ಅಪ್ಪ
– ತಿರುಪತಿ ಭಂಗಿ

ಅಪ್ಪ ಅಂದರೆ
ಅವ್ವನಿಗೆ ಗಂಡ
ಅಜ್ಜ ಅಜ್ಜಿಗೆ ಮಗ
ನನಗೆ ಹುಟ್ಟುಕೊಟ್ಟವ
ಅಷ್ಟೇ ಅಲ್ಲ.
ಅಪ್ಪ ಅಂದರೆ
ಆಕಾಶದ ಆಗಾದ ಆಕಾರ
ಬಿರುಗಾಳಿಯ ಬಿರುಸು
ಹೆಬ್ಬಂಡೆಯ ಗಟ್ಟಿ ಮನಸು.
ಅಪ್ಪ ಅಂದರೆ
ದ್ವೈತ ಅದ್ವೈತಗಳ ಸಾಕಾರ
ಸತ್ಯ ಮಿತ್ಯ ಬೆಳಕು
ಅಜ್ಞಾನದ ಅಳಿವು
ಸುಜ್ಞಾನದ ತಿಳಿವು.
ಅಪ್ಪ ಅಂದರೆ
ಅಲ್ಲಮನ ಅನುಭವದ ಅಮೃತ
ಬಸವನ ವಚನಗಳ ಸಾರ
ಗಾಂಧಿಯ ಸತ್ಯ ಅಹಿಂಸೆಯ ದಾಖಲೆ
ಬುದ್ದನ ನಗುವಿನ ಕುರುವು
ಏಸುವಿನ ಸಹನೆಯ ಕನ್ನಡಿ.
ಅಪ್ಪ ಅಂದರೆ
ಕಾಳಿದಾಸನ ಕಲ್ಪನೆ
ಪುರಂದರ ದಾಸರ ಕೀರ್ತನೆಯ ಗುನುಗು
ಅಪ್ಪ ಅಂದರೆ
ಸೃಷ್ಟಿಕತೃ ಭಗವಂತನ ಪ್ರತಿರೂಪ.






very nice poem..
ಭಾವಪೂರ್ಣ ಸಾಲುಗಳು.. ತು೦ಬ ಚೆನ್ನಾಗಿವೆ..
nice…
nice one
Dhanyavadaglu, yallarigu