ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪುನ್ನಲ್ಲ, ಅಮ್ಮುನ್ನಲ್ಲ ನಾಯಿ ಸಾಕೋರ್ ಬಂದ್ರು…

ದಾರಿ ಬಿಡಿ

ಸಿ ವಿ ಶೇಷಾದ್ರಿ ಹೊಳವನಹಳ್ಳಿ

 

ಹೂ ಬಿಡಲ್ಲ ಹಣ್ಣು ಬಿಡಲ್ಲ.

ಶೋಕಿ ಗಿಡಕ್ಕೆ ನೀರು ಹಾಕೋರ್ ಬಂದ್ರು.

ಅಪ್ಪುನ್ನಲ್ಲ, ಅಮ್ಮುನ್ನಲ್ಲ

ನಾಯಿ ಸಾಕೋರ್ ಬಂದ್ರು.

ಫೇಲಾದ ಪೈಲ್ವಾನ್ರ್ರು.

ಪಾಸಾದ ಪುಕ್ಕುಲ್ರು ಬಂದ್ರು.

ಬಡಗಿ ಬಂದಅಡಿಗೆ ಮಾಡೋಕೆ.

ನರಿ ಬಂತು ನ್ಯಾಯ ಹೇಳೋಕೆ.

ನಂಬುಸ್ಬುಟ್ಟು ನಾಮ ಹಚ್ಚೋರು ಬಂದ್ರು.

ಮಂಗಳಾರ್ತಿಲಿ ಬೀಡಿ ಹಚ್ಚೋರು ಬಂದ್ರು.

ಸುತ್ತಿಗೆನಕಮ್ಮಾರ ಪಾಕುದ್ಕಡ್ಲೆಯವನಿಗೆ ಹಾಕೋಕೆ ಬಂದ.

ಕಸಬುದಾರ ಸಂಗೀತಗಾರ ವಾದ್ಯನಒತ್ತೆಇಡೋಕೆ ಬಂದ.

ಸಾವ್ರಾರ್ಆಪಾದ್ನೆ ಹೊತ್ತಈರೋ

ಜಪ ಮಾಡ್ತಾಅವ್ನೆಜೈಲ್ನಲ್ಲಿ .

ಮ್ಯಾಲ್ ಮ್ಯಾಲ್ ಬಿದ್ದುಅವುನ್

ಸಿನ್ಮಾಕೆ ನಿಂತ್ಕೋಬೇಕುಕ್ಯೂನಲ್ಲಿ

ದುಡ್ಗೋಸ್ಕರಒಪ್ಪಂದ ಮಾಡ್ಕೊಂಡು

ಔಟಾಗ್ತಾಅವ್ರೆಆಟಗಾರ್ರು.

ಆಟ ನೋಡ್ಬೇಕು ನಾವೆಲ್ರು.

ಯುದ್ಧದ ಸಮಯದಲ್ಲಿ ಮಾತ್ರ

ಸೈನಿಕರನ್ನು ಮಾತಾಡ್ಸೋರಾಜರು ಬಂದ್ರು.

ಬೂದಿಯಾಗುವ ಹಾಳೆ ಬಗ್ಗೆ ಮಾತ್ರ

ಮಾತಾಡೋ ಮೇಷ್ಟ್ರು ಬಂದ್ರು.

ಸುಟ್ಟು ಹೋದಊರಿಗೆ

ಅಗ್ನಿ ಶಾಮಕ ದಳದವರು ಬತ್ತಾಅವ್ರೆ

ಆಗಲೇ ಊರು ಬಿಟ್ಟರುಜನ.

ಪೋಲೀಸರು ಈಗ ಬತ್ತಾಅವ್ರೆ

ಇನ್ನೇನು ಬೆಟ್ಟದಲ್ಲಿಉಕ್ಕಲಿದೆಜ್ವಾಲಾಮುಖಿ.

ಅದಕ್ಕೆದಾರಿ ಮಾಡೋಕೆ

ಲೋಕೋಪಯೋಗಿಯವರು ಬತ್ತಾಅವ್ರೆ

ವೈದ್ಯರುಆಂಬುಲೆನ್ಸ್ನಲ್ಲಿ

ತೀರ್ಥಯಾತ್ರೆಗೆ ಹೊರಟವ್ರೆ.

ಮಕ್ಕಳ ಆಟದ ಸಾಮಾನು ಸುಟ್ಟು

ಸ್ನಾನ ಮಾಡೋರುಬತ್ತಾಅವ್ರೆ

ಮಲದಲ್ಲಿ ಬೋಂಡಕರಿಯೋರು,

ಹೆಣದ ಬಟ್ಟೆ ಇಸ್ತ್ರಿ ಮಾಡಿ ಮಾರೊರು ಬತ್ತಾಅವ್ರೆ

ತಾವೇ ಸಿಂಗರಿಸಿದ ತೇರೆಳೆಯಕ್ಕೆ

ಗೇಲಿ ಮಾಡ್ಕೊಂಡು ಗಾಲಿಗೆ ಸಿಗಕ್ಕೆ ಜನಬತ್ತಾಅವ್ರೆ

ದಾರಿ ಬಿಡಿ ದಾರಿ ಬಿಡಿ.

 

‍ಲೇಖಕರು G

7 November, 2012

1 Comment

  1. Keshav

    Super! Brilliant!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading