ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪಣೆಗಳ ಕಾಯುವುದಿಲ್ಲ, ಒಪ್ಪಿಗೆಗಳ ನಿರೀಕ್ಷಿಸುವುದಿಲ್ಲ …

ಹಕ್ಕಿಯೊಳಗೊಬ್ಬ ಸಂಗಾತಿ

ತರಬೇನಳ್ಳಿ ಷಡಕ್ಷರಿ

 
ಹಾರುವ ಹಕ್ಕಿಗೆ,
ಯಾರ ಹಂಗಿಲ್ಲ.
ಅಪ್ಪಣೆಗಳ ಕಾಯುವುದಿಲ್ಲ,
ಒಪ್ಪಿಗೆಗಳ ನಿರೀಕ್ಷಿಸುವುದಿಲ್ಲ,
ಹಾರಲಿರುವ ದಾರಿಯೊಂದೇ;
ಸಂಗಾತಿ.
ಕಾಲಗಳ ಕೊರಗಿಲ್ಲ.
ಬಿಸಿಲಾದರೇನು,
ಮಳೆಯಾದರೇನು,
ಚಳಿಯಾದರೇನು;
ಎಲ್ಲ ಕಾಲಗಳ ನಡುವೆ,
ತಾ ಹಾರುವುದ,
ಮಾತ್ರ ಬಿಡುವುದಿಲ್ಲ.

ಕ್ಷಣ ಕ್ಷಣಕ್ಕೂ ಸುಖಿಸುವ,
ಕಾಲವೊಂದೇ ಸಂಗಾತಿ
ಜಂಗಮ, ಸ್ಥಾವರಗಳ
ಗೊಂದಲವಿಲ್ಲ.
ಬೆಳಗು ಹಾರಿದ್ದೇ,ಜಂಗಮ.
ರಾತ್ರಿ ತಂಗಿದ್ದೇ, ಸ್ಥಾವರ.
ಹಗಲು ರಾತ್ರಿಗಳ,
ನಡುವೆ ಕೆಲಕಾಲ,
ನೆಲೆನಿಂತ ಗೂಡೊಂದೇ;
ಸಂಗಾತಿ.
ತಾ ಸಂಗ ಮಾಡಿದ,
ಸಂಗಾತಿಗಳ ನೆನಪಿಡಬೇಕಿಲ್ಲ.
ಸಂಗಕ್ಕೆ ಹುಟ್ಟಿದ ಮಕ್ಕಳು ಮರಿಗಳ,
ಲೆಖ್ಖ ಕೊಡಬೇಕಿಲ್ಲ.
ಲೆಖ್ಖ ತಪ್ಪಿದರೂ,
ಚಿತ್ರಗುಪ್ತನ ಮುಂದೆ ಕೈಕಟ್ಟ ಬೇಕಿಲ್ಲ.
ಪ್ರಾಯದ ಚಿತ್ತದಿ ಹುಟ್ಟಿದ,
ಪಾಪದ ಸೋಂಕಿಲ್ಲದ,
ಪ್ರಜ್ನೆಯೇ ಸಂಗಾತಿ.
ಸಂಸಾರ ಸಂಭಂದಗಳ,
ಭಂದನವಿಲ್ಲ.
ಕಾಳು ಕಡ್ಡಿ ಕೂಡಿಡಬೇಕಿಲ್ಲ,
ನೀರು ನಿಡಿ ಹೊಂಚಬೇಕಿಲ್ಲ,
ಹಿಂದೆ ಮುಂದೆ ಹುಟ್ಟಿದವರ,
ಸಂಭಂದ ಹಿಡಿದಿಟ್ಟುಕೊಳ್ಳಬೇಕಿಲ್ಲ.
ಎಲ್ಲ ಬಂಧಮುಕ್ತಿಯ
ವೈರಾಗ್ಯವೇ ಸಂಗಾತಿ.
(~ರಿ…. ಶಕ್ತಿ…)
 
 

‍ಲೇಖಕರು avadhi

18 October, 2013

2 Comments

  1. mmshaik

    nice..tumba chennaagide.

    • Anonymous

      thanks MMSHAIK…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading