ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಪಾರ' ಕಿಕ್

ಅಪಾರ 

ಎಷ್ಟು ಸಲ ಕೂಡಿದರೂ
ಮನಸದೇಕೊ ಕಳೆದಿದೆ
ಆಸೆಗಳನು ಬಾಗಿಸಲೊಲ್ಲದೆ
ನೋವ ಹಾಡ ಗುಣುಗುಣಿಸಿದೆ
ತಾಳೆಯಾಗುತಿಲ್ಲವೀ ಲೆಕ್ಕ
ನೀನು ಯಾಕಿಲ್ಲ ಪಕ್ಕ?

ಇವಳ ಮುನಿಸೇ ವಿಚಿತ್ರ
ಕೊಂಚ ಹೊತ್ತು ದೃಷ್ಟಿಯುದ್ಧ
ಬಳಿಕ ಕೈ ಕೈ ಮಿಲಾಯಿಸುವ ಹಂತ ತಲುಪಿ
………………
ಹೋಗಲಿ ಬಿಡಿ ಇವಳು ವಿಚಿತ್ರ
ಕಾಲು ಕೆರೆದುಕೊಂಡು ಪ್ರೀತಿಗೆ ಬರುವಳು….

ಅವಳಲೂ ದುಃಖವಿದೆ
ನನ್ನಲೂ ದುಃಖವಿದೆ
ಎಷ್ಟು ಕಾಲ ಉಳಿವುದೋ ಹೃದಯ
ಯಾರ ಬಳಿ ಲೆಕ್ಕವಿದೆ?
ನೂರು ಚಂಡಮಾರುತ
ಒಂದು ಪುಟ್ಟ ದೋಣಿಗೆ
ಹೋಗೋಣ ಎಂದರೂ
ಹೋಗುವುದು ಎಲ್ಲಿಗೆ?
( ಜಾಯೆ ತೊ ಜಾಯೆ ಕಹಾ ಹಾಡಿನ ಮನಸೊಇಚ್ಚೆ ಅನುವಾದ!)

ಕಾಲದಾ ಕೈಯಲಿ ಜೀವನ ಬಂಧಿಯು
ತಪ್ಪಿಸೀಕೊಂಡ ಕೆಲ ಗಳಿಗೆ ಇವು ಚಂದವು
ಈಗಿದನ್ನು ಕೈ ಬಿಟ್ಟು ಗೆಳೆಯಾ…
ಬದುಕಿಡೀ.. ಕೊರಗೋದು ಸರಿಯಾ?
ಆಜ್‌ ಜಾನೆ ಕಿ ಜಿದ್‌ ನಾ ಕರೋ..
ಯೂಹಿ ಪೆಹಲೂ ಮೇ ಬೈಟೆ ರಹೊ..

‍ಲೇಖಕರು avadhi

4 June, 2017

1 Comment

  1. Anil

    Beautiful

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading