ
ಎರಡೂ ಕಟ್ಟಿಗೆಗಳನ್ನು ಈಗಷ್ಟೇ ಆರಿಸಿದೆ..
ವರ್ಷಗಳು ಇದ್ದಿಲಿನ ಹಾಗೆ ಹರಡಿಕೊಂಡಿವೆ
ಕೆಲವು ಆರಿಹೋಗಿವೆ ಮತ್ತೆ ಕೆಲವು ಇನ್ನೂ ಆರದೆ ಉಳಿದಿವೆ
ಸಮಯದ ಕೈ ಹಿಡಿದೆ
ಪಾದಗಳಲ್ಲಿ ಗುಳ್ಳೆಗಳೆದ್ದವು…
ನಿನ್ನ ಪ್ರೀತಿಯ ಕೈಯಿಂದ ಜಾರಿದೆ
ಬದುಕಿನ ಬೆನ್ನಮೂಳೆ ಮುರಿಯಿತು
ಇತಿಹಾಸದ ಅತಿಥಿ
ನನ್ನ ಮನೆಯಿಂದ ಹಸಿದ ಹೊಟ್ಟೆಯಲ್ಲೇ ತೆರಳಿದ..
೨. ಒಂದು ಭೇಟಿ
ಹಲವು ವರ್ಷಗಳ ನಂತರ
ಒಂದು ಆಕಸ್ಮಿಕ ಭೇಟಿ..
ಇಬ್ಬರೂ ಕಂಪಿಸಿದೆವು ಕವಿತೆಯಂತೆ..
ಎದುರಿಗೆ ಒಂದಿಡೀ ರಾತ್ರಿಯಿತ್ತು
ಆದರೆ ಅರ್ಧ ಕವಿತೆ
ಕೋಣೆಯ ಒಂದು ಮೂಲೆಯಲ್ಲಿ ಮುದುರಿ ಕುಳಿತಿತ್ತು
ಇನ್ನರ್ಧ ಕವಿತೆ
ಮತ್ತೊಂದು ಮೂಲೆಯಲ್ಲಿತ್ತು..
ಮತ್ತೆ ಬೆಳಗು
ನಾವಿಬ್ಬರೂ ಹರಿದ ಕಾಗದದ
ತುಂಡುಗಳಂತೆ ಸೇರಿದೆವು
ನಾನವನ ಕೈ ಹಿಡಿದೆ
ಅವನು ನನ್ನ ತೋಳು ಬಳಸಿದ
ಇಬ್ಬರೂ
ನಕ್ಕೆವು
ಕಾಗದವನ್ನು ತಣ್ಣಗಿನ ಮೇಜಿನ ಮೇಲಿಟ್ಟು
ಆ ಇಡೀ ಕವಿತೆಯ ಮೇಲೆ
ಗೀಟೆಳೆದವು
** ಅಮೃತಾ ಪ್ರೀತಂ ಕವಿತೆಗಳ ಅನುವಾದ







translation from what?
ಅಮೃತಾ ಪ್ರೀತಂ ಅವರ 37 ಕವಿತೆಗಳನ್ನು ‘ಸುನೇರಿ’ ಎಂಬ ಹೆಸರಿನಲ್ಲಿ ಹಾ ಮಾ ನಾಯಕ್ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.[ ಐ ಬಿ ಎಚ್ ಪ್ರಕಾಶನ ೧೯೮೬]. ಇಲ್ಲಿರುವ ‘ಒಂದು ಭೇಟಿ ‘ ಕವಿತೆಯನ್ನು ಹಾ ಮಾ ನಾಯಕ್ ಹೀಗೆ ಅನುವಾದಿಸಿದ್ದಾರೆ.[ ಹಿಂದಿ ಮತ್ತು ಇಂಗ್ಲಿಶ್ ಅನುವಾದಗಳನ್ನು ಆಧರಿಸಿ,ಮೂಲ ಪಂಜಾಬಿ ಕವಿತೆಗಳನ್ನು ಓದಿಸಿ ಕೇಳಿದ್ದರಂತೆ ]
ಎಷ್ಟೋ ವರ್ಷಗಳ ಮೇಲೆ
ಅಚಾನಕವಾದ ಭೇಟಿ
ನಮ್ಮಿಬ್ಬರ ಜೀವಗಳು
ಕಂಪಿಸಿದವು ಕವಿತೆಯಂತೆ!
ರಾತ್ರಿ ಎದುರಿಗಿತ್ತು
ಕವಿತೆಯ ಭಾಗ ಕುಳಿತಿತ್ತು.
ಉಳಿದದ್ದು ಇನ್ನೆಲ್ಲೋ ಇತ್ತು.
ಮತ್ತೆ ಬೆಳಗಾದಾಗ
ಕಾಗದದ ತುಂಡುಗಳಂತೆ
ನಾವು ಸಂಧಿಸಿದೆವು.
ನಾನವನ ಕೈ ಹಿಡಿದೆ.
ತೋಳನ್ನು ಹಿಡಿದನವ.
ಮನತುಂಬಿ ನಕ್ಕೆವು .
ಕ್ರೂರ ನಿಶ್ಚಯದಿಂದ
ಕವಿತೆಯನ್ನು ಕತ್ತರಿಸಿದೆವು.