ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪಾರ ಕವಿತೆ: ವಿಚಿತ್ರ-ಕೂಟ!

ಅಪಾರ

1
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ

2
ಬಟನ್‌ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ
 
3
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ
 
4
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ
 

‍ಲೇಖಕರು G

24 April, 2013

9 Comments

  1. Gopaal Wajapeyi

    ಇವನ್ನು ‘ಗಜಲ್’ ಎನ್ನಬೇಕೋ ‘ಪಜಲ್’ ಎನ್ನಬೇಕೋ ಎಂಬ ಗೊಂದಲ ನನ್ನದು. ‘ಚೌಂಕ್’ಗೊಳಿಸುವಂಥ ಚೌಪದಿಗಳು… 🙂

  2. vividyashankar harapanahalli

    ವಾವ್! ಓದಿದ ಮೇಲೆ ನನಗೆ ಎಲ್ಲಾ ನೆನಾಪಾಗುತ್ತಿದೆ… ಅವಳ ನೊಟ… ಮೈಮಾಟ… ನಮ್ಮ ಕೂಟ… ದುಷ್ಟ ಕೈಗಳ ಅದೃಷ್ಟ!

  3. ಅಶೋಕ ಶೆಟ್ಟರ್

    ಮುದ್ದಾಗಿವೆ ಈ ಪದ್ಯಗಳು…

    • Vidyashankar

      ಮುದ್ದಾಗಿವೆ ಆದರೆ ಅವಳಷ್ಟಲ್ಲ ಎಂಬುದೇ ನನ್ನ ಕಂಪ್ಲೇಂಟುಊಊ

      • ಅಶೋಕ ಶೆಟ್ಟರ್

        ಹಾ ಹಾ, ನಿಮ್ಮ ನಿರೀಕ್ಷೆ ಅತಿಯಾಯ್ತು ವಿದ್ಯಾಶಂಕರ್..:)

  4. chalam

    ಕೂಟದ ಒಂದು ವಿವರವೂ ನೆನಪಾಗುತಿಲ್ಲ…..ತುಂಬಾ ತುಂಟ ಸಾಲುಗಳು…ಇಷ್ಟವಾದವು.ನಿಮ್ಮ ಚಿತ್ರಗಳಂತೆ

  5. apara

    thankyu all

  6. Sharada.m

    nice prema honeys

  7. Sumangala

    ಅನ್ ಲಿಮಿಟೆಡ್ ಅಪಾರ ಅವರೇ… ಮೊನ್ನೆಯ ವಿಷಾದಗೀತೆಯ ದಣಿದ ಸಾಲುಗಳ ನಂತರ ನಿಮ್ಮ ಈ ಅಗದಿ ಭಯಂಕರ ರೋಮ್ಯಾಂಟಿಕ್ ಸಾಲುಗಳನ್ನು ಓದಿ ನಿಜಕ್ಕೂ ಖುಷಿಯಾಯ್ತು, ಹೀಗೆ ನೀವು ಒದ್ದೆಯಾಗುವ, ಕಣ್ಣ ಹೊಳಪು ಅಡಗಿಸಲೆತ್ನಿಸುವ, ಮೈಮರೆಯುವ ಮತ್ತು ಇತ್ಯಾದಿ ಇತ್ಯಾದಿ (…!!) ಕ್ಷಣಗಳು ಮತ್ತೆ ಮತ್ತೆ ತಮಗೆ ಒದಗಿ ಬರಲಿ, ನಮಗೆ ಆ ಸಾಲುಗಳನ್ನು ಓದುವ ಖುಷಿ ಒದಗಿ ಬರಲಿ ಮತ್ತು ಈ ಹಿಂದಿನ ವಿಷಾದಗೀತೆಗಳನ್ನು ಖರೇ ಖರೇ ದಣಿದ, ಬದುಕಿನಲ್ಲಿ ‘ರಗಡ ಹೈರಾಣ’ ಆಗಿರುವ ನನ್ನಂಥವರಿಗೆ ಬಿಟ್ಟುಬಿಡಿ ಎಂದು ಸುಸ್ನೇಹದಿಂದ ಹಾರೈಸುತ್ತಾ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading